More

    ಮಳೆಗಾಗಿ ಮದ್ದೂರಲ್ಲಿ ವಿಶೇಷ ಪ್ರಾರ್ಥನೆ

    ಮದ್ದೂರು: ಮಣ್ಣಿನಿಂದ ಮಾಡಿದ ಮಳೆರಾಯನ ಮೂರ್ತಿಯನ್ನು ಹೂವಿನಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವರುಣನಿಗಾಗಿ ಪ್ರಾರ್ಥಿಸಲಾಯಿತು.

    ಪಟ್ಟಣದ ದೊಡ್ಡಿಬೀದಿ, ಸೋಮೇಗೌಡರ ಬೀದಿ, ಹೊಳೆಬೀದಿ, ಮೇಗಲ ದೊಡ್ಡಿ, ಕೆಳಗಲದೊಡ್ಡಿ ಸೇರಿದಂತೆ ಹಲವಾರು ಬೀದಿಗಳಲ್ಲಿ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಈ ಸಂದರ್ಭ ರೈತರು ಮತ್ತು ಸಾರ್ವಜನಿಕರು ಉಯ್ಯೋ ಉಯ್ಯೋ ಮಳೆರಾಯ… ಹೂವಿನ ತೋಟಕ್ಕೆ ನೀರಿಲ್ಲ… ಬಾರೋ ಬಾರೋ ಮಳೆರಾಯ ಬಾಳೆ ತೋಟಕ್ಕೆ ನೀರಿಲ್ಲ…. ಮಳೆ ಇಲ್ಲದ ಪರಿಣಾಮ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಪ್ರಾಣಿ-ಪಕ್ಷಿಗಳಿಗೂ ನೀರಿನ ತತ್ವಾರ ಎದುರಾಗಿದ್ದು, ಮಳೆ ಆಗುವ ಮೂಲಕ ನೀರಿನ ದಾಹ ಹಿಂಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

    ಮೂರ್ತಿಗೆ ಮಹಿಳೆಯರು ನೀರು ಹಾಕಿ, ವಿಶೇಷ ಪೂಜೆ ಮಾಡಿ ಬರಮಾಡಿಕೊಂಡರು. ಅಲ್ಲದೆ ಅಕ್ಕಿ, ಕಾರದ ಪುಡಿ, ಬೇಳೆ ಸೇರಿದಂತೆ ಇತರ ದವಸ ಧಾನ್ಯಗಳನ್ನು ನೀಡಿದರು. ಮಳೆಗಾಗಿ ಏ.15ರಂದು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮ ದೇವಾಲಯ ಆವರಣದಲ್ಲಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

    ಸ್ಥಳೀಯರಾದ ಉಮೇಶ್, ರಾಜಣ್ಣ, ಎಂ.ಸಿ.ಲಿಂಗರಾಜು, ಮಧು, ಎಂ.ಸಿ.ಅರವಿಂದ್, ಬಿಪಿನ್, ಮುರಳಿ, ಅಪ್ಪು, ದಿವ್ಯಾ, ರಾಜು, ಮಹೇಶ್, ಸಂತೋಷ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts