More

    ಸ್ವಾಮಿ ಗೋವಿಂದದೇವ ಮಹಾರಾಜರ ಅಮೃತ ಮಹೋತ್ಸವ ; ಮುಂಬೈಯಲ್ಲಿ ಕಾರ್ಯಕ್ರಮ

    ಮುಂಬೈ : ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕೋಶಾಧ್ಯಕ್ಷ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರ ಜನ್ಮ ಅಮೃತ ಮಹೋತ್ಸವ ಸಮಾರಂಭವನ್ನು ಫೆ.14ಕ್ಕೆ ಮುಂಬೈನಲ್ಲಿ ಆಯೋಜಿಸಲಾಗಿದೆ..

    500 ವರ್ಷಗಳ ನಂತರ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು ಅಮೂಲ್ಯ ಯೋಗದಾನ ನೀಡಿದ್ದಾರೆ. ಅಷ್ಟೇ ಅಲ್ಲ ಅವರು 17 ನೇ ವಯಸ್ಸಿನಿಂದ ಶ್ರೀಮದ್ಭಾಗವತ, ರಾಮಾಯಣ, ಮಹಾಭಾರತ, ಜ್ಞಾನೇಶ್ವರಿ, ದಾಸಬೋಧ, ಯೋಗವಾಸಿಷ್ಠ ಇವುಗಳ ಮೂಲಕ ಜನರಿಗೆ ಶಿಕ್ಷಣ ನೀಡುವಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದ್ದಾರೆ. ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಸ್ವಾಮಿ ಶ್ರೀ ಜಯೇಂದ್ರ ಸರಸ್ವತಿ ಇವರು ಪೂಜ್ಯರಿಗೆ ಪರಮಹಂಸನ್ಯಾಸದ ದೀಕ್ಷೆ ನೀಡಿದ್ದಾರೆ. ಸ್ವಾಮೀಜಿಯವರು ಆಳಂದಿ (ಪುಣೆ) ಯಲ್ಲಿ ಆಶ್ರಮ ಸ್ಥಾಪಿಸಿ ಭವಿಷ್ಯದ ಪೀಳಿಗೆಗಾಗಿ ಸಂತ ಶ್ರೀ ಜ್ಞಾನೇಶ್ವರ ಗುರುಕುಲ, ಶ್ರೀಕೃಷ್ಣ ಸೇವಾನಿಧಿ ಟ್ರಸ್ಟ್, ಮಹರ್ಷಿ ವೇದವ್ಯಾಸ ಪ್ರತಿಷ್ಠಾನ, ಮುಂತಾದ ಸಂಸ್ಥೆಗಳ ಮೂಲಕ ರಾಷ್ಟ್ರ ಮತ್ತು ಧರ್ಮದ ಪರವಾಗಿ ಕಾರ್ಯ ಮುಂದುವರೆಸುತ್ತಿದ್ದಾರೆ.

    ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಗೌರವ ಸನ್ಮಾನ ಸಮಾರಂಭವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಉದ್ಘಾಟಿಸಲಿದ್ದಾರೆ. ಮುಂಬೈನ ದಾದರನಲ್ಲಿರುವ ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ, ಶಿವಾಜಿ ಪಾರ್ಕ್ ಮೈದಾನದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಮಹಾರಾಷ್ಟ್ರದ ವಿವಿಧ ರಾಜಕೀಯ ಮುಖಂಡರು, ಸಂಘಟನೆಗಳ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಈ ಸಮಾರಂಭಕ್ಕೆ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಪ್ರಕಟಣೆಯಲ್ಲಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ 99879 66666 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts