More

    ಕ್ರೀಡೆಗಳು ಸಾಮರಸ್ಯದ ಪ್ರತೀಕ

    ಯಲಬುರ್ಗಾ: ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಗ್ರಾಪಂ ಸದಸ್ಯ ರಮೇಶ ಕುಂಟೋಜಿ ಹೇಳಿದರು.

    ಇದನ್ನೂ ಓದಿ: ಕ್ರೀಡೆಯಿಂದ ಭಾವೈಕ್ಯತೆ, ಭ್ರಾತೃತ್ವ ವೃದ್ಧಿ

    ತಾಲೂಕಿನ ಚೌಡಾಪುರ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರೋತ್ಸವ ನಿಮಿತ್ತ ಗೆಳೆಯರ ಬಳಗ ಏರ್ಪಡಿಸಿದ್ದ ಸಿಪಿಎಲ್ ಸೀಸನ್-4ರ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು.

    ಹಳ್ಳಿಗಳಲ್ಲಿ ಹಬ್ಬ ಹಾಗೂ ಜಾತ್ರೆಗಳ ನಿಮಿತ್ತ ಆಯೋಜಿಸುವ ಕ್ರೀಡೆಗಳು ಸಾಮರಸ್ಯದ ಪ್ರತೀಕವಾಗಿದ್ದು. ಒತ್ತಡದ ಬದುಕಿನಿಂದ ಆರೋಗ್ಯ ಮತ್ತು ದೇಹದ ಸದೃಢತೆ ಕಾಪಾಡಲು ಕ್ರೀಡೆ ರಾಮಬಾಣವಾಗಿದೆ. ಯುವಕರು ಕ್ರೀಡೆಯಲ್ಲಿ ಭಾಗವಹಿಸುವ ಜತೆಗೆ ಸೌಹಾರ್ದತೆಗೆ ಕಾರಣರಾಗಬೇಕು ಎಂದರು.

    ಪ್ರಮುಖರಾದ ನಿಂಗಪ್ಪ ಛತ್ರಗುಡಿ, ನೀಲಕಂಠಪ್ಪ ತೇರಿನ, ನೀಲಪ್ಪ ಮ್ಯಾಗೇರಿ, ಹನುಮೇಶ ಕರುವಿನ್, ಮೈಲಾರಪ್ಪ ಮ್ಯಾಗೇರಿ, ಗವಿಸಿದ್ದಪ್ಪ ಹಾವಿನ, ನಿಂಗಪ್ಪ ತೋಟದ, ಬಾಳಪ್ಪ ಬಸಿರಿಹಾಳ, ಶರಣಪ್ಪ ಹುಣಸಿಹಾಳ, ಬಸವಂತ ವಣಗೇರಿ, ಅಭಿಷೇಕ ಅಸುಂಡಿ, ಗ್ಯಾನಪ್ಪ ಅಗಸಿಮುಂದಿನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts