More

    ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ: ಮಹತ್ವದ ಮಾಹಿತಿ ಕಲೆಹಾಕಿದ ಸಿಐಡಿ

    ಬೆಂಗಳೂರು: ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣದ ತನಿಖೆ ಚುರುಕು ಗೊಳಿಸಿರುವ ಸಿಐಡಿ, ಇತ್ತೀಚೆಗೆ ಬಂಧಿಸಿರುವ 10 ಮಂದಿಯನ್ನು ವಿಚಾರಣೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದೆ.

    ಬ್ಯಾಂಕ್​ನಿಂದ ಕೋಟ್ಯಂತರ ರೂ. ಸಾಲ ಪಡೆದು ಮರುಪಾವತಿಸದ ಈ ವ್ಯಕ್ತಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಸಿಐಡಿ, ಪಡೆದ ಸಾಲವನ್ನು ಯಾವ ವ್ಯವಹಾರಗಳಲ್ಲಿ ಹೂಡಿಕೆ ಮಾಡಲಾಗಿದೆ? ಅಕ್ರಮವಾಗಿ ಸಾಲ ಪಡೆಯಲು ಸಹಕರಿಸಿದವರ ಬಗ್ಗೆ ಮಾಹಿತಿ ಕಲೆ ಹಾಕಿ ಹೇಳಿಕೆ ದಾಖಲಿಸಿಕೊಂಡಿದೆ. ಆದರೆ, ಅವ್ಯವಹಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಆರೋಪಿಗಳ ಮನೆಯಲ್ಲಿ ಜಪ್ತಿ ಮಾಡಿದ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: PHOTOS|ಹಂದಿಯನ್ನು ಬೆತ್ತಲೆಯಾಗಿ ಬೆನ್ನಟ್ಟಿದ ವ್ಯಕ್ತಿ: ಹಳದಿ ಬಣ್ಣದ ಬ್ಯಾಗ್​ನಲ್ಲಿ ಅಂಥದ್ದೇನಿದೆ?

    ಬ್ಯಾಂಕ್​ನಿಂದ ಸಾಲ ಪಡೆದ 11 ಮಂದಿಗೆ ಸೇರಿದ 15 ಕಡೆ ಆ.4ರಂದು ಸಿಐಡಿ ದಾಳಿ ನಡೆಸಿತ್ತು. ನಂತರ 11 ಮಂದಿಯನ್ನು ಬಂಧಿಸಿ 10 ಜನರನ್ನು 5 ದಿನ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಕೋಟ್ಯಂತರ ರೂ. ಸಾಲ ಪಡೆದವರು: ಹರಿಕೃಷ್ಣ- 22.12 ಕೋಟಿ ರೂ., ಎಸ್.ಪಿ ಶ್ರೀಶ- 10.05 ಕೋಟಿ ರೂ., ಟಿ. ಕುಮರೇಶ್ ಬಾಬು- 39.03 ಕೋಟಿ ರೂ., ಎನ್. ಲೋಕೇಶ್-7.07 ಕೋಟಿ ರೂ., ಜಿ. ಪ್ರಸನ್ನಕುಮಾರ್ -6.06 ಕೋಟಿ ರೂ., ಎನ್. ವಿಜಯಸಿಂಹ -5 ಕೋಟಿ ರೂ., ಬಿ.ಎನ್. ವೆಂಕಟೇಶ್- 5 ಕೋಟಿ ರೂ. ಸಾಲ ಪಡೆದಿರುವುದು ತಿಳಿದುಬಂದಿದೆ. ಅಲ್ಲದೆ, ಬ್ಯಾಂಕ್​ನ ಅಧ್ಯಕ್ಷ ಕೆ. ರಾಮಕೃಷ್ಣ 78.80 ಕೋಟಿ ರೂ., ಜಿ. ಶ್ರೀನಿವಾಸನ್ ಎಂಬುವರು 56.56 ಕೋಟಿ ರೂ. ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಎರಡನೇ ವಿವಾಹವಾಗಿ ಪೇಚಿಗೆ ಸಿಲುಕಿದ ಮಹಿಳೆ

    ಸಾಲಗಾರರಿಗೆ ಸಿಐಡಿ ಭೀತಿ: ಮೊದಲ ಹಂತದಲ್ಲಿ ಸಾಲ ಪಡೆದು ಬ್ಯಾಂಕ್​ಗೆ ಸಾಲ ಮರು ಪಾವತಿಸದವರನ್ನು ವಿಚಾರಣೆ ನಡೆಸುತ್ತಿರುವ ಸಿಐಡಿ, ಸದ್ಯದಲ್ಲೇ ಇನ್ನಷ್ಟು ಜನರ ಮೇಲೆ ದಾಳಿ ನಡೆಸಿ ಬಂಧಿಸಲು ಸಿದ್ಧತೆ ನಡೆಸುತ್ತಿದೆ. 69 ಜನರ ಹೆಸರಿನಲ್ಲಿ 2,876 ಖಾತೆಗಳಿಗೆ 1,323 ಕೋಟಿ ರೂ. ಸಾಲ ವಿತರಿಸಿದ ಆರೋಪ ಬ್ಯಾಂಕ್ ಮೇಲಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಸಾಲ ಪಡೆದ ಹಲವು ಮಂದಿಗೆ ಇದೀಗ ಸಿಐಡಿ ನಡುಕ ಉಂಟಾಗಿದೆ.

    ಜಾಬ್​ ಪೋರ್ಟಲ್ ನಲ್ಲಿ ಉದ್ಯೋಗ ಹುಡುಕಾಟ: ಮತ್ತಿಕೆರೆಯ ಯುವತಿಗೆ 2 ಲಕ್ಷ ರೂ. ವಂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts