More

    ಬಿಜೆಪಿಗೆ ಹೊಸ ಚೈತನ್ಯ; ಕಾರ್ಯಕರ್ತರ ಸಂಭ್ರಮೋತ್ಸವ

    ಬೆಂಗಳೂರು: ಬಿಜೆಪಿ ವರಿಷ್ಠರ ಎರಡು ಮಹತ್ವದ ನಿರ್ಧಾರಗಳು ರಾಜ್ಯದ ಕೇಸರಿ ಪಡೆಯ ಸಂಭ್ರಮವನ್ನು ಮುಗಿಲು ಮುಟ್ಟಿಸಿದೆ. ಕಳಾಹೀನವಾಗಿದ್ದ ಪಕ್ಷವು ಡಿಸೆಂಬರ್‌ನ ಚಳಿಗಾಲದ ಅಧಿವೇಶನಕ್ಕೆ ಮುನ್ನ ಮೈಚಳಿ ಬಿಟ್ಟು ಎದ್ದುಕುಳಿತಿದೆ.

    ಬಿಜೆಪಿ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾದ ಆರ್.ಅಶೋಕ್ ಅವರು ಪಕ್ಷದ ರಾಜ್ಯ ಕಚೇರಿಗೆ ಧಾವಿಸಿದಾಗ ಭರ್ಜರಿ ಸ್ವಾಗತ ಪಡೆದರು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ್ ಅವರನ್ನು ತೆರೆದ ವಾಹನದಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದಿಂದ ಕಚೇರಿಯವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

    ಗಜಗಾತ್ರದ ಕಿತ್ತಳೆ ಹಣ್ಣಿನ ಹಾರ ಹಾಕಿ, ಹೂಮಳೆಗೆರೆದು, ಪಟಾಕಿ ಸಿಡಿಸಿದ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಂತಸದ ಹೊಳೆಯಲ್ಲಿ ಮಿಂದೆದ್ದರು.

    ಪ್ರಮುಖ ಹುದ್ದೆಗಳ ಭರ್ತಿ ಖುಷಿ

    ವಿಧಾನಸಭೆ ಚುನಾವಣೆಯಲ್ಲಿ ಸೋತ ಆರು ತಿಂಗಳ ಬಳಿಕ ಪಕ್ಷದಲ್ಲಿ ಹೊಸ ಚೈತನ್ಯ ತುಂಬಿದ ರೀತಿಯನ್ನು ಹಂಚಿಕೊಂಡು, ಸಂಭ್ರಮಿಸಿದರೆ, ವಾದ್ಯಗಳ ಸದ್ದಿಗೆ ಕುಣಿದು ಕುಪ್ಪಳಿಸಿದರು.
    ಪಕ್ಷದ ರಾಜ್ಯ ಸಮಿತಿಗೆ ಹೊಸ ಸಾರಥಿಯಾಗಿ ವಿಜಯೇಂದ್ರ ನೇಮಕವಾದ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ಸ್ಥಾನಕ್ಕೆ ಹಿರಿಯ ಶಾಸಕ ಆರ್.ಅಶೋಕ್ ಆಯ್ಕೆಯಾಗಿದೆ. ಎರಡೂ ಪ್ರಮುಖ ಹುದ್ದೆಗಳ ಭರ್ತಿಯಿಂದಾಗಿ ಕಾರ್ಯಕರ್ತರು ಖುಷಿ ಹೆಚ್ಚಿಸಿದೆ ಎಂದು ಪಕ್ಷದ ಮುಖಂಡರು ಹರ್ಷ ವ್ಯಕ್ತಪಡಿಸಿದರು.

    ನಂತರ ಆರ್.ಅಶೋಕ್ ಅವರಿಗೆ ಮಹಿಳಾ ಕಾರ್ಯಕರ್ತೆಯರು ಆರತಿ ಎತ್ತಿ, ಹೂಗುಚ್ಛ ನೀಡಿ ಕಚೇರಿಯೊಳಗೆ ಬರಮಾಡಿಕೊಂಡರು. ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಜಗನ್ನಾಥರಾವ್ ಜೋಶಿ ಪುತ್ಥಳಿಗೆ ಆರ್.ಅಶೋಕ್ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts