More

    ಆನ್​ಲೈನ್​ ಮೀಟಿಂಗ್​ ನಡುವೆಯೇ ಬೆತ್ತಲೆ ಕಾಣಿಸಿಕೊಂಡ ರಾಜಕಾರಣಿಯ ಪತ್ನಿ: ವೈರಲ್​ ಆಯ್ತು ವಿಡಿಯೋ!

    ಕೇಪ್​ಟೌನ್​: ಕರೊನಾ ವೈರಸ್​ ಹಿನ್ನೆಲೆಯಲ್ಲಿ ಕೆಲವೆಡೆ ಇನ್ನು ವರ್ಕ್​ ಫ್ರಮ್​ ಹೋಮ್​ ಜಾರಿಯಲ್ಲಿದೆ. ಹೀಗಾಗಿ ರಾಜಕೀಯ ಸೇರಿದಂತೆ ಇನ್ನಿತರ ಕ್ಷೇತಗಳ ಬಹುತೇಕ ಸಭೆಗಳು ಆನ್​ಲೈನ್​ನಲ್ಲೇ ನಡೆಯುತ್ತಿವೆ. ಅದರಲ್ಲೂ ಜೂಮ್​ ಆ್ಯಪ್​ ಮೂಲಕವೇ ಹೆಚ್ಚು ಸಭೆಗಳು ನಡೆದಿದ್ದು, ಆನ್​ಲೈನ್​ನಲ್ಲಿ ಅನೇಕ ಅಚಾತುರ್ಯಗಳು ನಡೆದಿವೆ. ಅನೇಕರು ಮೈಮರೆತು ಖಾಸಗಿ ಕೆಲಸದಲ್ಲಿ ತೊಡಗುವ ಮೂಲಕ ಕ್ಯಾಮೆರಾ ಕಣ್ಣಲ್ಲಿ ಸಿಕ್ಕಿಬಿದ್ದು, ಮುಜುಗರ ಅನುಭವಿಸಿದ್ದಾರೆ.

    ಇಂಥದ್ದೇ ಒಂದು ಘಟನೆ ಇದೀಗ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಕರೊನಾ ಬಿಕ್ಕಟ್ಟಿನ ಕುರಿತು ಝೂಮ್​ ಕಾಲ್​ನಲ್ಲಿ ಸಂಸದೀಯ ಸಭೆ ನಡೆಯುವಾಗ ರಾಜಕಾರಣಿಯೊಬ್ಬರ ಪತ್ನಿ ಸಂಪೂರ್ಣ ಬೆತ್ತಲೆಯಾಗಿ ಕ್ಯಾಮೆರಾ ಕಣ್ಣಿಗೆ ಬೀಳುವ ಮೂಲಕ ಎಲ್ಲರನ್ನು ಮುಜುಗರಕ್ಕೀಡುಮಾಡಿದ ಪ್ರಸಂಗ ಜರುಗಿದೆ.

    ಇದನ್ನೂ ಓದಿರಿ: ಸುಷ್ಮಾ, ಜೇಟ್ಲಿ ಸಾವಿಗೆ ಪ್ರಧಾನಿಯತ್ತ ಬೊಟ್ಟು ಮಾಡಿದ ಡಿಎಂಕೆ- ಬೆಳ್ಳಂಬೆಳಗ್ಗೆ ಐಟಿ ಇಲಾಖೆ ನೀಡಿತು ಬಿಗ್​ ಶಾಕ್​!

    ದಕ್ಷಿಣ ಆಫ್ರಿಕಾದ 23 ಸಾಂಪ್ರದಾಯಿಕ ನಾಯಕರನ್ನೊಳಗೊಂಡ ನ್ಯಾಷನಲ್ ಹೌಸ್ ಆಫ್ ಟ್ರೆಡಿಶನಲ್ ಲೀಡರ್ಸ್ ಮಂಡಳಿಯ ಸದಸ್ಯ ಕ್ಸೊಲೈಲ್ ದೇವು ಅವರು ಪೂರ್ವ ಕೇಪ್​ಟೌನ್​ ಪ್ರಾಂತ್ಯದಲ್ಲಿ ಕೋವಿಡ್​ನಿಂದ ಸಂಭವಿಸಿದ ಸಾವುಗಳ ಬಗ್ಗೆ ಮಂಗಳವಾರ ಆನ್​ಲೈನ್​ ಸಭೆಯಲ್ಲಿ ಮಾತನಾಡುವಾಗ ದಿಢೀರನೇ ದೇವು ಪತ್ನಿ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಾರೆ.

    ಈ ಬಗ್ಗೆ ಆನ್​ಲೈನ್​ನಲ್ಲಿ ಮೀಟಿಂಗ್​ನಲ್ಲಿದ್ದ ಸಮಿತಿಯ ಮುಖ್ಯಸ್ಥ ಎಚ್ಚರಿಕೆಯನ್ನು ನೀಡುತ್ತಾರೆ. ನಿಮ್ಮ ಹಿಂದೆ ಇರುವವರು ಸರಿಯಾಗಿ ಬಟ್ಟೆ ಧರಿಸಿಲ್ಲ. ಇದರಿಂದ ಎಲ್ಲರಿಗೂ ಮುಜುಗರ ಉಂಟಾಗಿದೆ. ಪ್ರತಿ ಬಾರಿ ಮೀಟಿಂಗ್​ ನಡೆದಾಗಲೆಲ್ಲ ಒಂದಲ್ಲ ಒಂದು ಎಡವಟ್ಟುಗಳು ಆಗುತ್ತಿರುತ್ತವೆ. ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಿ. ಸರ್ಕಾರದ ಮಟ್ಟದಲ್ಲಿ ಚರ್ಚೆಯ ವೇಳೆ ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯ ಎಂದು ದೇವು ಅವರಿಗೆ ಸಮಿತಿ ಮುಖ್ಯಸ್ಥರು ತಿಳಿಹೇಳಿದ್ದಾರೆ.

    ಇದರ ಬೆನ್ನಲ್ಲೇ ದೇವು ಸಭೆಯಲ್ಲಿದ್ದವರ ಕ್ಷಮೆಯಾಚಿಸಿದರು. ನನ್ನನ್ನು ಕ್ಷಮಿಸಿ. ನಾನು ಕ್ಯಾಮೆರಾವನ್ನು ನೋಡುತ್ತಿದ್ದೆ. ಹಿಂದೆ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಲಿಲ್ಲ. ನನಗೂ ಸಹ ಇದರಿಂದ ಮುಜುಗರವಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿರಿ: ಕಾಂಪ್ಲೆಕ್ಸ್​ ನಿರ್ಮಾಣ: ಬಾಳೆಹಣ್ಣು ವ್ಯಾಪಾರಿ ಹರಾಜಿನಲ್ಲಿ ಕೂಗಿದ ಮೊತ್ತ ಕೇಳಿದ್ರೆ ಶಾಕ್​ ಆಗೋದು ಖಚಿತ!

    ಇದೆ ಮೊದಲೇನಲ್ಲ ಹಿಂದೊಮ್ಮೆ ಫಿಲಿಪೈನ್ಸ್​ ರಾಷ್ಟ್ರದ ಸರ್ಕಾರಿ ಅಧಿಕಾರಿಯೊಬ್ಬರು ಆನ್​ಲೈನ್​ ಸಭೆಯ ನಡುವೆಯೇ ತಮ್ಮ ಕಾರ್ಯದರ್ಶಿಯೊಂದಿಗೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದರು.

    ಬ್ರೆಜಿಲ್​ನಲ್ಲಿ ಕೌನ್ಸಿಲ್​ ಸಭೆಯನ್ನು ಸೋಶಿಯಾಲಿಸಂ ಆ್ಯಂಡ್​ ಲಿಬರ್ಟಿ ಪಕ್ಷದ ಸದಸ್ಯ ಲಿಯೊನೆಲ್​ ಬ್ರಿಜೊಲಾ ಎಂಬುವರು ಆಯೋಜಿಸಿದ್ದರು. ಸಭೆಯ ನಡುವೆಯೇ ದಂಪತಿ ಸೆಕ್ಸ್​ನಲ್ಲಿ ತೊಡಗಿರುವುದನ್ನು ನೋಡಿಯೂ ಅಥವಾ ನೋಡದೆಯೇ ಚರ್ಚೆ ಮುಂದುವರಿಸಿರುವ ವಿಡಿಯೋ ವೈರಲ್​ ಆಗಿತ್ತು. ರಿಯೋಡಿ ಜನೈರೋ ನಗರದ ಕೌನ್ಸಿಲ್​ ಸಭೆ ಅದಾಗಿತ್ತು. ಕರೊನಾ ವೈರಸ್​​ ಸಾಂಕ್ರಾಮಿಕ ಸಮಯದಲ್ಲಿ ಪುರಸಭೆಯ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಹಾರವನ್ನು ಹೇಗೆ ಖಾತರಿಪಡಿಸುವುದು ಎಂಬುದರ ಬಗ್ಗೆ ಚರ್ಚಿಸಲಾಗುತ್ತಿತ್ತು. ಇದರ ನಡುವೆ ದಂಪತಿಯ ಅಶ್ಲೀಲ ವಿಡಿಯೋವೂ ನೇರಪ್ರಸಾರವಾಗಿತ್ತು. (ಏಜೆನ್ಸೀಸ್​)

    ಕೌನ್ಸಿಲ್​ ಸಭೆ ಮಧ್ಯೆಯೇ ಸೆಕ್ಸ್​ನಲ್ಲಿ ಬಿಜಿಯಾದ ಸರ್ಕಾರಿ ಅಧಿಕಾರಿ: ವೈರಲ್​ ಆಯ್ತು ವಿಡಿಯೋ!

    ಕೌನ್ಸಿಲ್​ ಸಭೆ ಮಧ್ಯೆಯೇ ಸೆಕ್ಸ್​ನಲ್ಲಿ ಬಿಜಿಯಾದ ದಂಪತಿ: ವೈರಲ್​ ಆಯ್ತು ವಿಡಿಯೋ!

    ಬಾಯ್​ಫ್ರೆಂಡ್​ಗೆ ಕರೊನಾ ಬಂದ ಬೆನ್ನಲ್ಲೇ ಬಾಲಿವುಡ್​ ಬೆಡಗಿ ಆಲಿಯಾ ಭಟ್​ಗೂ ತಗುಲಿದ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts