More

    ಮುಂಡರಗಿಯಲ್ಲಿ ಮಂಗನ ಅಂತ್ಯಕ್ರಿಯೆ

    ಮುಂಡರಗಿ: ಪಟ್ಟಣದ ಶ್ರೀ ಲಕ್ಷ್ಮೀಕನಕನರಸಿಂಹ ದೇವಸ್ಥಾನ ಗುಡ್ಡದ ಬಳಿಯಲ್ಲಿ ಶುಕ್ರವಾರ ತಲೆಗೆ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ನರಳುತ್ತಿದ್ದ ಮಂಗವನ್ನು ಸ್ಥಳೀಯರು, ಅರಣ್ಯ ಇಲಾಖೆಯವರ ಸಹಕಾರದಿಂದ ಸ್ಥಳೀಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಿಸದೇ ಮಂಗ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆಯಿತು.
    ತಲೆಗೆ ತೀವ್ರ ಪೆಟ್ಟು ಬಿದ್ದು ತೀವ್ರ ಗಾಯಗೊಂಡಿದ್ದ ಮಂಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಹಿನ್ನೆಲೆ ಸ್ಥಳಿಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಇಲಾಖೆಯ ಜೀಪ್‌ನಲ್ಲಿ ಸಾವನ್ನಪ್ಪಿದ ಮಂಗವನ್ನು ಶ್ರೀ ಲಕ್ಷ್ಮೀಕನಕನರಸಿಂಹ ದೇವಸ್ಥಾನ ಗುಡ್ಡಕ್ಕೆ ತಂದು ಹಾಲದ ಮರದ ಕೆಳಗೆ ತಗ್ಗು ತೆಗೆದು ಅದರೊಳಗೆ ಹಾಕಿ ಪೂಜೆ ಸಲ್ಲಿಸುವ ಮೂಲಕ ಅಂತ್ಯಕ್ರಿಯೆ ನೆರವೇರಿಸಿದರು.
    ಮಂಗ ತೀವ್ರವಾಗಿ ಗಾಯಗೊಂಡು ಒದ್ದಾಡುತ್ತಿತ್ತು. ಆಗ ಅದಕ್ಕೆ ನೀರು ಕುಡಿಸಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತಾದರೂ ಮಂಗವನ್ನು ಬದುಕಿಸಲಾಗಲಿಲ್ಲ. ಅದರ ಕಳೇಬರವನ್ನು ಅಂತ್ಯಕ್ರಿಯೆ ಮಾಡಲಾಯಿತು ಎಂದು ಸ್ಥಳೀಯರಾದ ಅಡಿವೆಪ್ಪ ಛಲವಾದಿ, ಮಂಜುನಾಥ ಕಟ್ಟಿಮನಿ, ನಾಗರಾಜ ರಾಮೇನಹಳ್ಳಿ ಹಾಗೂ ಇತರರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts