More

    ಹಳೇ ಪ್ರಕರಣಗಳ ಪತ್ತೆಗೆ ಎಸ್​ಪಿ ಹೊಸ ತಂತ್ರ

    ಕಾರವಾರ: ಪೊಲೀಸ್ ಠಾಣೆಗಳಲ್ಲಿ ಧೂಳು ಹಿಡಿಯುತ್ತಿದ್ದ ಹಳೆಯ ಅಪರಾಧದ ಕಡತಗಳಿಗೆ ಕಳೆದ ಕೆಲ ತಿಂಗಳಿಂದ ಮರು ಜೀವ ಬಂದಿದೆ. ತಮ್ಮ ಚಹರೆಯನ್ನು ಪೊಲೀಸರು ಮರೆತೇ ಬಿಟ್ಟರು ಎಂದುಕೊಂಡು ಓಡಾಡಿಕೊಂಡಿದ್ದ ವರ್ಷಗಳ ಹಳೆಯ ಆರೋಪಿಗಳಿಗೆ ನಡುಕ ಶುರುವಾಗಿದೆ.

    ಹೌದು, ಜಿಲ್ಲಾ ಪೊಲೀಸ್ ಇಲಾಖೆ ಹಳೆಯ ಪತ್ತೆಯಾಗದ ಮರು ಪ್ರಕರಣಗಳ ತನಿಖೆ ಆರಂಭಿಸಿದೆ. 25 ವರ್ಷಗಳಷ್ಟು ಹಳೆಯ ಪ್ರಕರಣವೊಂದರ ಆರೋಪಿಗಳನ್ನೂ ಬಂಧಿಸಿ ಜೈಲಿಗಟ್ಟಲಾರಂಭಿಸಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ 36 ಈ ರೀತಿಯ ಹಳೆಯ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂಬುದು ವಿಶೇಷ.

    ತಂತ್ರಾಂಶದ ನೆರವು: ಠಾಣೆಗಳಲ್ಲಿ ಅಧಿಕಾರಿಗಳ ವರ್ಗಾವಣೆ, ಕೆಲಸದೊತ್ತಡ ಹಾಗೂ ವಿವಿಧ ಕಾರಣಗಳಿಂದ ನೂರಾರು ಸಣ್ಣಪುಟ್ಟ ಪ್ರಕರಣಗಳು ಪತ್ತೆಯಾಗದೇ ಹಾಗೇ ಉಳಿದುಬಿಡುತ್ತವೆ. ಯಾವುದೇ ಅಧಿಕಾರಿಗಳು ಅವುಗಳನ್ನು ಮರುಪತನಿಖೆ ಮಾಡಲು ಹೋಗುವುದಿಲ್ಲ. ಇದರಿಂದ ಪತ್ತೆಯಾಗದ ಪ್ರಕರಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದನ್ನು ತಪ್ಪಿಸಲು ಎಸ್​ಪಿ ಶಿವಪ್ರಕಾಶ ದೇವರಾಜು ತಂತ್ರಾಂಶದ ಮೊರೆ ಹೋಗಿದ್ದಾರೆ.

    ಅಪರಾಧ ಪ್ರಕರಣಗಳ ಡೇಟಾ ಪೊಲೀಸ್ ಇಲಾಖೆ ಸರ್ವರ್​ನಲ್ಲಿ ದಾಖಲಾಗಿದ್ದರೂ ಎಸ್​ಪಿ ಹಂತದ ಅಧಿಕಾರಿಗಳು ಎಲ್ಲವನ್ನೂ ಫಾಲೋ ಅಪ್ ಮಾಡುವುದು ಕಷ್ಟ. ಇದರಿಂದ ಎಸ್​ಪಿ ಖಾಸಗಿಯವರ ಸಹಕಾರದಿಂದ ಇಲಾಖೆಯ ಬಳಕೆಗಾಗಿ ತಂತ್ರಾಂಶವೊಂದನ್ನು ಅಭಿವೃದ್ಧಿ ಮಾಡಿಸಿದ್ದಾರೆ. ಅದರಲ್ಲಿ ಪ್ರತಿ ಪೊಲೀಸ್ ಠಾಣೆಯ ಬೀಟ್​ವಾರು ಪ್ರಕರಣಗಳ ವಿವರಗಳು, ಅವುಗಳ ತನಿಖೆಯ ಬಗ್ಗೆ ವಿವರ ಪಡೆಯಬಹುದಾಗಿದೆ. ಇದು ಅವರಿಗೆ ಸಹಕಾರಿಯಾಗಿದ್ದು, ಹಳೆಯ ಪ್ರಕರಣಗಳನ್ನು ನಿರಂತರವಾಗಿ ಫಾಲೋ ಅಪ್ ಮಾಡಲಾರಂಭಿಸಿದ್ದಾರೆ. ಇದರ ಪರಿಣಾಮ ವಿದೇಶಕ್ಕೆ ಅಮೇರಿಕಾಕ್ಕೆ ಪರಾರಿಯಾಗಿ ಪೌರತ್ವ ಪಡೆದಿದ್ದ ಆರೋಪಿಯೂ ಎರಡು ದಿನದ ಹಿಂದೆ ಜೈಲು ಸೇರಿದ್ದಾನೆ.

    ತಂತ್ರಾಂಶ ಬಳಕೆ: ಹೊರ ಜಿಲ್ಲೆಯ ಆರೋಪಿಗಳು ಕೊಲೆ ಮಾಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಶವಗಳನ್ನು ಎಸೆದು ಹೋಗುವ ಪ್ರಕರಣಗಳು ಹೆಚ್ಚುತ್ತಿವೆ.ಇವುಗಳು ಬಹು ವರ್ಷದವರೆಗೆ ಪತ್ತೆಯಾಗದೇ ಉಳಿದುಬಿಡುತ್ತವೆ. ಅಂಥ ಪ್ರಕರಣಗಳನ್ನು ತಂತ್ರಜ್ಞಾನ ಬಳಸಿ ಮರು ತನಿಖೆಗೆ ಆದೇಶಿಸಲಾಗಿದೆ. ಮುಂಡಗೋಡಿನಲ್ಲಿ ನಡೆದ ಮಹಿಳೆಯೊಬ್ಬಳ ಕೊಲೆಯ ಪ್ರಕರಣವನ್ನು ಕೇವಲ ಮೂಳೆಗಳ ಆಧಾರದ ಮೇಲೆ ಗುರುತಿಸಿ ಕಳೆದ ನವೆಂಬರ್​ನಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಈ ವರ್ಷದಲ್ಲಿ ಹಳೆಯ ಬಾಕಿ ಉಳಿದ 50 ಪ್ರಕರಣಗಳನ್ನು ಪತ್ತೆ ಹಚ್ಚುವ ಗುರಿ ಹೊಂದಲಾಗಿದೆ.

    ರಾಜ್ಯದಲ್ಲಿಯೇ ಮೊದಲ ಬಾರಿಗೆ ನಾವು ಬಳಕೆ ಮಾಡುತ್ತಿರುವ ತಂತ್ರಾಂಶದ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ರಾಜ್ಯದಲ್ಲೂ ಬಳಕೆ ಮಾಡುವ ಆಸಕ್ತಿ ತೋರಿದ್ದಾರೆ. ಬೇರೆ ಪೊಲೀಸ್ ವಲಯಗಳಲ್ಲೂ ಈ ವೆಬ್​ಸೈಟ್ ಬಳಕೆಗೆ ಪಡೆಯುತ್ತಿದ್ದಾರೆ.

    ಶಿವಪ್ರಕಾಶ ದೇವರಾಜು, ಎಸ್​ಪಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts