More

    ಅಕ್ರಮ ಮನೆಗಳ ಸಕ್ರಮ: ರಾಜ್ಯ ಸಚಿವ ಸಂಪುಟ ಅಸ್ತು

    ಬೆಂಗಳೂರು: ಬಹುವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಡಿಎ ವ್ಯಾಪ್ತಿಯ ಅಕ್ರಮ-ಸಕ್ರಮ ಯೋಜನೆಗೆ ಕೊನೆಗೂ ಸರ್ಕಾರ ಮಂಗಳ ಹಾಡಲು ವೇದಿಕೆ ರೂಪಿಸಿದೆ.

    ಸಂಪುಟ ಸಭೆಯಲ್ಲಿ ಬಿಡಿಎ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸಿದೆ. ಈ ಮೂಲಕ ಬಿಡಿಎ ಬಡಾವಣೆಗಳಲ್ಲಿನ ಅಕ್ರಮ ಮನೆಗಳನ್ನು ಸಕ್ರಮ ಮಾಡುವ ತೀರ್ಮಾನ ಪ್ರಕಟಿಸಿದೆ.

    ಇದನ್ನೂ ಓದಿ: ರೈತರಿಗೆ, ಕಾರ್ಮಿಕರಿಗೆ ಬಂಪರ್​ ಗಿಫ್ಟ್: ಹಣಕಾಸು ನೆರವು ಘೋಷಿಸಿದ ನಿರ್ಮಲಾ ಸೀತಾರಾಮನ್

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಭೂಸ್ವಾಧೀನಪಡಿಸಿಕೊಂಡ ಪ್ರದೇಶದಲ್ಲಿ 75 ಸಾವಿರ ನಿವೇಶನಗಳಲ್ಲಿ ಜನತೆ ಅಕ್ರಮವಾಗಿ ಸ್ವಾಧೀನ ಹೊಂದಿದ್ದಾರೆ. ಇದೇ ಸುಮಾರು 6 ಸಾವಿರ ಎಕರೆ ಪ್ರದೇಶ ಇರಬಹುದೆಂದು ಅಂದಾಜಿಸಲಾಗಿದೆ.
    ಅವರನ್ನು ತೆರವು ಮಾಡಿಸುವುದು ಕಷ್ಟ, ಅಕ್ರಮವಾಗಿ ಮುಂದುವರಿಸುವುದೂ ಸರಿಯಲ್ಲ. ಅವರಿಂದ ಆದಾಯವೂ ಇಲ್ಲ, ಅವರಿಗೂ ಮಾಲೀಕತ್ವ ಇರುವುದಿಲ್ಲ. ಈ ಕಾರಣಕ್ಕೆ ಬಿಡಿಎ ಕಾನೂನಿಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ತರಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

    ಅಕ್ರಮವಾಗಿ ಮನೆ ಕಟ್ಟಿಕೊಂಡವರು ಕನಿಷ್ಠ 12 ವರ್ಷವಾದರೂ ನೆಲೆಸಿರುವ ಬಗ್ಗೆ ದಾಖಲೆ ನೀಡಿದರೆ ಸಕ್ರಮ ಮಾಡಿಕೊಡಲಾಗುತ್ತದೆ.

    ಇದನ್ನೂ ಓದಿ: ರೈತರಿಗೆ, ಕಾರ್ಮಿಕರಿಗೆ ಬಂಪರ್​ ಗಿಫ್ಟ್: ಹಣಕಾಸು ನೆರವು ಘೋಷಿಸಿದ ನಿರ್ಮಲಾ ಸೀತಾರಾಮನ್

    ಅವರೆಲ್ಲರೂ ಪೂರ್ಣ ಮಾರ್ಗಸೂಚಿ ದರದ ಪ್ರಕಾರ ಪಾವತಿ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಮಾರ್ಗಸೂಚಿ ದರದ ಶೇ.10ಕ್ಕೆ ಸಿಮಿತಗೊಳಿಸಿ ಮಾಲೀಕತ್ವ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಖಾಲಿ ನಿವೇಶನಗಳನ್ನು ಬಿಡಿಎ ಸ್ವಾಧೀನಪಡಿಸಿಕೊಳ್ಳಲಿದೆ. ಅದನ್ನು ಮುಂದಿನ ದಿನಗಳಲ್ಲಿ ಹರಾಜು ಹಾಕಲು ಅವಕಾಶವಿದೆ ಎಂದರು.

    ದಂಡವೆಷ್ಟು?:
    * 20-30, 30-40 ನಿವೇಶನದಲ್ಲಿ ಮನೆ ಕಟ್ಟಿಕೊಂಡವರು ಅವರಿರುವ ಪ್ರದೇಶದ ಮಾರ್ಗಸೂಚಿ ದರದ ಶೇ.10 ಹಣ ಕಟ್ಟಿದರೆ ಮಾಲೀಕತ್ವ ನೀಡಲಾಗುತ್ತದೆ.
    * 60-40ರ ನಿವೇಶನದಲ್ಲಿ ಮನೆ ಇದ್ದರೆ ಮಾರ್ಗಸೂಚಿ ದರದ ಶೇ.20 ಪಾವತಿಸಬೇಕು.
    * 50-80ರಲ್ಲಿನ ಮನೆಗೆ ಆಯಾ ಪ್ರದೇಶದ ಮಾರ್ಗಸೂಚಿ ದರದ ಶೇ.40 ಪಾವತಿಸಬೇಕು.

    ಇದನ್ನೂ ಓದಿ: ರೈತರು, ಕಾರ್ಮಿಕರಿಗೆ ಕೇಂದ್ರದಿಂದ ಎರಡನೇ ದಿನದ ಕೊಡುಗೆ: ಯಡಿಯೂರಪ್ಪ ಏನಂತಾರೆ?

    ವಿಶೇಷ ಆರ್ಥಿಕ ಪ್ಯಾಕೇಜ್​ನ 2ನೇ ದಿನದ ಘೋಷಣೆಗಳ ಬಗ್ಗೆ ಪಿಎಂ ಮೋದಿ ಹೀಗೆ ಹೇಳ್ತಿದ್ದಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts