More

    ವಿಷ ಪರಿಹಾರೇಶ್ವರನಿಗೆ ವಿಶೇಷ ಪೂಜೆ

    ರಟ್ಟಿಹಳ್ಳಿ: ತಾಲೂಕಿನ ಮಕರಿ ಗ್ರಾಮದ ಪ್ರವೇಶ ದ್ವಾರದಲ್ಲಿರುವ ವಿಷ ಪರಿಹಾರೇಶ್ವರ ಕಟ್ಟೆಯ ನಾಗರ ಮೂರ್ತಿಗೆ ದೀಪಾವಳಿ ಅಮಾವಾಸ್ಯೆಯಂದು ವಿಶೇಷವಾಗಿ ಕ್ಷೀರಾಭಿಷೇಕ ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮ ಜರುಗಿದವು.

    ಅರ್ಚಕರಾದ ಈರಯ್ಯ ಆರಾಧ್ಯಮಠ ಮತ್ತು ಗಣೇಶ ಅಂಗಡಿ ನೇತೃತ್ವದಲ್ಲಿ ಬೆಳಗ್ಗೆ ನಾಗರ ಮೂರ್ತಿಗೆ ಕ್ಷೀರಾಭಿಷೇಕ ಸೇರಿ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿದವು. ಗ್ರಾಮದ ಸುತ್ತಮುತ್ತಲಿನ ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಹಾಗೂ ಪ್ರಸಾದ ಪಡೆದರು.

    ಭಕ್ತರು ತಂದ 5 ಕಲ್ಲಿನ ಹರಳುಗಳನ್ನು ವಿಷ ಪರಿಹಾರೇಶ್ವರ ಸನ್ನಿಧಿಯಲ್ಲಿ ಅರ್ಚಕರು ಮಂತ್ರಿಸಿ, ಪೂಜಿಸಿ ನೀಡಿದರು. ಈ ಕಲ್ಲಿನ ಹರಳುಗಳನ್ನು ಭಕ್ತರು ತಮ್ಮ ಮನೆಯ ಸುತ್ತಮುತ್ತ ಮತ್ತು ತೋಟದ ಮನೆಯಲ್ಲಿ ಕಟ್ಟುವುದರಿಂದ ವಿಷಜಂತುಗಳು ಮನೆಗಳಿಗೆ ಬರುವುದಿಲ್ಲ ಮತ್ತು ವಿಷ ಜಂತುಗಳಿಂದ ಯಾವುದೇ ಅವಘಡಗಳು ಸಂಭವಿಸುವುದಿಲ್ಲ ಎಂಬುದು ಭಕ್ತರ ನಂಬಿಕೆಯಾಗಿದೆ.

    ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ತಾ.ಪಂ. ಮಾಜಿ ಸದಸ್ಯ ಆರ್.ಎನ್. ಗಂಗೋಳ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮಾಲತೇಶಗೌಡ ಗಂಗೋಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts