More

    ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ಸಂಸ್ಥೆಯಿಂದ ಶ್ರೀರಾಮನ ಡ್ರಾಯಿಂಗ್ ಮತ್ತು ಪ್ರಬಂಧ ಸ್ಪರ್ಧೆ

    ಬೆಂಗಳೂರು : ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಾದ ನಂತರ ದೇಶಾದ್ಯಂತ ಶ್ರೀರಾಮನ ಬಗ್ಗೆ ಭಕ್ತಿ, ಕುತೂಹಲ ಹೆಚ್ಚಾಗಿದ್ದು, ಶ್ರೀರಾಮನ ಥೀಮ್ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಶ್ರೀ ಅಕಾಡೆಮಿ ಆ್ ಮ್ಯೂಸಿಕ್ ಅಂಡ್ ಆರ್ಟ್ಸ್ ಸಂಸ್ಥೆಯು ಡ್ರಾಯಿಂಗ್ ಮತ್ತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.

    ಫೆ.26ರ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ಕೆಟಗರಿಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜಯನಗರದ 8ನೇ ಬ್ಲಾಕ್‌ನಲ್ಲಿರುವ ಜಯರಾಮ ಸೇವಾ ಮಂಡಳಿಯ ಜಿ.ವಿ.ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದ್ದು, ನೇರವಾಗಿ ಬಂದು ಹೆಸರು ನೋಂದಾಯಿಸಬಹುದು. ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ.

    ಶ್ರೀರಾಮಲಲ್ಲಾ ಥೀಮ್ ಇರಿಸಿಕೊಂಡು ಪೆನ್ಸಿಲ್ ಸ್ಕೆಚಿಂಗ್ ಮತ್ತು ಪೇಂಟಿಂಗ್ ಮಾಡಬೇಕಿದ್ದು, ಎ3 ಗಾತ್ರದ ಡ್ರಾಯಿಂಗ್ ಶೀಟನ್ನು ಸಂಘಟಕರು ಒದಗಿಸಲಿದ್ದಾರೆ. 3ನೇ ತರಗತಿಯಿಂದ 5ನೇ ತರಗತಿವರೆಗೆ ಕೆಟಗರಿ 1, 6ನೇ ತರಗತಿಯಿಂದ 8ನೇ ತರಗತಿವರೆಗೆ ಕೆಟಗರಿ 2, 9ನೇ ತರಗತಿಯಿಂದ 12ನೇ ತರಗತಿವರೆಗೆ ಕೆಟಗರಿ 3 ಎಂದು ವಿಭಾಗಿಸಲಾಗಿದೆ.

    ಭಗವಾನ್ ರಾಮ ಮತ್ತು ಆತನ ಸಹೋದರರು ಹಾಗೂ ಆಂಜನೇಯನ ಕುರಿತು 15 ರಿಂದ 50 ವರ್ಷದವರೆಗಿನವರಿಗೆ ಪ್ರಬಂಧ ಸ್ಪರ್ಧೆ ಇರಲಿದೆ. ಪ್ರಬಂಧವನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆಯಬಹುದು. ಬರವಣಿಗೆಗೆ ಬೇಕಾದ ಬಿಳಿಹಾಳೆಯನ್ನು ಆಯೋಜಕರು ನೀಡಲಿದ್ದಾರೆ.

    15 ರಿಂದ 25 ವರ್ಷಗಳವರೆಗೆ ಕೆಟಗರಿ 1, 26 ರಿಂದ 35 ವರ್ಷಗಳವರೆಗೆ ಕೆಟಗರಿ 2, 36 ರಿಂದ 50 ವರ್ಷಗಳವರೆಗೆ ಕೆಟಗರಿ 3 ಎಂದು ವಿಭಾಗಿಸಲಾಗಿದೆ. ಪ್ರಥಮ ಬಹುಮಾನ 1000 ರೂ., ದ್ವಿತೀಯ ಬಹುಮಾನ 500 ರೂ., ತೃತೀಯ ಬಹುಮಾನ 250 ರೂ. ನಿಗದಿ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts