More

  ಶ್ರೀ ಮಂಗಳಾದೇವಿ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಆರಂಭ

  ಮಂಗಳೂರು: ಶ್ರೀ ಮಂಗಳಾದೇವಿ ಕ್ಷೇತ್ರದಲ್ಲಿ ಮಾ.28ರಿಂದ ಎ.2ರ ತನಕ ವರ್ಷಾವಧಿ ಜಾತ್ರೋತ್ಸವ ನಡೆಯಲಿದ್ದು, ಗುರುವಾರ ಧ್ವಜಾರೋಹಣ ಜರುಗಿತು.


  ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ, ಅನುವಂಶಿಕ ಮೊಕ್ತೇಸರ ಎಸ್. ಹರೀಶ್ ಐತಾಳ, ಪರ್ಯಾಯ ಪ್ರಧಾನ ಅರ್ಚಕ ಎನ್.ವಾಸುದೇವ ಐತಾಳ, ತಂತ್ರಿಗಳಾದ ಸುಬ್ರಹ್ಮಣ್ಯ ಐತಾಳ ಹಾಗೂ ಚಂದ್ರಶೇಖರ ಐತಾಳ, ಅನುವಂಶಿಕ ಅರ್ಚಕ ಮನೆತನದ ಹಿರಿಯರಾದ ಶ್ರೀನಿವಾಸ ಐತಾಳ, ಹರೀಶ್ ಐತಾಳ, ರಾಮಚಂದ್ರ ಐತಾಳ, ವೆಂಕಟೇಶ ಐತಾಳ, ಗುರುಪ್ರಸಾದ ಐತಾಳ, ಕ್ಷೇತ್ರ ದ ಸಿಬಂದಿಗಳಾದ ರಂಜಿತ್ ಗುಜರನ್ ಮೊದಲಾದವರಿದ್ದರು.


  ಮಾ.29ರಂದು ಪ್ರಾತಃಕಾಲ ಪೂಜೆ, ನವಕ ಕಲಶಾಭಿಷೇಕ, 108 ಕಾಯಿ ಗಣಹೋಮ, ಸಂಜೆ ಬಯನ ಬಲಿ, ಭೂತ ಬಲಿ ನಡೆಯಲಿದೆ. 30ರಂದು ಪ್ರಾತಃಕಾಲ ಪೂಜೆ, ಗಣಪತಿ ಹೋಮ, ನವಕ ಕಲಶಾಭಿಷೇಕ, ಸಂಜೆ 6.30ಕ್ಕೆ ಬಯನ ಬಲಿ, ಭೂತ ಬಲಿ, ಮಾ.31ರಂದು ಪ್ರಾತಃಕಾಲ ಪೂಜೆ, ಗಣಪತಿ ಹೋಮ, ನವಕ ಕಲಶಾಭಿಷೇಕ, ಚಂಡಿಕಾ ಹೋಮ, ಸಂಜೆ 6.30ರಿಂದ ಬಯನ ಬಲಿ, ಭೂತಬಲಿ ನಡೆಯಲಿದೆ.


  ಎ.1ರಂದು ಪ್ರಾತಃಕಾಲ ಪೂಜೆ, ಗಣಪತಿ ಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಪೂಜೆಯಾಗಿ ರಥಾರೋಹಣ, ಸಂಜೆ ತ ಕ್ಕೆ ರಥೋತ್ಸವ, ಬಲಿ, ಮಹಾಪೂಜೆ, ಶ್ರೀಭೂತಬಲಿ, ಕವಾಟ ಬಂಧನ, ಶಯನ ಜರುಗಲಿದೆ. ಎ.2ರಂದು ಬೆಳಗ್ಗೆ ಸೂರ್ಯೋದಯದ ಕವಾಟೋದ್ಘಾಟನೆ, ಅಭಿಷೇಕ ಪೂಜೆ, ಅಷ್ಟಾವದಾನ, ತೀರ್ಥ ಪ್ರಸಾದ, ಬಲಿ, ತುಲಾಭಾರ, ಅನ್ನದಾನ ಸೇವೆ, ಸಂಜೆ 7ಕ್ಕೆ ಬಲಿ ಹೊರಟು ಅವಬೃಥ ಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ ಜರುಗಲಿದೆ. ಎ.3ರಂದು ಸಂಪ್ರೋಕ್ಷಣೆ, ರಾತ್ರಿ 8.30ರಿಂದ ಶ್ರೀ ಕ್ಷೇತ್ರದ ಪರಿವಾರ ದೈವಗಳ ನೇಮ ನಡೆಯಲಿದೆ. ಪ್ರತಿ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


  ಶ್ರೀ ದೇವಿಯ ಶಯನಕ್ಕೆ ಮಲ್ಲಿಗೆ ಹೂವನ್ನು ತಂದು ಕೊಡುವವರು ಏ. 1ರಂದು ಸಂಜೆಯೊಳಗೆ ದೇವಳದ ಕಚೇರಿಗೆ ತಂಡು ಕೊಡಬೇಕು. ಏ. 2ರಂ ದು 9.30ಕ್ಕೆ ಹರಕೆ ತುಲಾಭಾರ ಸೇವೆ ನಡೆಯಲಿದೆ. ಮಾ.29ರಂದು ಮತ್ತು 30ರಂದು ಬೆಳಗ್ಗೆ 9.30ರಿಂದ 1ರ ವರೆಗೆ ಸೀರೆಗಳ ಹರಾಜು ನಡೆಯಲಿ ದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts