More

    ಹಿಂದು ಧರ್ಮ ರಕ್ಷಿಸಿದ ಶಿವಾಜಿ

    ವಿಜಯಪುರ: ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಾಹಸ ಮತ್ತು ಆದರ್ಶ ಗುಣಗಳು ಯುವ ಜನಾಂಗಕ್ಕೆ ಈಗಲೂ ಅನುಕರಣೀಯ ಎಂದು ಮುಖಂಡ ಶಿವಾನಂದ ಲಾಳಸಂಗಿ ಹೇಳಿದರು.

    ನಗರದ ಸ್ವಾಮಿ ವಿವೇಕಾನಂದ ಸೇವಾ ಸಂದ ವತಿಯಿಂದ ಗುರುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಹಿಂದು ಧರ್ಮದ ಉಳಿವಿಗಾಗಿ ಹೋರಾಟ ನಡೆಸಿ ಛತ್ರಪತಿ ಎಂಬ ಹೆಸರು ಪಡೆದ ಶಿವಾಜಿ ಅವರ ತತ್ವಾದರ್ಶ ಹಾಗೂ ಸಿದ್ಧಾಂತಗಳನ್ನು ಯುವ ಜನತೆ ಅನುಸರಿಸಬೇಕೆಂದು ಅವರು ಹೇಳಿದರು.

    ಶಿವಾಜಿ ಮಹಾರಾಜರು ಅಪ್ರತಿಮ ದೇಶ ಭಕ್ತ. ಹಿಂದು ಸಮಾಜ ಕಟ್ಟಲು ತನ್ನ 16 ನೇ ವಯಸ್ಸಿನಲ್ಲಿ ಧೈರ್ಯ ಸಾಹಸ ಹಾಗೂ ಸಮಯ ಪ್ರಜ್ಞೆಗಳ ಮೂಲಕ ಶ್ರಮಿಸಿದ ಪರಿಣಾಮ ಪ್ರಸ್ತುತ ದಿನದಲ್ಲಿ ಹಿಂದು ಸಮಾಜ ಹೆಮ್ಮರವಾಗಿ ಬೆಳೆದಿದೆ ಎಂದರು.

    ಮುದಕಣ್ಣಾ ಅವಟಿ, ಶಿವಶರಣ ಲಾಳಸಂಗಿ, ಅನಿಲ ಒಂಟಿ, ರಾಚಪ್ಪ ಶಿರಗುಪ್ಪಿ, ಶಾಂತವೀರ ಸಿದ್ದಾಪೂರ, ಉಮೇಶ ಗೌಳಿ, ಸಿದ್ರಾಮ ಉಪ್ಪಿನ, ಸುನೀಲ ಮೋದಿ, ಶಂಕರ ಮಂಗ್ಯಾಳ, ಶಿವಾನಂದ ದುದ್ಧಗಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts