More

    ಖರ್ಚು ಮಾಡಿಯೂ ತಪ್ಪದ ನಾಯಿಕಾಟ

    ಕಾರವಾರ: ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ವಿಚಾರ ಶನಿವಾರ ಆಯೋಜನೆಯಾಗಿದ್ದ ಇಲ್ಲಿನ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹಾಸ್ಯಮಯ ಚರ್ಚೆಗೆ ಕಾರಣವಾಯಿತು.

    ಗಣಪತಿ ನಾಯ್ಕ ಮಾತನಾಡಿ, ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಾದ ನಂತರ ಅವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂಬ ಆರೋಪವಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಪ್ರಯೋಜನವಾದಂತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

    ಮಕ್ಬುಲ್ ಶೇಖ್, ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಗ್ಗೆ ಯಾವುದೇ ದಾಖಲೆ ಇಲ್ಲ. ಎರಡು ನಾಯಿಗಳನ್ನು ಮಾದರಿಯಾಗಿ ನಗರಸಭೆಯಲ್ಲಿ ಇಟ್ಟುಕೊಂಡು ಚಿಕಿತ್ಸೆಯ ಪರಿಣಾಮದ ಬಗ್ಗೆ ಪರಿಶೀಲಿಸಬೇಕಿತ್ತು. ಚಿಕಿತ್ಸೆ ಯಶಸ್ವಿಯಾದ ಬಗ್ಗೆ ಸಾಕ್ಷಿ ಸಿಗುವವರೆಗೂ ಬಿಲ್ ಪಾವತಿ ಮಾಡಬಾರದು ಎಂದು ಒತ್ತಾಯಿಸಿದರು.

    ಪೌರಾಯುಕ್ತ ಆರ್.ಪಿ. ನಾಯ್ಕ ಸ್ಪಷ್ಟನೆ ನೀಡಿ, ನಗರದಲ್ಲಿ 1680 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರತಿ ಶಸ್ತ್ರಚಿಕಿತ್ಸೆಗೆ 1100 ರೂ. ಗಳಂತೆ ಟೆಂಡರ್ ನೀಡಲಾಗಿದೆ. ಇದುವರೆಗೆ 9 ಲಕ್ಷ ರೂ. ದಷ್ಟು ಬಿಲ್ ಪಾವತಿಸಲಾಗಿದೆ. ಇಡೀ ನಗರದ ಶೇ. 10ರಷ್ಟು ನಾಯಿಗಳಿಗೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ತಕ್ಷಣಕ್ಕೆ ಪರಿಣಾಮ ಗೊತ್ತಾಗದು. ಅಲ್ಲದೆ, ಪ್ರತಿ ವರ್ಷ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆದರೆ ಮಾತ್ರ ಪರಿಣಾಮ ಬೀರಲಿದೆ ಎಂದು ಹೇಳಿದರು. ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ತಳೇಕರ್ ಉಪಸ್ಥಿತರಿದ್ದರು.

    60 ಲಕ್ಷ ರೂಪಾಯಿ ನಷ್ಟ: ನಗರಸಭೆಯಿಂದ ಹೊಸ ಮೀನು ಮಾರುಕಟ್ಟೆ ಸಂಕೀರ್ಣದ ಮಳಿಗೆಗಳನ್ನು ಹರಾಜು ಮಾಡಿ ನಾಲ್ಕು ತಿಂಗಳು ಕಳೆದರೂ ಬಿಡ್​ದಾರರಿಗೆ ಹಂಚಿಕೆ ಮಾಡದ ಬಗ್ಗೆ ಮಕ್ಬುಲ್ ಶೇಖ್, ಸಂದೀಪ ತಳೇಕರ್ ಆಕ್ಷೇಪಿಸಿದರು. ಮಳಿಗೆಗಳ ಹರಾಜು ಪ್ರಕ್ರಿಯೆಗೆ ಜಿಲ್ಲಾಧಿಕಾರಿಯಿಂದ ಅನುಮೋದನೆ ನೀಡಬೇಕು. ಅಲ್ಲಿ ವಿಳಂಬವಾಗಿದೆ ಎಂದು ಆರ್.ಪಿ. ನಾಯ್ಕ ಸ್ಪಷ್ಟನೆ ನೀಡಿದರು. ಆದರೆ, ಜಿಲ್ಲಾಧಿಕಾರಿ ಕಚೇರಿಯಿಂದ ಆದ ತಪ್ಪಿಗೆ ನಗರಸಭೆಗೆ ಆದ ನಷ್ಟ ತುಂಬಿಕೊಡುವವರ್ಯಾರು ಎಂದು ಮಕ್ಬುಲ್ ಶೇಖ್ ಪ್ರಶ್ನಿಸಿದರು. ಬಿಡ್​ದಾರರ ಸಭೆ ಕರೆದು ಶೀಘ್ರ ಮಳಿಗೆ ತೆರೆಯಲು ಅನುಮತಿ ನೀಡುವ ಬಗ್ಗೆ ತೀರ್ಮಾನ ಮಾಡಲು ನಿರ್ಣಯಿಸಲಾಯಿತು.

    ರ್ಚಚಿತ ವಿಷಯಗಳು: ನಗರದಲ್ಲಿ ಅನುಮತಿ ಪಡೆಯದೆ ನವೀಕರಣ ಮಾಡಿದ 269 ಕಟ್ಟಡಗಳಿಗೆ ನೋಟಿಸ್ ಜಾರಿ ಮಾಡಿ, ಅಕ್ರಮವೆಸಗಿದ ಅಪಾರ್ಟ್​ವೆುಂಟ್​ಗಳನ್ನು ಕೈಬಿಟ್ಟ ಬಗ್ಗೆ ಸಂದೀಪ ತಳೇಕರ್ ಆಕ್ಷೇಪ. -ಎಲ್ಲ ಅನಧಿಕೃತ ಕಟ್ಟಡಗಳಿಗೂ ನೋಟಿಸ್ ನೀಡಲಾಗುವುದು. ಕಾನೂನು ತೊಡಕು ಸರಿಪಡಿಸಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಪೌರಾಯುಕ್ತರ ಭರವಸೆ.

    ನಗರಸಭೆ ನೂತನ ಕಟ್ಟಡ ಉದ್ಘಾಟನೆ ಸಮಯದಲ್ಲಿ, ಸದಸ್ಯರ ಕಡೆಗಣನೆ. ಪಕ್ಷ ಭೇದ ಮರೆತು ಎಲ್ಲ ಸದಸ್ಯರಿಂದ ವಿರೋಧ. ಸದಸ್ಯರ ವಿಶ್ರಾಂತಿಗೆ ಬೇರೆ ಹಾಲ್ ನೀಡುವುದಾಗಿ ಅಧ್ಯಕ್ಷ ನಿತಿನ್ ಪಿಕಳೆ ಭರವಸೆ.

    ಮೀನು ಮಾರುಕಟ್ಟೆ ವಿದ್ಯುದ್ದೀಕರಣಕ್ಕಾಗಿ 56 ಲಕ್ಷ ರೂ. ಗೆ ಕಾರ್ಯಾದೇಶವಾಗಿದ್ದರೂ, 65 ಲಕ್ಷ ರೂ. ಪಾವತಿ ಬಗ್ಗೆ ಸಂದೀಪ ತಳೇಕರ್ ಆಕ್ಷೇಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts