More

    ಆಧ್ಯಾತ್ಮಕ್ಕೆ ಮನಸ್ಸು ಅರಳಿಸುವ ಶಕ್ತಿಯಿದೆ

    ಸಿಂದಗಿ: ಸದಾ ಭಗವಂತನೆಡೆಗೆ ತುಡಿವ ನಮ್ಮ ಮನಸ್ಸು ಆಧ್ಯಾತ್ಮದ ಸತ್ಸಂಗದತ್ತ ಹೊರಳಿದರೆ ಅರಳುತ್ತದೆ ಎಂದು ತಹಸೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ ಹೇಳಿದರು.

    ನಗರದ ಬಸ್ ಡಿಪೋ ಬಳಿಯ ಆದಿಶೇಷ ಹಿರೇಮಠದ ಆವರಣದಲ್ಲಿ ಆದಿಶೇಷ ಸಂಸ್ಥಾನ ಹಿರೇಮಠದ 28ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಯಡಿಯೂರು ಸಿದ್ಧಲಿಂಗೇಶ್ವರ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಡಾ. ವಿಜಯಕುಮಾರ ವಾರದ ಮಾತನಾಡಿ, ಧರ್ಮ ಸಂಸ್ಕಾರಕ್ಕೆ ಆಧ್ಯಾತ್ಮದ ತುಡಿತ ಅವಶ್ಯಕ. ಮಠ-ಮಂದಿರಗಳಲ್ಲಿನ ಆಧ್ಯಾತ್ಮ ಸಂಸ್ಕೃತಿಯನ್ನು ಆಲಿಸಿ, ಪ್ರೀತಿಸುವ ಮೂಲಕ ಬದುಕಿನ ಸಾರ್ಥಕತೆ ಕಾಣಬೇಕು ಎಂದರು.

    ಇದನ್ನೂ ಓದಿ: ಆನೆಕಾಲು ರೋಗ ಮುಕ್ತ ತಾಲೂಕಿಗೆ ಶ್ರಮಿಸಿ

    ಸಾನ್ನಿಧ್ಯ ವಹಿಸಿದ್ದ ನಾಲವಾರ ಮಠದ ಶಿವಯೋಗಿ ಡಾ. ಚಂದ್ರಶೇಖರ ಸ್ವಾಮಿಗಳು, ಮಾದನ ಹಿಪ್ಪರಗಾದ ಶಾಂತವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು.

    ಆದಿಶೇಷ ಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಎಂ.ಎಂ.ಹಂಗರಗಿ, ಶಿವಾನಂದ ಬಡಾನೂರ, ಸತೀಶ ಬಿರಾದಾರ, ಭೋಜಪಗೌಡ ಬಿರಾದಾರ, ಗೊಲ್ಲಾಳಪ್ಪ ಬಗಲಿ ಮತ್ತಿತರರಿದ್ದರು. ಪೂಜಾ ಹಿರೇಮಠ ನಿರೂಪಿಸಿದರು. ಪಂಡಿತ ಯಂಪೂರೆ ಸ್ವಾಗತಿಸಿದರು. ಮಾಹಾಂತೇಶ ನೂಲಾನವರ ಮಾತನಾಡಿದರು.

    ಭಕ್ತರಿಗೆ ಜೇರಟಗಿಯ ಸಿದ್ದಯ್ಯ ಶಾಸಿಗಳು ಸಿದ್ಧಲಿಂಗೇಶ್ವರರ ಪ್ರವಚನಸಾರ ಉಣಬಡಿಸಿದರೆ, ಶಾಂತಲಿಂಗ ಹೊನ್ನಕಿರಣಗಿ ಸಂಗೀತ ನೀಡಿದರು. ಆಕಾಶ ಹೈದ್ರಾ ಹಾಗೂ ಮಹಾಂತೇಶ ನಾಗೋಜಿ ಅವರು ತಬಲಾ ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts