More

    ವಿಡಿಯೋದಲ್ಲಿ ದಾಖಲಾಯ್ತು ಕೋತಿ ರಹಸ್ಯ… ಮಾಲ್‌ಗಳಲ್ಲಿ ತೆಂಗಿನಕಾಯಿ ಬಹಿಷ್ಕಾರ

    ಲಂಡನ್‌: ಇಲ್ಲಿಯ ಬಹುತೇಕ ಎಲ್ಲಾ ಮಾಲ್‌ಗಳು, ಸೂಪರ್‌ಮಾರ್ಕೆಟ್‌ಗಳಲ್ಲಿ ತೆಂಗಿನಕಾಯಿಗಳನ್ನು ಬಹಿಷ್ಕಾರ ಮಾಡಲಾಗಿದೆ.

    ಲಂಡನ್‌ ಪ್ರದಾನಿ ಬೋರೀಸ್‌ ಜಾನ್‌ಸನ್‌ ಅವರ ಭಾವಿ ಪತ್ನಿ ಕ್ಯಾರಿ ಸೈಮಂಡ್ಸ್ ಆದೇಶದ ನಂತರ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಇದಕ್ಕೆ ಕಾರಣವೆಂದರೆ, ಇಲ್ಲಿ ಕಾಡುಗಳಿಂದ ಮಂಗಗಳನ್ನು ಸೆರೆ ಹಿಡಿದು ತಂದು ಅವುಗಳನ್ನು ಹಿಂಸಿಸಿ, ಹೊಡೆದು, ಬಡಿದು ಅವುಗಳಿಗೆ ತೆಂಗಿನಕಾಯಿ ಕೀಳುವ ತರಬೇತಿ ನೀಡಲಾಗುತ್ತಿದೆ. ಮಂಗಗಳನ್ನು ಅತ್ಯಂತ ಕೆಟ್ಟ ಪರಿಸರದಲ್ಲಿ ಕೂಡಿ ಹಾಕಿ, ಅವುಗಳ ಎಲ್ಲಾ ಹಕ್ಕುಗಳನ್ನು ಕಿತ್ತುಕೊಂಡು ತರಬೇತಿ ನೀಡುವ ಬಗ್ಗೆ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ವಿಡಿಯೋ ಮಾಡಿ ಅದನ್ನು ಹರಿಬಿಟ್ಟಿತ್ತು.
    ತೆಂಗಿನ ಕಾಯಿ ಮಾತ್ರವಲ್ಲದೇ ಅದನ್ನು ಒಡೆದು ನೀರು ಸಂಗ್ರಹಿಸುವುದು ಹಾಗೂ ಅದರಿಂದ ಎಣ್ಣೆಗಳನ್ನು ಮಾಡುವುದು ಎಲ್ಲದಕ್ಕೂ ಮಂಗಗಳ ಬಳಕೆ ಮಾಡುತ್ತಿರುವುದು ಹಾಗೂ ಅವರಿಗೆ ಚಿತ್ರಹಿಂಸೆ ನೀಡುತ್ತಿರುವ ಕುರಿತು ಈ ವಿಡಿಯೋದಲ್ಲಿ ದಾಖಲಾಗಿತ್ತು.

    ಮಂಗಗಳ ಸ್ಥಿತಿಯನ್ನು ಕಂಡ ಕ್ಯಾರಿ ಸೈಮಂಡ್ಸ್‌ ಅವರು ಕೂಡಲೇ ತೆಂಗಿನ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವಂತೆ ಸೂಪರ್‌ಮಾರ್ಕೆಟ್‌ಗಳಿಗೆ ಆದೇಶಿಸಿದ್ದಾರೆ. ಕ್ಯಾರಿ ಕೂಡ ವನ್ಯಜೀವಿ ಸಂರಕ್ಷಕಿಯಾಗಿರುವ ಹಿನ್ನೆಲೆಯಲ್ಲಿ ಪ್ರಾಣಿಯ ಮೇಲಿನ ದೌರ್ಜನ್ಯವನ್ನು ತಾವು ಸಹಿಸುವುದಿಲ್ಲ ಎಂದಿದ್ದಾರೆ.

    ಕಾಡಿನಿಂದ ಕೋತಿಗಳಿಂದ ದಿನಕ್ಕೆ ಏನಿಲ್ಲವೆಂದರೂ ಒಂದು ಸಾವಿರ ತೆಂಗಿನಕಾಯಿಗಳನ್ನು ಕೀಳಿಸಲಾಗುತ್ತಿದೆ. ಇದಕ್ಕೆ ಹಿಂಸೆ ನೀಡಲಾಗುತ್ತಿದೆ ಎಂದು ಪೆಟಾ ಹೇಳಿದೆ. ರಹಸ್ಯವಾಗಿ ಯಾರಿಗೂ ತಿಳಿಯದಂತೆ ಇವುಗಳನ್ನು ಸಾಕಿ, ಅದರಿಂದ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಇವುಗಳನ್ನು ಯಂತ್ರಗಳಂತೆ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಪೆಟಾ ವಿಡಿಯೋ ಮಾಡಿತ್ತು.

    ಇದನ್ನೂ ಓದಿ: ಫ್ರೆಂಡ್​ ಮನೆಯಲ್ಲೇ ಯುವತಿ ಎಗರಿಸಿದ ಹಣದ ಮೊತ್ತ ಕೇಳಿದ್ರೆ ನೀವು ಬೆಚ್ಚಿಬೀಳ್ತಿರಾ…!

    ಪ್ರಪಂಚದಾದ್ಯಂತ ತೆಂಗಿನಕಾಯಿಗಳನ್ನು ರಫ್ತು ಮಾಡಲು ಕೋತಿಗಳನ್ನೇ ಬಲವಂತವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ರಹಸ್ಯವಾಗಿ ಥೈಲ್ಯಾಂಡ್‌ನಲ್ಲಿ ಎಂಟು ಸಾಕಣೆ ಕೇಂದ್ರಗಳನ್ನು ತೆರೆಯಲಾಗಿದ್ದು, ಇಲ್ಲಿ ಗುಪ್ತವಾಗಿ ಕೆಲಸ ನಡೆಯುತ್ತಿರುವ ಅಂಶವನ್ನು ಪೆಟಾ ಬಹಿರಂಗಪಡಿಸಿತ್ತು.

    ಪೆಟಾ ವಿಡಿಯೋ ಚಿತ್ರಿಸಲು ಹೋದ ಸಮಯದಲ್ಲಿ ಚಿಕ್ಕ ಗೂಡಿನಲ್ಲಿ ಬಂಧಿಯಾಗಿದ್ದ ಮಂಗವು ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಹಿಂಸೆ ಅನುಭವಿಸುತ್ತಿರುವುದು ಕಂಡಿದೆ. ಕೋಪದಿಂದ ಅದು ಆ ಪಂಜರವನ್ನು ಅಲ್ಲಾಡಿಸುತ್ತಿದ್ದು, ತನ್ನೆಲ್ಲ ಆಕ್ರೋಶಗಳನ್ನು ಹೊರಹಾಕುತ್ತಿರುವುದನ್ನು ಚಿತ್ರಿಸಲಾಗಿದೆ. ಅಷ್ಟೇ ಅಲ್ಲದೇ ಮಂಗಗಳು ಅತ್ತಿತ್ತ ಹೋಗದಂತೆ ಅತಿ ಚಿಕ್ಕ ಹಗ್ಗವನ್ನು ಕುತ್ತಿಗೆಗೆ ಬಿಗಿಯಲಾಗುತ್ತಿದೆ. ಇವೆಲ್ಲವನ್ನೂ ಕಂಡ ನಂತರ ಕ್ಯಾರಿ ಇಂಥದ್ದೊಂದು ಆದೇಶ ಹೊರಡಿಸಿದ್ದಾರೆ.

    ವೈರಿಗಳ ಎದೆಸೀಳಲು ಚೀನಾ‌ ಗಡಿಯಲ್ಲಿ ಸಜ್ಜಾಗಿದೆ ಮಹಿಳಾ ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts