blank

ಮಧ್ಯರಾತ್ರಿ ಡ್ಯೂಟಿಗೆ ತೆರಳುತ್ತಿದ್ದ ಸ್ಪೈಸ್​ ಜೆಟ್​ ಪೈಲಟ್​ ಮೇಲೆಮಾರಣಾಂತಿಕ ಹಲ್ಲೆ

blank

ನವದೆಹಲಿ: ಸ್ಪೈಸ್​ ಜೆಟ್​ ವಿಮಾನದ ಓರ್ವ ಪೈಲಟ್​ ಮೇಲೆ 10 ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿದೆ. ದಕ್ಷಿಣ ದೆಹಲಿಯ ಇಂಡಿಯನ್​ ಇನ್ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಬಳಿಯ ಫ್ಲೈ ಓವರ್​ ಮೇಲೆ ಮಧ್ಯರಾತ್ರಿ ಘಟನೆ ನಡೆದಿದೆ.

ಪೈಲಟ್ ಯುವರಾಜ್ ತಿವಾಟಿಯಾ ​ಕಾರಿನಲ್ಲಿ ತೆರಳುತ್ತಿದ್ದಾಗ 10 ಜನರ ಗುಂಪೊಂದು ಅಡ್ಡಬಂದಿದೆ. ಪೈಲಟ್​ಗೆ ಗನ್ ತೋರಿಸಿ, ಕಾರಿನ ಗ್ಲಾಸ್​​ಗಳನ್ನೆಲ್ಲ ಪುಡಿಪುಡಿ ಮಾಡಿದ್ದಾರೆ. ಪಿಸ್ತೂಲ್​​ ಹಿಡಿಕೆಯಿಂದ ಯುವರಾಜ್​ ತಲೆಗೆ ಬಲವಾಗಿ ಏಟು ಕೊಟ್ಟಿದ್ದಾರೆ. ಬಳಿಕ ಅವರ ಬಳಿ ಇದ್ದ ಮೊಬೈಲ್​ ಮತ್ತಿತರ ವಸ್ತುಗಳು ಮತ್ತು 34,000 ರೂಪಾಯಿಯನ್ನು ಎಗರಿಸಿ ಪರಾರಿಯಾಗಿದ್ದಾರೆ. ಹೋಗುವಾಗ ಪೈಲಟ್​ಗೆ ಚಾಕುವಿನಿಂದ ಇರಿದು ಹೋಗಿದ್ದಾರೆ.
ಕಿಟಕಿ ಗ್ಲಾಸುಗಳೆಲ್ಲ ಪುಡಿಪುಡಿಯಾಗಿದ್ದಲ್ಲದೆ, ಸೀಟ್​ ಮೇಲೆ ರಕ್ತದ ಕಲೆಗಳು ಕಾಣುವ ಫೋಟೋಗಳು ಎಲ್ಲೆಡೆ ವೈರಲ್​ ಆಗಿವೆ. ಇತ್ತೀಚಿನ ದಿನಗಳಲ್ಲಿ ದೆಹಲಿ ಐಐಟಿ ಬಳಿ ಇಂಥ ಲೂಟಿ ಪ್ರಕರಣಗಳು ಹಲವು ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದನ್ನೂ ಓದಿ: ಯುಎಸ್​​ನಲ್ಲಿ ಜನಾಂಗೀಯ ದ್ವೇಷದ ವಿರುದ್ಧ ರೊಚ್ಚಿಗೆದ್ದ ಪ್ರತಿಭಟನಾಕಾರರಿಗೆ ಅಧ್ಯಕ್ಷ ಟ್ರಂಪ್​ ಪುತ್ರಿಯ ಬೆಂಬಲ

ಯುವರಾಜ್ ತಿವಾಟಿಯಾ ಅವರು ಸ್ಪೈಸ್​ ಜೆಟ್​ ಫ್ಲೈಟ್​ ಕ್ಯಾಪ್ಟನ್​. ಮಧ್ಯರಾತ್ರಿ 1 ಗಂಟೆಗೆ ತಮ್ಮ ಮನೆಯಿಂದ ಕಚೇರಿಯ ಕಾರಿನಲ್ಲಿ ಏರ್​​ಪೋರ್ಟ್​ಗೆ ತೆರಳುತ್ತಿದ್ದರು.

ಐಐಟಿ ಬಳಿಯ ಫ್ಲೈಓವರ್​ನಲ್ಲಿ ತೆರಳುತ್ತಿದ್ದಾಗ, ಐದು ಬೈಕ್​ಗಳಲ್ಲಿ ಬಂದ 10 ದರೋಡೆಕೋರರು, ಕಾರನ್ನು ಅಡ್ಡಗಟ್ಟಿ ಕೃತ್ಯ ನಡೆಸಿದ್ದಾರೆ. ಈ ಗುಂಪು ಅಲ್ಲಿಂದ ತೆರಳುತ್ತಿದ್ದಂತೆ ಪೈಲಟ್​ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವರಾಜ್​ ಅವರನ್ನು ರಕ್ಷಣೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ಪುಟ್ಟ ಮಗು ಹೇಳಿದಂತೆ ಕೇಳುವುದು ಈ ಆನೆ; ಮುದ್ದುಕ್ಕಿಸುವ ಈ ಟಿಕ್​ಟಾಕ್​ ವಿಡಿಯೋ ಎಲ್ಲಿಯದು ಗೊತ್ತಾ?

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…