More

    ಜಾಬ್​ ಪೋರ್ಟಲ್ ನಲ್ಲಿ ಉದ್ಯೋಗ ಹುಡುಕಾಟ: ಮತ್ತಿಕೆರೆಯ ಯುವತಿಗೆ 2 ಲಕ್ಷ ರೂ. ವಂಚನೆ

    ಬೆಂಗಳೂರು: ಯುವತಿಗೆ ನೌಕರಿ ಕೊಡಿಸುವ ಆಮಿಷವೊಡ್ಡಿದ ಸೈಬರ್ ಕಳ್ಳರು 2 ಲಕ್ಷ ರೂ. ಪಡೆದು ವಂಚಿಸಿದ್ದಾರೆ. ಮತ್ತಿಕೆರೆಯ ಸ್ನೇಹಾ ಮೋಸಕ್ಕೆ ಒಳಗಾದ ಯುವತಿ. ಆನ್ಲೈನ್​ನಲ್ಲಿ ಉದ್ಯೋಗ ಬಯಸಿ ಅರ್ಜಿ ಸಲ್ಲಿಸಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ಶೈನಿ ಡಾಟ್ ಕಾಮ್ ತಂಡದ ಸದಸ್ಯ ರೋಹಿತ್ ಎಂದು ಪರಿಚಯಿಸಿಕೊಂಡಿದ್ದ. ಹೆಲ್ತ್ ಕೇರ್ ಕಂಪನಿಯಲ್ಲಿ ಕೆಲಸಕ್ಕೆ ನೀವು ಆಯ್ಕೆಯಾಗಿದ್ದೀರಿ. ನಿಮ್ಮ ಸ್ವವಿವರವನ್ನು ನಮ್ಮ ಶೈನಿ ಡಾಟ್ ಕಾಂ ನಲ್ಲಿ ಅಪ್​ಲೋಡ್ ಮಾಡಿ. ನಿಮಗೆ ಆನ್​ಲೈನ್​ನಲ್ಲಿ ಸಂದರ್ಶನ ನಡೆಸಲಾಗುತ್ತದೆ ಎಂದು ಹೇಳಿದ್ದಾನೆ. ನಂತರ ಅದಕ್ಕೆ ಠೇವಣಿ ಎಂದು 11 ಸಾವಿರ ರೂ. ಪಾವತಿಸಬೇಕು ಎಂದು ತಿಳಿಸಿದ್ದ. ಆತನ ಮಾತಿನಂತೆ ಹಣ ಸಂದಾಯ ಮಾಡಿದೆ. ತರುವಾಯ ವಿವಿಧ ರೀತಿಯ ಶುಲ್ಕವೆಂದು ನೆಪದಲ್ಲಿ ಒಟ್ಟು 1.94 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಸ್ನೇಹಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: PHOTOS|ಹಂದಿಯನ್ನು ಬೆತ್ತಲೆಯಾಗಿ ಬೆನ್ನಟ್ಟಿದ ವ್ಯಕ್ತಿ: ಹಳದಿ ಬಣ್ಣದ ಬ್ಯಾಗ್​ನಲ್ಲಿ ಅಂಥದ್ದೇನಿದೆ?

    ಎಫ್​ಐಆರ್ ದಾಖಲಿಸಿಕೊಂಡು ಉತ್ತರ ವಿಭಾಗದ ಸಿಇಎನ್ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

    ಎರಡನೇ ವಿವಾಹವಾಗಿ ಪೇಚಿಗೆ ಸಿಲುಕಿದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts