More

    ವಿದೇಶಿ ನೆಲದಲ್ಲಿ ಗೂಢಚಾರಿ ಕಾರ್ಯಾಚರಣೆ, ಇಬ್ಬರ ಬಂಧನ: ನ್ಯೂಯಾರ್ಕ್​ನಲ್ಲಿದೆ ಚೀನಾದ ‘ರಹಸ್ಯ ಪೊಲೀಸ್ ಠಾಣೆ!

    ವಿದೇಶಿ ನೆಲದಲ್ಲಿ ಗೂಢಚಾರಿ ಕಾರ್ಯಾಚರಣೆ, ಇಬ್ಬರ ಬಂಧನ: ನ್ಯೂಯಾರ್ಕ್​ನಲ್ಲಿದೆ ಚೀನಾದ 'ರಹಸ್ಯ ಪೊಲೀಸ್ ಠಾಣೆ!| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
    ಇತ್ತೀಚೆಗೆ ಬೆಳಕಿಗೆ ಬಂದ ಚೀನೀ ರಹಸ್ಯ ಕಾರ್ಯಾಚರಣಾ ಪ್ರಕರಣಗಳ ಪರಿಣಾಮವಾಗಿ, ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಚಲನ ಮೂಡಿದೆ. ಚೀನಾ ಸರ್ಕಾರ ಅಮೆರಿಕದಲ್ಲಿದ್ದು, ತನ್ನ ನೀತಿಗಳನ್ನು ವಿರೋಧಿಸಿ, ಪ್ರಜಾಪ್ರಭುತ್ವವಾದಿ ಹೋರಾಟ ನಡೆಸುವ ಚೀನೀಯರನ್ನು ಹತ್ತಿಕ್ಕಲು ಪ್ರಯತ್ನಿಸುವುದನ್ನು ತಡೆಯಲು ಅಮೆರಿಕ ಸರ್ಕಾರ ಶ್ರಮಿಸುತ್ತಿದೆ. ಕಳೆದ ವಾರ, (ಸೋಮವಾರ, ಎಪ್ರಿಲ್ 17) ಇಬ್ಬರು ಚೀನೀ ನಾಗರಿಕರನ್ನು ನ್ಯೂಯಾರ್ಕ್ ನಗರದಲ್ಲಿ ‘ರಹಸ್ಯ ಪೊಲೀಸ್ ಠಾಣೆ’ ಸ್ಥಾಪಿಸಲು ಚೀನಾ ಸರ್ಕಾರಕ್ಕೆ ಸಹಕಾರ ನೀಡಿದ ಆರೋಪದಲ್ಲಿ ಬಂಧಿಸಲಾಯಿತು. ಚೀನಾದ ರಾಷ್ಟ್ರೀಯ ಪೊಲೀಸ್ ಇಲಾಖೆಯಲ್ಲಿ ಕಾರ್ಯಾಚರಿಸುತ್ತಿರುವ 35ಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ಅಮೆರಿಕದಲ್ಲಿರುವ ಚೀನೀ ಭಿನ್ನಮತೀಯರ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಶೋಷಣೆ ನಡೆಸುವ ಆರೋಪ ಹೊರಿಸಲಾಗಿದೆ.

    ಇಬ್ಬರು ರಹಸ್ಯ ಏಜೆಂಟ್‌ಗಳಾದ ಬ್ರಾಂಕ್ಸ್‌ ನಿವಾಸಿ, 61 ವರ್ಷದ ‘ಹ್ಯಾರಿ’ ಲು ಜಿಯಾನ್‌ವಾಂಗ್ ಹಾಗೂ 59 ವರ್ಷದ ಚೆನ್ ಜಿನ್‌ಪಿಂಗ್ ಎಂಬವರನ್ನು ಅವರ ಮನೆಗಳಿಂದ ಬಂಧಿಸಲಾಯಿತು. ಲು ಅವರ ವಕೀಲ ಈ ಕುರಿತು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

    ಇದನ್ನೂ ಓದಿ: ವಿಷ್ಣುವರ್ಧನ್ ಗುಂಗು: ಸೆಟ್ಟೇರಿತು ಮತ್ತೊಂದು ಚಿತ್ರ ‘ಮಾರ್ಗರೇಟ್-ಲವರ್ ಆಫ್ ರಾಮಾಚಾರಿ’

    ಅಮೆರಿಕದ ಕ್ರಿಮಿನಲ್ ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳ ಪ್ರಕಾರ, ಈ ಇಬ್ಬರು ವ್ಯಕ್ತಿಗಳು ಯಾವತ್ತೂ ನ್ಯಾಯಾಂಗ ಇಲಾಖೆಯ ಬಳಿ ತಾವು ವಿದೇಶಿ ಸರ್ಕಾರದ ಏಜೆಂಟ್‌ಗಳು ಎಂದು ದಾಖಲಿಸಿಕೊಂಡಿರಲಿಲ್ಲ. ಮೇಲ್ನೋಟಕ್ಕೆ ಈ ಚೀನಾದ ರಹಸ್ಯ ಪೊಲೀಸ್ ಠಾಣೆ ಚೀನೀಯರಿಗೆ ಅಗತ್ಯ ಸಹಾಯಗಳು, ಅಂದರೆ ಚೀನೀ ನಾಗರಿಕರಿಗೆ ಅವರ ಚಾಲನಾ ಪರವಾನಗಿ ವಿಸ್ತರಿಸಲು ನೆರವಾಗುವುದು, ಇತ್ಯಾದಿಗಳನ್ನು ಮಾಡುವಂತೆ ಕಂಡುಬರುತ್ತದೆ. ಆದರೆ ಈ ಠಾಣೆಗೆ ಸಾಕಷ್ಟು ಕುತಂತ್ರದ ಪಾತ್ರಗಳೂ ಇವೆ! ಈ ರಹಸ್ಯ ಠಾಣೆ ಚೀನಾದ ಸರ್ಕಾರಕ್ಕೆ ಅಮೆರಿಕದಲ್ಲಿರುವ ಚೀನೀ ಪ್ರಜಾಪ್ರಭುತ್ವವಾದಿ ಹೋರಾಟಗಾರರ ಕುರಿತಾದ ಮಾಹಿತಿಗಳನ್ನು ಒದಗಿಸುತ್ತದೆ.

    ಸೋಮವಾರ ದಾಖಲಾದ ಮೂರು ಪ್ರಕರಣಗಳಲ್ಲಿ, ಒಂದು ಪ್ರಕರಣ ಚೀನಾದ ಸಾರ್ವಜನಿಕ ಸುರಕ್ಷಾ ಸಚಿವಾಲಯದ ಸ್ಥಳೀಯ ಶಾಖೆಗೆ ಸಂಬಂಧಿಸಿತ್ತು. ಈ ಶಾಖೆ ಮ್ಯಾನ್‌ಹಟ್ಟನ್ ನಗರದ, ಚೈನಾಟೌನ್ ಪ್ರದೇಶದ ಒಂದು ಕಚೇರಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಆದರೆ ಇದರ ಕಾರ್ಯಗಳ ಕುರಿತು ಎಫ್‌ಬಿಐ ಕಣ್ಣಿಟ್ಟ ಪರಿಣಾಮವಾಗಿ, ಕಳೆದ ಬೇಸಿಗೆಯಲ್ಲಿ ಇದನ್ನು ಸ್ಥಗಿತಗೊಳಿಸಲಾಯಿತು. ಅಮೆರಿಕದ ನ್ಯಾಯಾಂಗ ಇಲಾಖೆಯ ಪ್ರಕಾರ, ಬಂಧಿಸಲ್ಪಟ್ಟ ಇಬ್ಬರೂ ಚೀನೀ ಸರ್ಕಾರದ ಅಧಿಕಾರಿಗಳ ಆದೇಶ ಪಾಲಿಸುತ್ತಿದ್ದರು. ಒಂದು ಬಾರಿ ಅವರಿಬ್ಬರಿಗೆ ನಾವು ಎಫ್‌ಬಿಐ ದೃಷ್ಟಿಯಲ್ಲಿ ಇದ್ದೇವೆ ಎನ್ನುವುದು ಅರಿವಾದ ತಕ್ಷಣವೇ ಅವರು ಚೀನೀ ಅಧಿಕಾರಿಗಳೊಡನೆ ನಡೆಸಿದ ಸಂದೇಶಗಳನ್ನು ಫೋನಿನಿಂದ ಅಳಿಸಿಹಾಕಿ, ವಿಚಾರಣೆ ನಿಲ್ಲಿಸುವ ಪ್ರಯತ್ನ ನಡೆಸಿದರು.

    ಇದನ್ನೂ ಓದಿ: 1630 ಕೆ.ಜಿ.ಗೂ ಅಧಿಕ ತೂಕದ ಚಿನ್ನ ವಿಮಾನನಿಲ್ದಾಣದಿಂದ ಕಳವು!

    ವಕೀಲರ ಪ್ರಕಾರ, ನ್ಯೂಯಾರ್ಕ್ ಠಾಣೆಯನ್ನು ಚೀನಾದ ಸಾರ್ವಜನಿಕ ಸುರಕ್ಷಾ ಇಲಾಖೆಯ ಫುಜಫೌ ಶಾಖೆ ನಿರ್ವಹಿಸುತ್ತಿತ್ತು. ಆದರೆ ಅದಕ್ಕೆ ನ್ಯೂಯಾರ್ಕ್ ನಗರದಲ್ಲಿ ಕಾರ್ಯಾಚರಿಸುವ ಯಾವ ಹಕ್ಕೂ ಇರಲಿಲ್ಲ. ಚೀನಾ ಜಗತ್ತಿನಾದ್ಯಂತ ಇಂತಹ ರಹಸ್ಯ ಪೊಲೀಸ್ ಠಾಣೆಗಳನ್ನು ಹೊಂದಿದೆ ಎಂದು ಆರೋಪಿಸಲಾಗಿದ್ದರೂ, ನ್ಯಾಯಾಂಗ ಇಲಾಖೆಯ ಪ್ರಕಾರ ಜಗತ್ತಿನಲ್ಲಿ ಮೊದಲ ಬಾರಿಗೆ ಇಂತಹ ಬಂಧನ ನಡೆಸಲಾಗಿದೆ. ಎಫ್‌ಬಿಐ ಮುಖ್ಯಸ್ಥರಾದ ಮೈಕೆಲ್ ಡ್ರಿಸ್ಕೋಲ್ ಅವರ ಪ್ರಕಾರ, ನ್ಯೂಯಾರ್ಕ್ ನಗರದ ಎಫ್‌ಬಿಐ ಕಚೇರಿ ಚೀನಾದ ಈ ಕಾರ್ಯಾಚರಣೆಯನ್ನು ಅಮೆರಿಕದ ರಾಷ್ಟ್ರೀಯ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆ ಎಂದೇ ಆರೋಪಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆ ವಿದೇಶೀ ಸರ್ಕಾರಗಳು ಅಮೆರಿಕದಲ್ಲಿ ನೆಲೆಸಿರುವ ಭಿನ್ನಮತೀಯರನ್ನು ಹುಡುಕಿ, ಬೆದರಿಸಿ, ಸುಮ್ಮನಾಗಿಸುವ ಪ್ರಯತ್ನ ನಡೆಸುವುದನ್ನು ತಡೆಯುವುದನ್ನು ಆದ್ಯತೆಯ ಕಾರ್ಯವನ್ನಾಗಿಸಿಕೊಂಡಿದೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    2020ರಲ್ಲಿ, ಆರಕ್ಕೂ ಹೆಚ್ಚು ಚೀನೀ ಅಧಿಕಾರಿಗಳು ನ್ಯೂಜರ್ಸಿ ನಗರದಲ್ಲಿ ನೆಲೆಸಿದ್ದ ಚೀನೀ ಪ್ರಜೆಯೊಬ್ಬನನ್ನು ಮರಳಿ ಚೀನಾಗೆ ಕರೆದೊಯ್ದು, ನ್ಯಾಯಾಲಯದ ವಿಚಾರಣೆ ಎದುರಿಸುವಂತೆ ಮಾಡಲು ಪ್ರಯತ್ನ ಪಡುತ್ತಿದ್ದರು. ಇದನ್ನು ಗಮನಿಸಿದ ನ್ಯಾಯಾಂಗ ಇಲಾಖೆ ಅವರ ಮೇಲೆ ಪ್ರಕರಣಗಳನ್ನು ದಾಖಲಿಸಿತ್ತು. ಇದು ಚೀನಾವನ್ನು ಒಳಗೊಂಡ ಒಂದು ದೊಡ್ಡ ಪ್ರಕರಣವಾಗಿತ್ತು.

    ಜನವರಿ ತಿಂಗಳಲ್ಲಿ, ಇರಾನ್‌ನಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳನ್ನು ಕಟುವಾಗಿ ಟೀಕಿಸುತ್ತಿದ್ದ, ಅಮೆರಿಕದ ನಿವಾಸಿಯಾದ ಇರಾನಿ ಲೇಖಕ, ಹೋರಾಟಗಾರ ವ್ಯಕ್ತಿಯೊಬ್ಬರನ್ನು ಕೊಲೆ ಮಾಡುವ ಯೋಜನೆ ರೂಪಿಸಿದ ಆರೋಪದಡಿ ಮೂವರನ್ನು ಬಂಧಿಸಲಾಯಿತು. ಇನ್ನು ಸೋಮವಾರ ನಡೆದ ಘಟನೆಯಲ್ಲಿ, ನ್ಯಾಯಾಂಗ ಇಲಾಖೆ ಚೀನಾದ ಸಾರ್ವಜನಿಕ ಸುರಕ್ಷಾ ಇಲಾಖೆಯ 34 ವ್ಯಕ್ತಿಗಳ ಮೇಲೆ ಟ್ವಿಟರ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ನಕಲಿ ಖಾತೆಗಳ ಮೂಲಕ ಭಿನ್ನಮತೀಯರನ್ನು ಶೋಷಿಸಲು ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಿಸಿದೆ.

    ನ್ಯಾಯವಾದಿಗಳ ಪ್ರಕಾರ, ಆರೋಪಿಗಳೆಲ್ಲರೂ ಚೀನಾ ಮೂಲದ ವಿಶೇಷ ಟಾಸ್ಕ್ ಫೋರ್ಸ್ ಸದಸ್ಯರಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ಉಕ್ರೇನ್ ಮೇಲೆ ರಷ್ಯಾದ ದಾಳಿ, ಜನಾಂಗೀಯ ನ್ಯಾಯಕ್ಕಾಗಿ ಅಮೆರಿಕದಲ್ಲಿ ನಡೆಯುತ್ತಿರುವ ಹೋರಾಟಗಳು, ಹಾಂಕಾಂಗ್​​ನಲ್ಲಿ ಮಾನವ ಹಕ್ಕು ವಿಚಾರಗಳು, ಮತ್ತಿತರ ವಿಷಯಗಳಲ್ಲಿ ಚೀನಾ ಸರ್ಕಾರದ ನೀತಿಗಳನ್ನು ಪ್ರಚುರಪಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಆರೋಪಿಗಳೆಲ್ಲ ಇಂದಿಗೂ ಕಾರ್ಯಾಚರಿಸುತ್ತಿದ್ದು, ಚೀನಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ

    ಅದರೊಡನೆ, ಎಂಟು ಜನ ಚೀನಾದ ಸರ್ಕಾರಿ ಅಧಿಕಾರಿಗಳು ಚೀನಾದಲ್ಲೇ ನೆಲೆಸಿದ್ದು, ಅಮೆರಿಕದ ಟೆಲಿಕಾಂ ಉದ್ಯಮದ ಉದ್ಯೋಗಿಯೊಬ್ಬನಿಗೆ ಚೀನಾದ ಭಿನ್ನಮತೀಯರನ್ನು ಆ ಉದ್ಯಮದ ಸಾಮಾಜಿಕ ಜಾಲತಾಣದ ವೇದಿಕೆಯಿಂದ ಹೊರಹಾಕುವಂತೆ ಬೆದರಿಕೆ ಒಡ್ಡಿದ್ದರು.

    2020ರ ಡಿಸೆಂಬರ್ ತಿಂಗಳಲ್ಲಿ 1989ರ ತಿಯನಾನ್‌ಮೆನ್ ಚೌಕದ ನರಮೇಧವನ್ನು ಕುರಿತು ಚರ್ಚಿಸಲು ಸರಣಿ ಜೂಮ್​ ಆನ್‌ಲೈನ್ ಸಭೆಗಳನ್ನು ಆಯೋಜಿಸಲಾಗಿತ್ತು. ಆ ಸಭೆಯನ್ನು ಹಾಳುಗೆಡವಲು ಪ್ರಯತ್ನಿಸಿದ್ದಕ್ಕಾಗಿ ಚೀನಾ ಮೂಲದ ಜೂಮ್ ಉದ್ಯೋಗಿ, ಜಿನ್ ಕ್ಸಿನ್‌ಜಿಯಾಂಗ್ ಅಲಿಯಾಸ್ ಜೂಲಿಯನ್ ಜಿನ್ ಮೇಲೆ ಆರೋಪ ಹೊರಿಸಲಾಗಿತ್ತು.

    ಅಧಿಕಾರಿಗಳ ಪ್ರಕಾರ, ಜಿನ್ ಚೀನಾ ಸರ್ಕಾರದ ಕಾನೂನು ಜಾರಿ ಮತ್ತು ಗುಪ್ತಚರ ಇಲಾಖೆಯೊಡನೆ ಸೇರಿಕೊಂಡು, ಜೂಮ್ ಒಳಗೆ ಕೆಲಸ ಮಾಡುತ್ತಿದ್ದ. ಅವನು ಚೀನಾ ಸರ್ಕಾರದ ಕೋರಿಕೆಯ ಮೇರೆಗೆ ಹಲವು ಜೂಮ್ ಸಭೆಗಳನ್ನು ಕೊನೆಗೊಳಿಸಿ, ಹಲವು ಜೂಮ್ ಬಳಕೆದಾರರನ್ನು ಆ್ಯಪ್ ಬಳಸಲು ಸಾಧ್ಯವಾಗದಂತೆ ಮಾಡುತ್ತಿದ್ದ.

    ಬಂಡಾಯ ಶಮನಕ್ಕಾಗಿ ಶಾಸಕರ ಕಾಲು ಹಿಡಿಯಲು ಹೋದ ಜೆಡಿಎಸ್ ಅಭ್ಯರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts