More

    ಶ್ರೀಲಂಕಾ ಎದುರು ಇನಿಂಗ್ಸ್ ಮುನ್ನಡೆಯತ್ತ ದ.ಆಫ್ರಿಕಾ

    ಜೋಹಾನ್ಸ್‌ಬರ್ಗ್: ವೇಗಿ ಅನ್ರಿಚ್ ನೋರ್ಜೆ (56ಕ್ಕೆ 6) ಮಾರಕ ದಾಳಿ ಹಾಗೂ ಆರಂಭಿಕ ಡೀನ್ ಎಲ್ಗರ್ (92*ರನ್, 119 ಎಸೆತ, 16 ಬೌಂಡರಿ) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಎದುರು ಇನಿಂಗ್ಸ್ ಮುನ್ನಡೆ ಸನಿಹದಲ್ಲಿದೆ. ದಿ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಭಾನುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ಅನ್ರಿಚ್ ನೋರ್ಜೆ ಹಾಗೂ ವಿಯಾನ್ ಮುಲ್ಡೆರ್ (25ಕ್ಕೆ3) ಜೋಡಿಯ ಮಾರಕ ದಾಳಿಗೆ ನಲುಗಿ 157 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಇನಿಂಗ್ಸ್ ಆರಂಭಿಸಿರುವ ದ.ಆಫ್ರಿಕಾ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 148 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 9 ರನ್ ಗಳಿಸಬೇಕಿದೆ.

    ಇದನ್ನೂ ಓದಿ: ಧೋನಿ ಫಾರ್ಮ್ ಹೌಸ್‌ನಲ್ಲಿ ಬೆಳೆದ ತರಕಾರಿಗಳಿಗೆ ಅರಬ್ ನೆಲದಲ್ಲಿ ಭಾರಿ ಡಿಮ್ಯಾಂಡ್

    ಶ್ರೀಲಂಕಾ ಪರ ಕುಸಾಲ್ ಪೆರೇರಾ(60ರನ್, 67 ಎಸೆತ, 11 ಬೌಂಡರಿ) ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್‌ಗಳು ಆತಿಥೇಯ ಬೌಲರ್‌ಗಳಿಗೆ ಪ್ರತಿರೋಧ ನೀಡಿಲಿಲ್ಲ. ಶ್ರೀಲಂಕಾ ತಂಡವನ್ನು ಸಾಧಾರಣ ಮೊತ್ತಕ್ಕೆ ಕಡಿವಾಣ ಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತ ಕಂಡಿತು. ಡೀನ್ ಎಲ್ಗರ್ ಹಾಗೂ ರಸೀ ವ್ಯಾ ಡರ್ ಡುಸೆನ್ (40ರನ್) ಜೋಡಿ ಮುರಿಯದ 2ನೇ ವಿಕೆಟ್‌ಗೆ 114 ರನ್ ಜತೆಯಾಟವಾಡಿದೆ.

    ಇದನ್ನೂ ಓದಿ: ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲು ಶ್ರೀಲಂಕಾಗೆ ಬಂದಿಳಿದ ಇಂಗ್ಲೆಂಡ್ ತಂಡ, 

    ಶ್ರೀಲಂಕಾ: 40.3 ಓವರ್‌ಗಳಲ್ಲಿ 157 (ಕುಶಾಲ್ ಪೆರೇರಾ 60, ಲಹಿರು ತಿರುಮನ್ನೆ 17, ಪಿಡಬ್ಲ್ಯುಎಚ್ ಡಿ ಸಿಲ್ವಾ 29, ದುಶ್‌ಮಂತಾ ಚಮೀರಾ 22, ಅನ್ರಿಚ್ ನೋರ್ಜೆ 56ಕ್ಕೆ 6, ವಿಯಾನ್ ಮುಲ್ಡೆರ್ 25ಕ್ಕೆ 3). ದಕ್ಷಿಣ ಆಫ್ರಿಕಾ: 37 ಓವರ್‌ಗಳಲ್ಲಿ 1 ವಿಕೆಟ್‌ಗೆ 148 (ಡೀನ್ ಎಲ್ಗರ್ 92*, ರಸೀ ವ್ಯಾ ಡರ್ ಡುಸೆನ್ 40*, ಅಶಿತಾ ಫೆರ್ನಾಂಡೊ 30ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts