More

    ಸೆಮೀಸ್ ಆಸೆ ಜೀವಂತವಿರಿಸಲು ಇಂದು ಲಂಕಾ-ಅಫ್ಘನ್ ಹೋರಾಟ: ಲಂಕನ್ನರಿಗೆ ಗಾಯದ ಬರೆ

    ಪುಣೆ: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿ ಬೀಗುತ್ತಿರುವ ತಂಡಗಳಾದ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ, ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸೋಮವಾರ ಪರಸ್ಪರ ಎದುರಾಗಲಿವೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿರುವ ಉಭಯ ತಂಡಗಳು ಸೆಮಿೈನಲ್ ರೇಸ್‌ನಲ್ಲಿ ಉಳಿಯಲು ಗೆಲ್ಲಲೇಬೇಕಾದ ಒತ್ತಡದೊಂದಿಗೆ ಕಣಕ್ಕಿಳಿಯಲಿವೆ.
    ಸತತ 3 ಸೋಲುಗಳ ಬಳಿಕ ಗೆಲುವಿನ ಹಳಿ ಏರಿರುವ ಶ್ರೀಲಂಕಾಕ್ಕೆ ಆಟಗಾರರ ಗಾಯದ ಸಮಸ್ಯೆ ತಂಡ ಸಂಯೋಜನೆಯಲ್ಲಿ ಹಿನ್ನಡೆ ತಂದಿದೆ. ಅನುಭವಿ ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್ ಮರಳುವಿಕೆ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಿದೆ. ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ದಿಲ್ಶಾನ್ ಮಧುಶಂಕ ಮತ್ತು ಕುಸನ್ ರಜಿತಾ ಟೂರ್ನಿಯಲ್ಲಿ ಇದುವರೆಗೆ ಕ್ರಮವಾಗಿ 11 ಮತ್ತು 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ಮಹೀಶ್ ತೀಕ್ಷಣ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಲರಾಗಿದ್ದಾರೆ.
    ಇತ್ತ ಇಂಗ್ಲೆಂಡ್ ಹಾಗೂ ಪಾಕಿಸ್ತಾನವನ್ನು ಮಣಿಸಿ ಆ್ಘನ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಪಾಕ್ ವಿರುದ್ಧ ದಿಟ್ಟ ಚೇಸಿಂಗ್ ನಡೆಸಿದ ಆ್ಘನ್ ಪರ ರಹಮಾನುಲ್ಲಾ ಗುರ್ಬಜ್, ಇಬ್ರಾಹಿಂ ಜದ್ರಾನ್, ರಹಮತ್ ಷಾ ಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲಂಕಾ ವಿರುದ್ಧ ಅದೇ ಪ್ರದರ್ಶನ ಪುನರಾವರ್ತಿಸುವ ತವಕದಲ್ಲಿದ್ದಾರೆ.

    ಗಾಯಾಳು ಲಹಿರು ಬದಲಿಗೆ ಚಮೀರಾ
    ಮಾಡು ಇಲ್ಲವೆ ಮಡಿ ಎನಿಸಿರುವ ಆ್ಘನ್ ವಿರುದ್ಧ ಪಂದ್ಯಕ್ಕೂ ಮುನ್ನ ಲಂಕಾಗೆ ಮತ್ತೊಂದು ಗಾಯದ ಹೊಡೆತ ಬಿದ್ದಿದೆ. ಕಳೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವೇಗಿ ಲಹಿರು ಕುಮಾರ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಅನುಭವಿ ದುಶ್ಮಂತ್ ಚಮೀರಾ ಆಯ್ಕೆಯಾಗಿದ್ದಾರೆ. ವಿಶ್ವಕಪ್ ಟೂರ್ನಿ ಆರಂಭದ ಬಳಿಕ ಲಂಕಾ ತಂಡದಲ್ಲಿ ಮೂರನೇ ಬದಲಾವಣೆ ಇದಾಗಿದೆ.

    ವಿಶ್ವಕಪ್ ಮುಖಾಮುಖಿ-2
    ಶ್ರೀಲಂಕಾ-2
    ಅ್ಘಾನಿಸ್ತಾನ-0

    ಏಕದಿನ ಮುಖಾಮುಖಿ-11
    ಲಂಕಾ-7
    ಅ್ಘಾನಿಸ್ತಾನ-3
    ರದ್ದು-1

    ಆರಂಭ: ಮಧ್ಯಾಹ್ನ 2
    ನೇರಪ್ರಸಾರ-ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts