More

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಐಪಿಎಲ್‌ನ ದುಬಾರಿ ಆಟಗಾರ

    ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ತಂಡದ ಆಲ್ರೌಂಡರ್ ಕ್ರಿಸ್ ಮಾರಿಸ್, ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಂಗಳವಾರ ವಿದಾಯ ಘೋಷಿಸಿದರು. 2021ರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ 16.25 ಕೋಟಿ ರೂಪಾಯಿಗೆ ಬಿಕರಿಯಾಗಿದ್ದ ಮಾರಿಸ್, ಕಳೆದ ವರ್ಷ ಲೀಗ್‌ನ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡಿದ್ದರು. ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಟೈಟಾನ್ಸ್ ತಂಡಕ್ಕೆ ತರಬೇತಿ ನೀಡಲಿದ್ದಾರೆ. 34 ವರ್ಷದ ಕ್ರಿಸ್ ಮಾರಿಸ್ ತಮ್ಮ ನಿವೃತ್ತಿ ನಿರ್ಧಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ‘ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇದುವರೆಗೂ ನನಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇನೆ. ಕೋಚಿಂಗ್ ಹುದ್ದೆ ವಹಿಸಿಕೊಳ್ಳಲು ಉತ್ಸುಕನಾಗಿರುವೆ’ ಎಂದು ಮಾರಿಸ್ ತಿಳಿಸಿದ್ದಾರೆ.

    ಬಲಗೈ ವೇಗದ ಬೌಲರ್, ಬ್ಯಾಟರ್ ಆಗಿದ್ದ ಕ್ರಿಸ್ ಮಾರಿಸ್, 2016ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಕೇವಲ 4 ಪಂದ್ಯಗಳನ್ನಷ್ಟೇ ಆಡಿದ್ದ ಮಾರಿಸ್, 173 ರನ್‌ಗಳಿಸಿ 12 ವಿಕೆಟ್ ಕಬಳಿಸಿದ್ದರು. 42 ಏಕದಿನ ಪಂದ್ಯಗಳಿಂದ 467 ರನ್, 48 ವಿಕೆಟ್, 23 ಟಿ20 ಪಂದ್ಯಗಳಿಂದ 133 ರನ್, 34 ವಿಕೆಟ್ ಪಡೆದಿದ್ದರು. ಮಾರಿಸ್ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ಪರ ಆಡಿದ್ದರು.

    2013ರಲ್ಲಿ ಸಿಎಸ್‌ಕೆ ತಂಡ 3.32 ಕೋಟಿ ರೂಪಾಯಿಗೆ ಮಾರಿಸ್ ಅವರನ್ನು ಕೊಂಡುಕೊಂಡಿತ್ತು. ಬಳಿಕ ಐಪಿಎಲ್ ಆಟಗಾರರ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಸೇಲಾಗಿದ್ದರು. 2016ರ ಹರಾಜಿನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ 7 ಕೋಟಿ ರೂ, 2020ರ ಹರಾಜಿನಲ್ಲಿ ಆರ್‌ಸಿಬಿ ತಂಡ 10 ಕೋಟಿ ಹಾಗೂ 2021ರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ 16.25 ಕೋಟಿ ರೂಪಾಯಿಗೆ ಬಿಕರಿಯಾಗಿದ್ದ ಮಾರಿಸ್, ಕಳೆದ ವರ್ಷ ಲೀಗ್‌ನ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts