More

    ಶ್ರೀ ಹೊಳೆ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ

    ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಗುರುವಾರ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

    ಪ್ರಾಣದೇವರು ವಿಶೇಷ ಮುಖ್ಯ ಅಂಜನೇಯಸ್ವಾಮಿಗೆ ವಿಶೇಷ ಪೂಜೆ. ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗಿನಿಂದಲೇ ಮುಖ್ಯ ಪ್ರಾಣ ದೇವರಾದ ಶ್ರೀ ಆಂಜನೇಯಸ್ವಾಮಿಗೆ ಜೇನು ಅಭಿಷೇಕ, ಪಂಚಾಮೃತ ಅಭಿಷೇಕ ನಂತರ ದೇವರಿಗೆ ವಿಶೇಷವಾದ ಹೂವಿನ ಅಲಂಕಾರ, ಮಹಾಮಂಗಳಾರತಿ, ಬಂದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

    ದೇಗುಲದ ಪ್ರಧಾನ ಅರ್ಚಕ ಪ್ರದೀಪ ಆಚಾರ್ಯ ಅವರ ಕುಟುಂಬದಿಂದ ಬುದ್ಧ ಪೂರ್ಣಿಮೆ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಶ್ರೀನಿವಾಸ್ ಕಲ್ಯಾಣ ಏರ್ಪಡಿಸಲಾಗಿತ್ತು.

    ಜಿಲ್ಲೆಯಲ್ಲಿ ಇದೆ ಪ್ರಥಮವಾಗಿ ಶ್ರೀ ಹೊಳೆ ಆಂಜನೇಯಸ್ವಾಮಿ ಪ್ರಾಣದೇವರ ರಾಜಗೋಪುರದ ಮೇಲೆ ಶ್ರೀ ಪುರಿ ಜಗನ್ನಾಥ ದೇವಸ್ಥಾನದ ಗೋಪುರಧ್ವಜವನ್ನು ಶ್ರೀ ಸನ್ನಿಧಿಯಲ್ಲಿ ಹಾರಿಸುವುದರ ಮೂಲಕ ಸಮಸ್ತ ಜನತೆಗೆ ಆ ಭಗವಂತ ಒಳ್ಳೆಯದನ್ನು ಮಾಡಲಿ ಎಂಬ ಉದ್ದೇಶದಿಂದ ಅರ್ಪಣೆ ಮಾಡಲಾಗಿದೆ ಎಂದು ಅರ್ಚಕ ಪ್ರದೀಪ್ ಆಚಾರ್ಯ ತಿಳಿಸಿದರು. ಸುರೇಶ್ ಆಚಾರ್ಯ ಇತರರು ಇದ್ದರು.

    ಮದ್ದೂರಿನ ಶ್ರೀ ಹೊಳೆ ಆಂಜನೇಯಸ್ವಾಮಿ ಪ್ರಾಣದೇವರ ರಾಜಗೋಪುರದ ಮೇಲೆ ಶ್ರೀ ಪುರಿ ಜಗನ್ನಾಥ ದೇವಸ್ಥಾನದ ಗೋಪುರಧ್ವಜವನ್ನು ಹಾರಿಸಿರುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts