More

    ಹೊಲ-ಗದ್ದೆಯ ಮೇಲ್ವಿಚಾರಣೆಗೆ ತೆರಳಿದ್ದ ಅಪ್ಪ-ಮಗ ಹೆಣವಾದರು!

    ಬರೇಲಿ: ಉತ್ತರ ಪ್ರದೇಶದ ಸಂಬಾಲ್​ ಜಿಲ್ಲೆಯ ಸಾನ್​ಸೋಯಿ ಗ್ರಾಮದಲ್ಲಿರುವ ತಮ್ಮ ಹೊಲ-ಗದ್ದೆಗಳ ಮೇಲ್ವಿಚಾರಣೆಗೆ ತೆರಳಿದ್ದ ಸಮಾಜವಾದಿ ಪಕ್ಷದ ಮುಖಂಡ ಮತ್ತು ಅವರ ಪುತ್ರನನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

    ಚೋಟೆ ಲಾಲ್​ ದಿವಾಕರ್​ ಮತ್ತು ಅವರ ಪುತ್ರ ಹತರಾದವರು. ಬೈಕ್​ ಮೇಲೆ ಬಂದ ದುಷ್ಕರ್ಮಿಗಳು ಅಪ್ಪ ಮತ್ತು ಮಗನ ಜತೆ ಕೆಲಕಾಲ ವಾಗ್ವಾದ ನಡೆಸಿ ಬಳಿಕ ಗುಂಡು ಹಾರಿಸಿದರು. ನಂತರ ಬೈಕ್​ ಅನ್ನು ಅಲ್ಲೇ ಬಿಟ್ಟು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ನೀರನ್ನು ಪೋಲು ಮಾಡುವ ಕೃತ್ಯ ಖಂಡನೀಯ, ಶಾಸಕ ಶರತ್ ಬಚ್ಚೇಗೌಡ ಬೇಸರ, ಕಿಡಿಗೇಡಿಗಳ ಬಂಧನಕ್ಕೆ ಸೂಚನೆ

    ದಿವಾಕರ್​ ಮತ್ತು ಅವರ ಪುತ್ರ ತಮ್ಮ ಹೊಲ-ಗದ್ದೆಗಳ ಮೇಲ್ವಿಚಾರಣೆಗೆ ಮಂಗಳವಾರ ಬೆಳಗ್ಗೆ ತೆರಳಿದ್ದರು. ಈ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಯೊಂದನ್ನು ಮಾಡಲಾಗುತ್ತಿತ್ತು. ಇದಕ್ಕೆ ದಿವಾಕರ್​ ಆಕ್ಷೇಪಿಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿದ್ದವರೊಂದಿಗೆ ಮಾತಿಗೆ ಮಾತು ಬೆಳೆದಿತ್ತು ಎಂಬ ಮಾಹಿತಿ ದೊರೆತಿರುವುದಾಗಿ ಸಂಬಾಲ್​ನ ಎಸ್​ಪಿ ಯಮುನಾ ಪ್ರಸಾದ್​ ತಿಳಿಸಿದ್ದಾರೆ.

    2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ದಿವಾಕರ್​ ಸ್ಪರ್ಧಿಸಿದ್ದರು. ಆದರೆ, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್​ ನಡುವೆ ಚುನಾವಣಾ ಮೈತ್ರಿ ಏರ್ಪಟ್ಟ ಹಿನ್ನೆಲೆಯಲ್ಲಿ ಕಣದಿಂದ ಹಿಂದೆ ಸರಿದಿದ್ದರು ಎಂದು ಸಮಾಜವಾದಿ ಪಕ್ಷದ ಜಿಲ್ಲಾ ಅಧ್ಯಕ್ಷ ಫಿರೋಜ್​ ಖಾನ್​ ಮಾಹಿತಿ ನೀಡಿದ್ದಾರೆ. ಇವರು ಹಾಗೂ ಗ್ರಾಮದ ಪ್ರಧಾನ್​ ನಡುವೆ ನರೇಗಾ ಯೋಜನೆಯ ಕಾಮಗಾರಿ ಕುರಿತು ವಿವಾದ ಏರ್ಪಟ್ಟಿತ್ತು. ಇದು ಜಟಾಪಟಿಗೂ ಕಾರಣವಾಗಿತ್ತು. ಬಹುಶಃ ಇವರೇ ಅವರನ್ನು ಹತ್ಯೆ ಮಾಡಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಸರ್ಕಾರಿ ಅಧಿಕಾರಿಗಳೇ… ‘ಉಗಿಯುವ’ ಮುನ್ನ ಆಲೋಚಿಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts