More

    ಯೋಗಾಯೋಗ: ಆನ್​ಲೈನ್​ನಲ್ಲಿ ಜ್ಞಾನ ಹೆಚ್ಚಿಸಿಕೊಳ್ಳುತ್ತಿರುವ ಶ್ರೀಲೀಲಾ

    ಬೆಂಗಳೂರು: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸಿನಿಮಾಮಂದಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಆಗಾಗ ಒಂದಿಷ್ಟು ಹೊತ್ತು ಹೊರಬಂದು, ಸಮಾಜಸೇವೆಯಲ್ಲಿಯೂ ನಿರತರಾಗಿದ್ದಾರೆ. ಅದೇ ರೀತಿ ಯೋಗ, ಓದು ಸೇರಿ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ‘ಕಿಸ್’ ಬೆಡಗಿ, ‘ಭರಾಟೆ’ ಹುಡುಗಿ ಶ್ರೀಲೀಲಾ ಸಹ ಹೊರತಲ್ಲ. ಕಳೆದ ಒಂದೂವರೆ ತಿಂಗಳುಗಳಿಂದ ಮನೆಯಲ್ಲೇ ಬೇರೆ ಬೇರೆ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿರುವ ಅವರು, ‘ನಾನು ಮೆಡಿಕಲ್ ವಿದ್ಯಾರ್ಥಿನಿ. ಇಂಥ ಕಠಿಣ ಪರಿಸ್ಥಿತಿಯಲ್ಲಿ ವೈರಸ್ ಬಗ್ಗೆ ಎಷ್ಟು ಜಾಗೂರಕತೆಯಿಂದ ಇರಬೇಕು ಎಂಬುದನ್ನು ಸಾಮಾನ್ಯ ವ್ಯಕ್ತಿಯಂತೆ ನೋಡದೆ, ಒಬ್ಬ ವೈದ್ಯೆಯ ದೃಷ್ಟಿಕೋನದಿಂದ ನೋಡುತ್ತಿದ್ದೇನೆ. ನಿತ್ಯ ಆನ್​ಲೈನ್​ನಲ್ಲಿ ಕರೊನಾ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆಯುತ್ತವೆ. ಕೋವಿಡ್ ಬಂದಾಗಿನಿಂದಲೂ ವಿಜ್ಞಾನ ಕ್ಷೇತ್ರದಲ್ಲಿ ಏನೆಲ್ಲ ಬದಲಾವಣೆ ಆಗಿದೆ? ಅದರಿಂದ ನಮಗೆ ಏನೆಲ್ಲ ದಕ್ಕಿದೆ ಎಂಬುದನ್ನು ನೋಡಲಾಗುತ್ತಿದೆ. ಕಣ್ಣಿಗೆ ಕಾಣುವ ಕಾಯಿಲೆಯನ್ನು ಬೇಗ ಗುಣಮುಖವಾಗಿಸಬಹುದು ಆದರೆ, ವೈರಸ್ ವಿಚಾರದಲ್ಲಿ ಹಾಗಲ್ಲ. ನಾವು ಎಷ್ಟೇ ಜಾಗರೂಕತೆಯಿಂದ ಇದ್ದರೂ ಕಡಿಮೆಯೇ’ ಎನ್ನುವ ಶ್ರೀಲೀಲಾ, ಯೋಗ ಮತ್ತು ಆಧ್ಯಾತ್ಮದ ಬಗ್ಗೆಯೂ ಹೆಚ್ಚು ಒಲವು ಮೂಡಿಸಿಕೊಂಡಿದ್ದಾರೆ.

    ಇದನ್ನೂ ಓದಿ  ಬೇಲಿ ಹಾರಿ ರಸ್ತೆಗೆ ಬಂದ ಮೇಕೆಗಳು… ಮುಂದೇನಾಯಿತು?

    ಹೌದು, ನಿತ್ಯ ಬೆಳಗ್ಗೆ ಎರಡು ಗಂಟೆ ಆನ್​ಲೈನ್​ನಲ್ಲಿ ಯೋಗ ತರಬೇತಿ ಪಡೆಯುವುದರ ಜತೆಗೆ ಅಧ್ಯಾತ್ಮದ ಕಡೆಗೂ ಮುಖ ಮಾಡಿದ್ದಾರೆ. ವೇದ ಕಲಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ‘ಈ ಕರೊನಾ ದಿನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗಾಗಿ ನಾನು ಆಧ್ಯಾತ್ಮಿಕತೆಯ ಜತೆಗೆ ವೇದಗಳ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದೇನೆ. ಅಜ್ಜಿ ಹೇಳುವ ಅವರ ಕಾಲದ ಕಥೆಗಳನ್ನು ಕೇಳುತ್ತಿದ್ದೇನೆ’ ಎನ್ನುತ್ತಾರೆ.

    ಇನ್ನುಳಿದಂತೆ ಸಿನಿಮಾ ತಾರೆ ಆಗಿರುವುದರಿಂದ ಶೂಟಿಂಗ್ ಪ್ರಕ್ರಿಯೆಯನ್ನೂ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಲಾಕ್​ಡೌನ್ ತೆರವಾಗಿ ಶೂಟಿಂಗ್ ಚಾಲನೆ ಕೊಟ್ಟರೂ ಅವರು ಹೋಗುವ ಹಾಗಿಲ್ಲ. ಅಂದರೆ, ಸದ್ಯಕ್ಕೆ ಯಾವುದೇ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡಿಲ್ಲ. ಲಾಕ್​ಡೌನ್ ಅವಧಿಯಲ್ಲಿ ಐದಾರು ಕಥೆ ಕೇಳಿದರೂ, ಅದ್ಯಾವುದಕ್ಕೂ ಶ್ರೀಲೀಲಾ ಕಡೆಯಿಂದ ಅಧಿಕೃತ ಉತ್ತರ ಬಂದಿಲ್ಲ.

    ಅಕ್ರಮ ಮನೆಗಳ ಸಕ್ರಮ: ರಾಜ್ಯ ಸಚಿವ ಸಂಪುಟ ಅಸ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts