More

    ವಿದ್ಯೆಯ ಜೊತೆ ಸಂಸ್ಕಾರ ಇದ್ದರೆ ಜೀವನ ಸಾರ್ಥಕ; ಸರ್ಪಭೂಷಣ ಶ್ರೀಗಳು

    ಬೆಂಗಳೂರು: ವಿದ್ಯೆಯ ಜೊತೆಗೆ ಸಂಸ್ಕಾರ ಇದ್ದರೆ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಸರ್ಪಭೂಷಣ ಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ಈಶ್ವರ ಸೇವಾ ಮಂಡಲಿಯ 80ರ ಸಂಭ್ರಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಔಪಚಾರಿಕ ಶಿಕ್ಷಣದಿಂದ ಬೌತಿಕ ಜೀವನ ಸುಧಾರಣೆಯಾದರೆ; ಸಂಸ್ಕಾರದಿಂದ ಆಧ್ಯಾತ್ಮಿಕ ಜೀವನ ಉನ್ನತಿಯನ್ನು ಕಾಣುತ್ತದೆ. ಇದರಿಂದ ಆತ್ಮಜ್ಞಾನದ ಅರಿವು ಉಂಟಾಗಿ ಸಮಾಜದಲ್ಲಿ ಸೇವಾ ಮನೋಭಾವ ವೃದ್ಧಿಯಾಗುತ್ತದೆ. ಅಂತಹ ಸಂಸ್ಕಾರಯುಕ್ತ ಜೀವನಕ್ಕೆ ಚನ್ನಬಸವರಾಧ್ಯರು ಸಾಕ್ಷಿಯಾಗಿದ್ದಾರೆ. ತಮ್ಮ ಜೀವಿತದ ಬಹುಪಾಲು ದಾನ-ಧರ್ಮಗಳಿಗೆ ಮೀಸಲಿಟ್ಟಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

    ಕಾರ್ಯಕ್ರಮದಲ್ಲಿ 25 ಕ್ಕೂ ಹೆಚ್ಚು ಮಕ್ಕಳಿಗೆ ಶಿವದೀಕ್ಷೆ ನೀಡಲಾಯಿತು. ಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ 80 ವರ್ಷ ಮೇಲ್ಪಟ್ಟ ಸದಸ್ಯರಿಗೆ ಸನ್ಮಾನ ಮಾಡಲಾಯಿತು. ಈಶ್ವರ ಸೇವಾ ಮಂಡಲಿಯಲ್ಲಿ ನೂತನ ಸಭಾಂಗಣವನ್ನು ದೇಣಿಗೆಯಾಗಿ ಕಟ್ಟಿಸಿಕೊಟ್ಟ ಚನ್ನಬಸವಾರಾಧ್ಯ ದಂಪತಿಗಳಿಗೆ ವಿಶೇಷ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯರಾದ ಎನ್.ಆರ್. ಪಂಡಿತಾರಾಧ್ಯರು, ಮಾಜಿ ಸಚಿವೆ ರಾಣಿ ಸತೀಶ್ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts