More

    ಜಾಗದ ಸಮಸ್ಯೆ ಸುಖಾಂತ್ಯ

    ನಂದೇಶ್ವರ: ಗ್ರಾಮಗಳಲ್ಲಿ ಎಲ್ಲ ಸಮುದಾಯದವರು ಸಾಮರಸ್ಯ ಹಾಗೂ ಭಾವೈಕ್ಯದಿಂದ ಬದುಕಬೇಕು ಎಂದು ಅಥಣಿ ತಾಲೂಕು ಪಂಚಾಯಿತಿ ಇಒ ಶಿವಾನಂದ ಕಲ್ಲಾಪುರ ಹೇಳಿದರು.

    ಸಮೀಪದ ಸತ್ತಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಜರುಗಿದ ವಿಶೇಷ ಸಭೆಯಲ್ಲಿ ಲಿಂ. ಶ್ರೀ ಬಾಳಕೃಷ್ಣ ಮಹಾರಾಜರ ಸೇವಾ ಸಮಿತಿ ಹಾಗೂ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಸೇವಾ ಸಮಿತಿ ಮಧ್ಯದಲ್ಲಿ ಜಾಗದ ಕುರಿತಾಗಿ ಉಂಟಾದ ಗೊಂದಲ ಕುರಿತು ಮಾತನಾಡಿ, ಇಬ್ಬರೂ ಮಹಾತ್ಮರ ಜಾಗಗಳು ಗ್ರಾಮಸ್ಥರಿಗೆ ಸದ್ಬಳಕೆಯಾಗಬೇಕು. ಸತ್ತಿ ಗ್ರಾಮದ ಹಿರಿಯರು ಅನುಭಾವಿಗಳು ಎಂದರು. ಅಧಿಕಾರಿಗಳ ಮಾತಿಗೆ ಗೌರವ ನೀಡಿ ನ್ಯಾಯ ನಿರ್ಣಯ ಮಾಡಿಕೊಂಡಿದ್ದಕ್ಕಾಗಿ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು.

    ಒಂದು ತಿಂಗಳಿನಿಂದ ಎರಡೂ ಸಮಿತಿ ಮಧ್ಯದಲ್ಲಿ ಜಾಗದ ಕುರಿತು ಉಂಟಾಗಿದ್ದ ಸಮಸ್ಯೆಗೆ ತಾಪಂ ಇಒ ಪರಿಹಾರ ಕಲ್ಪಿಸಿದ್ದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

    ತಾಪಂ ವ್ಯವಸ್ಥಾಪಕ ಜಿ.ಎಂ. ಸ್ವಾಮಿ, ಗ್ರಾಪಂ ಅಧ್ಯಕ್ಷೆ ಸುಜಾತಾ ಸನದಿ, ಉಪಾಧ್ಯಕ್ಷ ಸಂಜೀವ ಜಮಖಂಡಿ, ಪಿಡಿಒ ಮುತ್ತುರಾಜ ಗುರವ, ಮುಖಂಡರಾದ ಶ್ರೀಶೈಲ ಜಗದೇವ, ಪ್ರಕಾಶ ಭೂಷಣ್ಣವರ, ಮಲ್ಲಪ್ಪ ಹಂಚಿನಾಳ, ವಕೀಲ ಶಂಕರ ಮಟ್ಟೆಪ್ಪನವರ, ಸಂಜೀವ ಗಡ್ಯಾಗೋಳ, ಬಸಪ್ಪ ತಮದಡ್ಡಿ, ಸಾಬು ಚಿನಗುಂಡಿ, ಮುತ್ತಪ್ಪ ನಂದೇಶ್ವರ, ವಿಠ್ಠಲ ಮೋಪಗಾರ, ಪೊಲೀಸ್ ಪೇದೆ ಆರ್.ಸಿ. ಹಾದಿಮನಿ, ಗ್ರಾಪಂ ಸದಸ್ಯರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts