More

    ಎಷ್ಟು ಭಾಷೆಗಳಿಗೆ ರೀಮೇಕ್​ ಆಗುತ್ತಿದೆ ಗೊತ್ತಾ ‘ಬ್ಲರ್​’?

    ಮುಂಬೈ: ಕಳೆದ ವಾರವಷ್ಟೇ ತಾಪ್ಸಿ ಪನ್ನು, ‘ಬ್ಲರ್​’ ಎಂಬ ಚಿತ್ರದಲ್ಲಿ ನಟಿಸುವುದರ ಜತೆಗೆ, ಆ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿರುವ ಸುದ್ದಿ ಹೊರಬಿದ್ದಿತ್ತು. ಅದಾಗಿ ಭಾನುವಾರ ಚಿತ್ರದ ಚಿತ್ರೀಕರಣ ಸಹ ನೈನತಾಲ್​ನಲ್ಲಿ ಶುರುವಾಗಿದೆ. ಹೊಸ ಸುದ್ದಿಯೇನೆಂದರೆ, ಈ ಚಿತ್ರವು ಬರೀ ಹಿಂದಿಯಲ್ಲಷ್ಟೇ ಅಲ್ಲ, ಇನ್ನೂ ಬೇರೆಬೇರೆ ಭಾಷೆಗಳಲ್ಲೂ ನಿರ್ಮಾಣವಾಗುತ್ತಿದೆಯಂತೆ.

    ಇದನ್ನೂ ಓದಿ: ಬಾಲಿವುಡ್​ ಬ್ಯೂಟಿ ಅನುಷ್ಕಾ ಶರ್ಮಾ ಬಾಡಿಗಾರ್ಡ್​ ಸಂಬಳ ಕೇಳಿದ್ರೆ ಬೆರಗಾಗುವುದು ಖಂಡಿತ!

    ‘ಬ್ಲರ್​’ ಚಿತ್ರವು ಸ್ಪಾನಿಶ್​ ಚಿತ್ರ ‘ಜೂಲಿಯಾಸ್​ ಐಸ್​’ನ ಹಿಂದಿ ರೀಮೇಕ್​. ಕೆಲವು ವರ್ಷಗಳ ಹಿಂದ ಬಿಡುಗಡೆಯಾದ ಚಿತ್ರ ಸೂಪರ್ ಹಿಟ್​ ಆಗಿತ್ತು. ಇದೀಗ ಅದು ಹಿಂದಿಯಲ್ಲಿ ತಯಾರಾಗುತ್ತಿದೆ. ವಿಶೇಷವೆಂದರೆ, ಬರೀ ಹಿಂದಿಯಷ್ಟೇ ಅಲ್ಲ, ‘ಜೂಲಿಯಾಸ್​ ಐಸ್​’ ಚಿತ್ರವು ಭಾರತದ ಬೇರೆಬೇರೆ ಭಾಷೆಗಳಲ್ಲೂ ರೀಮೇಕ್​ ಆಗುತ್ತಿದ್ದು, ಈಗಾಗಲೇ ಮರಾಠಿ ಅವತರಣಿಕೆಯ ಚಿತ್ರೀಕರಣ ಸದ್ದಿಲ್ಲದೆ ಮುಗಿದೆಯಂತೆ.

    ‘ಜೂಲಿಯಾಸ್​ ಐಸ್​’ ಚಿತ್ರವು ಮರಾಠಿಯಲ್ಲಿ ‘ಅದೃಶ್ಯ’ ಎಂಬ ಹೆಸರಿನಲ್ಲಿ ರೀಮೇಕ್​ ಆಗುತ್ತಿದ್ದು, ರಿತೇಶ್​ ದೇಶ್​ಮುಖ್​ ಮತ್ತು ಮಂಜರಿ ಫಡ್ನಿಸ್​ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಹಿರಿಯ ಛಾಯಾಗ್ರಾಹಕ ಕಬೀರ್​ ಲಾಲ್​ ನಿರ್ದೇಶನ ಮಾಡುತ್ತಿದ್ದಾರೆ.

    ಬರೀ ಮರಾಠಿಯಷ್ಟೇ ಅಲ್ಲ, ಈ ಚಿತ್ರವನ್ನು ಕಬೀರ್​ ಲಾಲ್​, ಬಂಗಾಲಿ, ತಮಿಳು ಮತ್ತು ತೆಲುಗು ಭಾಷೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಪೈಕಿ ಬಂಗಾಲಿ ಭಾಷೆಯಲ್ಲಿ ‘ಅಂತರದೃಷ್ಟಿ’ ಎಂಬ ಹೆಸರಿನಲ್ಲಿ ಚಿತ್ರ ಶುರುವಾಗಿದ್ದು, ಇದರಲ್ಲಿ ರಿತುಪರ್ಣ ಸೇನ್​ಗುಪ್ತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ರಿತೇಶ್​ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

    ಇದನ್ನೂ ಓದಿ: ಮತ್ತೆ ಬರಲಿದ್ದಾನೆ ಭಜರಂಗಿ ಭಾಯ್​ಜಾನ್​..

    ಇನ್ನು, ತಮಿಳಿನ ರೀಮೇಕ್​ಗೆ ‘ಉನ್​ ಪಾರ್ವಯಲಿಲ್​’ ಚಿತ್ರದಲ್ಲಿ ಗಾಯತ್ರಿ ಶಂಕರ್​ ನಟಿಸುತ್ತಿದ್ದರೆ, ತೆಲುಗಿನಲ್ಲಿ ‘ಅಗೋಚರ’ ಹೆಸರಿನಲ್ಲಿ ಚಿತ್ರ ರೀಮೇಕ್​ ಆಗುತ್ತಿದ್ದು, ಅದರಲ್ಲಿ ಇಷಾ ಚಾವ್ಲಾ ನಟಿಸುತ್ತಿದ್ದಾರೆ. ಈ ಚಿತ್ರಗಳ ಚಿತ್ರೀಕರಣ ಸಹ ಇತ್ತೀಚೆಗೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ, ‘ಜೂಲಿಯಾಸ್​ ಐಸ್​’ ಚಿತ್ರವು ಭಾರತದಲ್ಲಿ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಈ ಪೈಕಿ ಯಾವ ಚಿತ್ರ ಜನರಿಗೆ ಇಷ್ಟವಾಗುತ್ತದೆ ಎಂದು ಕಾದು ನೋಡಬೇಕಿದೆ.

    ಜಪಾನ್​ನಲ್ಲಿ ಸೂಪರ್​ ಹಿಟ್​ ಆಗಿದೆಯಂತೆ ರಜನಿಕಾಂತ್​ ‘ದರ್ಬಾರ್​’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts