More

    ಬಾಂಗ್ಲಾದೇಶ ವಿರುದ್ಧ ವೈಟ್​ವಾಷ್​ನಿಂದ ಪಾರಾದ ಶ್ರೀಲಂಕಾ

    ಢಾಕಾ: ನಾಯಕ ಕುಸಲ್​ ಪೆರೇರಾ (120 ರನ್​, 122 ಎಸೆತ, 11 ಬೌಂಡರಿ, 1 ಸಿಕ್ಸರ್​) ಭರ್ಜರಿ ಶತಕ ಮತ್ತು ವೇಗಿ ದುಶ್ಮಂಥ ಚಮೀರ (16ಕ್ಕೆ 5) ಮಾರಕ ಬೌಲಿಂಗ್​ ದಾಳಿಯ ನೆರವಿನಿಂದ ಶ್ರೀಲಂಕಾ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡವನ್ನು 97 ರನ್​ಗಳಿಂದ ಸೋಲಿಸಿದೆ. ಈ ಮೂಲಕ ಲಂಕಾ ಸರಣಿ ಸೋಲಿನ ಅಂತರವನ್ನು 1&2ಕ್ಕೆ ಇಳಿಸಿಕೊಂಡು ವೈಟ್​ವಾಷ್​ನಿಂದ ಪಾರಾಯಿತು. ಜತೆಗೆ ಐಸಿಸಿ ಏಕದಿನ ವಿಶ್ವಕಪ್​ ಸೂಪರ್​ ಲೀಗ್​ನಲ್ಲಿ ಅಂಕ ಮತ್ತು ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು.

    ಶೇರ್​ ಬಾಂಗ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಲಂಕಾ, 6 ವಿಕೆಟ್​ಗೆ 286 ರನ್​ ಪೇರಿಸಿತು. ಪ್ರತಿಯಾಗಿ ಬಾಂಗ್ಲಾದೇಶ ತಂಡ 42.3 ಓವರ್​ಗಳಲ್ಲಿ 189 ರನ್​ಗೆ ಆಲೌಟ್​ ಆಯಿತು. ಪಂದ್ಯದಲ್ಲಿ ಶ್ರೀಲಂಕಾ ಪರ ಮೂವರು ಆಟಗಾರರು (ಬಿನುರಾ ಪೆರ್ನಾಂಡೊ, ಚಮಿಕಾ ಕರುಣರತ್ನೆ ಮತ್ತು ರಮೇಶ್​ ಮೆಂಡಿಸ್​) ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

    ಇದನ್ನೂ ಓದಿ: ಐಪಿಎಲ್​ನಿಂದ ಹೊರ ನಡೆಯುವ ಮುನ್ನ 8-9 ದಿನ ನಿದ್ದೆ ಮಾಡಿರಲಿಲ್ಲ ಅಶ್ವಿನ್​!

    ಶ್ರೀಲಂಕಾ: 6 ವಿಕೆಟ್​ಗೆ 286 (ಗುಣತಿಲಕ 39, ಕುಸಲ್​ ಪೆರೇರಾ 120, ಧನಂಜಯ ಡಿಸಿಲ್ವ 55, ಟಸ್ಕಿನ್​ ಅಹ್ಮದ್​ 46ಕ್ಕೆ 4), ಬಾಂಗ್ಲಾದೇಶ: 42.3 ಓವರ್​ಗಳಲ್ಲಿ 189 (ತಮೀಮ್​ 17, ಶಕೀಬ್​ 4, ಮುಶ್ಫಿಕರ್​ ರಹೀಂ 28, ಮೊಸದೆಕ್​ ಹುಸೇನ್​ 51, ಮಹಮದುಲ್ಲಾ 53, ದುಶ್ಮಂಥ ಚಮೀರ 16ಕ್ಕೆ 5, ಹಸರಂಗ 47ಕ್ಕೆ 2, ರಮೇಶ್​ ಮೆಂಡಿಸ್​ 40ಕ್ಕೆ 2).

    ಹಾಟ್ ಫೋಟೋಗಳ ಮೂಲಕ ಭರ್ಜರಿ ಸೌಂಡ್ ಮಾಡುತ್ತಿದ್ದಾರೆ ವಿಂಡೀಸ್ ಕ್ರಿಕೆಟಿಗನ ಪತ್ನಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts