More

    ಶ್ರೀವಲ್ಲಿಯನ್ನು ಕಾಪಿ ಹೊಡೆದ ಸ್ಪೈಡರ್‌ಮ್ಯಾನ್‌! ಪುಷ್ಪ ಚಿತ್ರದ ‘ಸಾಮಿ ಸಾಮಿ’ ಹಾಡಿಗೆ ಹೆಜ್ಜೆ! ವಿಡಿಯೋ ವೈರಲ್…

    ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಪುಷ್ಪ: ದಿ ರೈಸ್ಸಿನಿಮಾದ ಕ್ರೇಜ್ ಶೀಘ್ರದಲ್ಲೇ ಕಡಿಮೆಯಾಗುವ ಸಾಧ್ಯವಿಲ್ಲ ಎಂಬಂತಿದೆ. ಹೌದು, ಒಂದು ವೈರಲ್ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸ್ಪೈಡರ್‌ಮ್ಯಾನ್‌ನಂತೆ ಉಡುಪು ಧರಿಸಿದ್ದು, ಈ ಚಿತ್ರದ ಸೂಪರ್‌ಹಿಟ್ ಹಾಡು ಸಾಮಿ ಸಾಮಿಗೆ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದೆ.
    ತೆಲುಗಿನ ನಟ ಮತ್ತು ಅಲ್ಲು ಅರ್ಜುನ್ ಅವರ ತಮ್ಮ ಅಲ್ಲು ಸಿರಿಶ್ ಈ ವಿಡಿಯೋವನ್ನು ಅವರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಟ್ವೀಟ್​ನಲ್ಲಿ, ‘ಪುಷ್ಪಾ ಹಾಡು ರಾರಾ ಸಾಮಿಗೆ ಸ್ಪೈಡರ್‌ಮ್ಯಾನ್ ಹೆಜ್ಜೆ ಹಾಕಿದ್ದಾರೆ. ವಾಹ್! ಯೇ ಇಂಡಿಯಾ ಹೇ ಬಾಸ್. @SpiderMan good job buddy!’ ಎಂದು ಬರೆದುಕೊಂಡಿದ್ದಾರೆ. ಕ್ರಿಸ್ ಮಸ್ ಸಂದರ್ಭದಲ್ಲಿ ಈ ವಿಡಿಯೋ ತೆಗೆಯಲಾಗಿದೆ. ವೈರಲ್ ವಿಡಿಯೋದಲ್ಲಿ ಹಾಡಿನ ಸಾಹಿತ್ಯವನ್ನು ಬದಲಾಯಿಸಲಾಗಿದೆ.

    ಶ್ರೀವಲ್ಲಿಯನ್ನು ಕಾಪಿ ಹೊಡೆದ ಸ್ಪೈಡರ್‌ಮ್ಯಾನ್‌! ಪುಷ್ಪ ಚಿತ್ರದ 'ಸಾಮಿ ಸಾಮಿ' ಹಾಡಿಗೆ ಹೆಜ್ಜೆ! ವಿಡಿಯೋ ವೈರಲ್... ಶ್ರೀವಲ್ಲಿಯನ್ನು ಕಾಪಿ ಹೊಡೆದ ಸ್ಪೈಡರ್‌ಮ್ಯಾನ್‌! ಪುಷ್ಪ ಚಿತ್ರದ 'ಸಾಮಿ ಸಾಮಿ' ಹಾಡಿಗೆ ಹೆಜ್ಜೆ! ವಿಡಿಯೋ ವೈರಲ್...

    ಪ್ರಾಸಂಗಿಕವಾಗಿ, ‘ಪುಷ್ಪ: ದಿ ರೈಸ್ಚಿತ್ರ ಹಾಲಿವುಡ್​ನ ಸ್ಪೈಡರ್‌ಮ್ಯಾನ್: ನೋ ವೇ ಹೋಮ್ಸಿನಿಮಾ ಬಿಡುಗಡೆಯಾದ ಅದೇ ಕ್ರಿಸ್ ಮಸ್ ಸಮಯದಲ್ಲಿ ತೆರೆಕಂಡಿತು. ಇನ್ನು, ಈ ವಿಡಿಯೋದಲ್ಲಿ ಸ್ಯಾಂಟಾ ಕ್ಲಾಸ್​ಗಳು ಕುಣಿಯುವುದು ಕಂಡುಬಂದಿದೆ. ಜತೆಗೆ ಆ ಸಿನಿಮಾಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ ಪುಷ್ಪ. ಹೌದು, ‘ಸ್ಪೈಡರ್‌ಮ್ಯಾನ್: ನೋ ವೇ ಹೋಮ್ಚಿತ್ರ ಇಲ್ಲಿಯವರೆಗೆ 150 ಕೋಟಿ ರೂ. ಗಳಿಸಿದರೇ, ‘ಪುಷ್ಪ: ದಿ ರೈಸ್ಸಿನಿಮಾ ಬಿಡುಗಡೆಯಾಗಿ ಇಂದಿಗೆ 25 ದಿನ ಕಳೆದಿದ್ದು ಒಟ್ಟು ಇಲ್ಲಿಯವರೆಗೆ 350 ಕೋಟಿ. ರೂ ಗಳಿಸಿದೆ ಎನ್ನಲಾಗಿದೆ.
    ಹೀಗಾಗಿ, ಸದ್ಯ ಸ್ಪೈಡರ್‌ಮ್ಯಾನ್ ಪುಷ್ಪ‘ದ ಶ್ರೀವಲ್ಲಿಯಾಗಿ ರಾರಾ ಸಾಮಿಹಾಡಿಗೆ ಕುಣಿದು ಕುಪ್ಪಳಿಸಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈಗಾಗಲೇ, ವಿಡಿಯೋ 50,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು, 5,000 ಕ್ಕೂ ಹೆಚ್ಚು ಲೈಕ್ಸ್ ಕೂಡ ಪಡೆದು ಎಲ್ಲರ ಗಮನ ಸೆಳೆಯುತ್ತಿದೆ.

    ತಮಿಳು ಚಿತ್ರರಂಗದ ಬ್ಯಾಡ್​ಬಾಯ್ ಮತ್ತೆ ಪ್ರೀತಿಯಲ್ಲಿ? ಹೊಸ ಲವರ್ ಜತೆ ಒಂದೇ ಮನೆಯಲ್ಲಿ ಸಿಂಬು ಸಂಸಾರ?

    ಬಿಕಿನಿ ಫೋಟೋಗೆ ರೇಷ್ಮೆ ಸೀರೆ, ಬುರ್ಕಾ! ಹಿಗ್ಗಾ-ಮುಗ್ಗಾ ಟ್ರೋಲ್ ಆದ ನಟಿ ದಿಶಾ ಪಟಾನಿ…

    ರಶ್ಮಿಕಾಗೆ ವಿಜಯ್ ಮೇಲೆ ಏಷ್ಟು ಪ್ರೀತಿ ಗೊತ್ತಾ? ಗೋವಾ ವಿಡಿಯೋಸ್ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts