More

    ಚೈತನ್ಯ ಜಾಗೃತಗೊಳಿಸಲು ತಾಯಿಯಿಂದ ಮಾತ್ರ ಸಾಧ್ಯ

    ಹಗರಿಬೊಮ್ಮನಹಳ್ಳಿ: ದೇಶದ ಸಂಸ್ಕೃತಿ, ಯೋಗ, ಆಯುರ್ವೇದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಹೊಣೆ ತಾಯಂದಿರದ್ದಾಗಿದೆ ಎಂದು ಪ್ರಗತಿಪರ ಕೃಷಿಕ ಮಹಿಳೆ ಡಾ.ಕವಿತಾ ಉಮಾಶಂಕರ ಮಿಶ್ರಾ ಹೇಳಿದರು.

    ಇದನ್ನೂ ಓದಿ: ಬಿಜೆಪಿಗೆ ಹೊಸ ಚೈತನ್ಯ; ಕಾರ್ಯಕರ್ತರ ಸಂಭ್ರಮೋತ್ಸವ

    ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರಣ್ಯ ಸಭಾಮಂಟಪದಲ್ಲಿ ವಿದ್ಯಾಭಾರತಿಯ ಪ್ರಾಂತೀಯ ಮಾತೃ ಭಾರತಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

    ಪಾಲಕರ ವಾತ್ಸಲ್ಯ, ಗುರುವಿನಿಂದ ಶಿಕ್ಷಣ ಪ್ರತಿ ಹೆಣ್ಣಿನ ಜೀವನಕ್ಕೆ ಅಗತ್ಯದ ಅಂಶಗಳು. ಏರುಪೇರುನ್ನು ದಾಟಿ ಸಾಗುವ ನದಿಯ ಹಾಗೆ ತಾಯಿ ತನ್ನ ಜೀವನದಲ್ಲಿ ಬರುವ ಎಲ್ಲ ಸಂಕಷ್ಟಗಳನ್ನು ಎದುರಿಸುತ್ತಾಳೆ. ಮಾತೆಯರು ಮಾತ್ರ ಚೈತನ್ಯ ಶಕ್ತಿಯನ್ನು ಜಾಗೃತಿಗೊಳಿಸಲು ಸಾಧ್ಯ ಎಂದರು.

    ವಿದ್ಯಾಭಾರತಿಯ ಕ್ಷೇತ್ರೀಯ ಶಿಶುಶಿಕ್ಷಣ ಮುಖ್ಯಸ್ಥೆ ತಾರಾ ಕಾಳಿಚರಣ್, ವಿದ್ಯಾಭಾರತಿಯ ಪ್ರಾಂತೀಯ ಅಧ್ಯಕ್ಷ ಪರಮೇಶ್ವರ ಹೆಗಡೆ, ಪ್ರಾಂತೀಯ ಕಾರ್ಯದರ್ಶಿ ವಸಂತ್ ಮಾಧವ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಬಸವನಗೌಡ್ರು, ಮಧ್ಯಕ್ಷೇತ್ರದ ಕಾರ್ಯದರ್ಶಿ ಲಕ್ಷ್ಮಣರಾವ್,

    ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಸುಧಾಕರ್ ರೆಡ್ಡಿ, ಪೂರ್ವಕ್ಷೇತ್ರಿಯ ಸಹಸಂಘಟನಾ ಕಾರ್ಯದರ್ಶಿ ಜಿ.ಆರ್.ಜಗದೀಶ್, ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಉಮೇಶ ಕುಮಾರ್, ಪ್ರಾಂತದ ಮಾತೃಭಾರತಿ ಪ್ರಮುಖ್ ಸುಜಾತ ದಪ್ತರ್‌ದರ್, ನಾಗರತ್ನ ಬದ್ರಿನಾಥ, ಶಂಕುಂತಲಾ, ಅರ್ಚನಾ ಪುರೋಹಿತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts