More

    ಆನೆಕಾಲು ರೋಗ ಮುಕ್ತ ತಾಲೂಕಿಗೆ ಶ್ರಮಿಸಿ

    ಸಿಂದಗಿ: ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಸಾಮೂಹಿಕ ಜಾಗೃತಿ ಮೂಲಕ ಆನೆಕಾಲು ರೋಗದ ನಿರ್ಮೂಲನೆಗೆ ಶ್ರಮಿಸಬೇಕು ಎಂದು ಆಲಮೇಲ ತಹಸೀಲ್ದಾರ್ ಸುರೇಶ ಚಾವಲರ ಸೂಚಿಸಿದರು.

    ತಾಲೂಕು ಆಡಳಿತಸೌಧದಲ್ಲಿ ಸೋಮವಾರ ಜರುಗಿದ ರಾಷ್ಟ್ರೀಯ ಆನೆಕಾಲು ರೋಗ ನಿರ್ಮೂಲನಾ ಕಾರ್ಯಕ್ರಮದ ಜಾಗೃತಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

    ಆರೋಗ್ಯ ಇಲಾಖೆಯೊಂದಿಗೆ ಇತರ ತಾಲೂಕು ಮಟ್ಟದ ಇಲಾಖೆಗಳು, ಗ್ರಾಮ ಪಂಚಾಯಿತಿಯವರು ತಮ್ಮ ಗ್ರಾಮಗಳಲ್ಲಿ ಸಂಚರಿಸಿ, ಡಂಗುರ ಸಾರುವ ಮೂಲಕ ಆನೆಕಾಲು ರೋಗದ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಬೇಕು.

    ಪ್ರತಿಯೊಬ್ಬರು ಆನೆಕಾಲು ರೋಗ ಮಾತ್ರೆಗಳನ್ನು ಸೇವಿಸುವಂತೆ ಮನವೊಲಿಸಬೇಕು. ಅಲ್ಲದೇ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯ ಪ್ರತಿ ಮಗುವಿಗೂ ಮಾತ್ರೆಗಳನ್ನು ವಿತರಿಸಿ, ಸೇವಿಸಲು ಕ್ರಮವಹಿಸಬೇಕು ಎಂದರು.

    ತಾಲೂಕು ವೈದ್ಯಾಧಿಕಾರಿ ಡಾ. ಎ.ಎ. ಮಾಗಿ ಮಾತನಾಡಿ, ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ನಗರದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜ. 18ರಿಂದ ಜ. 28ರವರೆಗೆ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಾಮೂಹಿಕ ಡಿಇಸಿ ಮಾತ್ರೆ ನುಂಗಿಸುವ ಕಾರ್ಯಕ್ರಮ ನಡೆಯುತ್ತಿದೆ.

    ಲೂಕಿನ 2,45,471 ಜನಸಂಖ್ಯೆಯಿದ್ದು, ಇವರಲ್ಲಿ 2,25,833ಜನರು ಮಾತ್ರೆ ನುಂಗಲು ಅರ್ಹರಿದ್ದು, ಮಾತ್ರೆಗಳನ್ನು ಪೂರೈಸಲು 246ಜನ ಮೇಲ್ವಿಚಾರಕರು, 49 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಎಲ್ಲ ಇಲಾಖೆಗಳ ಜಂಟಿ ಸಹಯೋಗದಲ್ಲಿ ಯಶಸ್ವಿಗೊಳಿಸೋಣ ಎಂದರು.

    ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಕುಲಕರ್ಣಿ ಮಾತನಾಡಿ, ಆನೆಕಾಲು ರೋಗದ ಲಕ್ಷಣ ಹಾಗೂ ಹರಡುವಿಕೆ ಮತ್ತು ಸೊಳ್ಳೆ ನಿಯಂತ್ರಣ ಹಾಗೂ ಅದರ ಮುಂಜಾಗ್ರತ ಕ್ರಮಗಳ ಕುರಿತು ವಿವರಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts