More

    ದಲಿತ ಶಾಸಕನ ಅಂತರ್ಜಾತಿ ವಿವಾಹ ಪ್ರಕರಣ: ಮಹತ್ವದ ತೀರ್ಪು ನೀಡಿದ ಮದ್ರಾಸ್​ ಹೈಕೋರ್ಟ್​!

    ಚೆನ್ನೈ: ಕೋರ್ಟ್​ ಮೆಟ್ಟಿಲೇರಿದ್ದ ಕಲಕುರಿಚಿ ಎಐಎಡಿಎಂಕೆ ಶಾಸಕ ಪ್ರಭು ಅವರ ಅಂತರ್ಜಾತಿ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆ ನಡೆಸಿದ ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

    ಪ್ರಭು ಪತ್ನಿ ಸೌಂದರ್ಯ ಅವರ ತಂದೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಈ ಪ್ರಕರಣದಲ್ಲಿ 19 ವರ್ಷದ ಸೌಂದರ್ಯ ವಯಸ್ಕಳಾಗಿದ್ದು, ಸಹಮತದಿಂದಲೇ 35 ವರ್ಷದ ಪ್ರಭು ಅವರನ್ನು ಮದುವೆಯಾಗಿದ್ದಾಳೆ. ಆಕೆಯನ್ನು ಅಪಹರಿಸಿ ಬಲವಂತವಾಗಿ ವಿವಾಹವಾಗಿಲ್ಲ. ಪ್ರಭು ಮತ್ತು ಸೌಂದರ್ಯ ನಿಶ್ಚಿಂತೆಯಿಂದ ಜೀವನ ನಡೆಸಬಹುದು ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

    ಇದನ್ನೂ ಓದಿ: ತಮಿಳುನಾಡಿನಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿದೆ ದಲಿತ ಶಾಸಕನ ಅಂತರ್ಜಾತಿ ವಿವಾಹ..!

    ತೀರ್ಪಿಗೂ ಮುನ್ನ ನ್ಯಾಯಾಲಯದಲ್ಲಿ ಪ್ರಭು ಮತ್ತು ಸೌಂದರ್ಯ ಅವರ ಹೇಳಿಕೆಯನ್ನು ಪಡೆದುಕೊಳ್ಳಲಾಯಿತು. ಸೌಂದರ್ಯ ತಂದೆ ಸ್ವಾಮಿನಾಥನ್​ ಮೇಲ್ಜಾತಿಯವರಾಗಿದ್ದು, ದಲಿತ ಶಾಸಕ ಪ್ರಭು ವಿರುದ್ಧ ಗಂಭೀರ ಆರೋಪ ಮಾಡಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ನನ್ನ ಮಗಳನ್ನು ಅಪಹರಿಸಿ, ಬಲವಂತವಾಗಿ ಮದುವೆ ಮಾಡಿಕೊಳ್ಳಲಾಗಿದೆ ಎಂದು ದೂರಿದ್ದರು. ಅಲ್ಲದೆ, ಶಾಸಕನ ಕುಟುಂಬದಿಂದ ನನಗೆ ಜೀವ ಬೆದರಿಕೆ ಇದೆ ಎಂದು ಸ್ವಾಮಿನಾಥನ್​ ಅವರು ಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್​ ಅರ್ಜಿ ಸಲ್ಲಿಸಿ, ನ್ಯಾಯಾಲಯದ ಮುಂದೆ ತನ್ನ ಮಗಳನ್ನು ಹಾಜರುಪಡಿಸಬೇಕೆಂದು ಕೇಳಿಕೊಂಡಿದ್ದರು. ​

    ಶುಕ್ರವಾರ ತನ್ನ ಪತಿ ಪ್ರಭುವಿನೊಂದಿಗೆ ಸೌಂದರ್ಯ ನ್ಯಾಯಾಲಯಕ್ಕೆ ಹಾಜರಾಗಿ ತನ್ನು ಹೇಳಿಕೆಯನ್ನು ನೀಡಿದ್ದಾರೆ.. ನನ್ನನ್ನು ಅಪಹರಿಸಿಲ್ಲ. ಬಲವಂತವಾಗಿ ಮದುವೆಯಾಗಿಲ್ಲ. ಸ್ವಇಚ್ಛೆಯಿಂದಲೇ ಮದುವೆಯಾಗಿದ್ದೇನೆಂದು ಸೌಂದರ್ಯ ಹೇಳಿದ್ದಾಳೆ. ಹೇಳಿಕೆ ಪರಿಗಣಿಸಿದ ನ್ಯಾಯಮೂರ್ತಿಗಳಾದ ಎಂಎಂ ಸುಂದರೇಶ್​ ಮತ್ತು ಕೃಷ್ಣಕುಮಾರ್​ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಸೌಂದರ್ಯ ವಯಸ್ಕಳಾಗಿದ್ದಾಳೆ. ಮದುವೆಗೆ ಯಾರೂ ಸಹ ಬಲವಂತ ಮಾಡಿಲ್ಲ. ಪರಸ್ಪರ ಒಪ್ಪಿಗೆಯಿಂದಲೇ ಮದುವೆಯಾಗಿದ್ದಾರೆ ಎಂದು ಮಹತ್ವದ ತೀರ್ಪು ನೀಡಿತು.

    ಇದನ್ನೂ ಓದಿ: ದಲಿತ ಶಾಸಕನ ಅಂತರ್ಜಾತಿ ವಿವಾಹ ಪ್ರಕರಣ: ಸ್ಫೋಟಕ ಹೇಳಿಕೆ ನೀಡಿದ ಯುವತಿ ಸೌಂದರ್ಯ..!

    ಇಷ್ಟಕ್ಕೆ ಸಹಿಸದ ಸ್ವಾಮಿನಾಥನ್​ ಇಬ್ಬರ ನಡುವೆ ವಯಸ್ಸಿನ ಅಂತರವನ್ನು ನ್ಯಾಯಾಲಯದಲ್ಲಿ ಕೆದಕಿದರು. ಆದರೆ, ಸೌಂದರ್ಯ ವಯಸ್ಕಳಾಗಿರುವುದರಿಂದ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ ಎಂದು ಹೇಳಿ ನ್ಯಾಯಾಲಯ ಪ್ರಕರಣವನ್ನೇ ರದ್ದು ಮಾಡಿತು.

    ಘಟನೆ ಹಿನ್ನೆಲೆ
    ಅಕ್ಟೋಬರ್​ 5ರಂದು ಶಾಸಕ ಪ್ರಭು ಮತ್ತು ಯುವತಿ ಸೌಂದರ್ಯ ನಡುವೆ ವರನ ನಿವಾಸದಲ್ಲೇ ಮದುವೆ ನಡೆಯಿತು. ಮದುವೇ ದಿನವೇ ನಿವಾಸಕ್ಕೆ ಆಗಮಿಸಿದ ಸೌಂದರ್ಯ ತಂದೆ ಎಸ್​. ಸ್ವಾಮಿನಾಥನ್​ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಸಿದ್ದರು. ಅಲ್ಲದೆ, ಮೇಲ್ಜಾತಿಯವರಾದ ಸ್ವಾಮಿನಾಥನ್​ ಇಲ್ಲಿ ಜಾತಿಯ ಸಮಸ್ಯೆಯಿಲ್ಲ. ಮಗಳು ಮತ್ತು ಶಾಸಕನ ನಡುವಿನ ವಯಸ್ಸಿನ ಅಂತರವೇ ನಮ್ಮ ಕಳವಳಕ್ಕೆ ಕಾರಣ ಎಂದು ಕಣ್ಣೀರಿಟ್ಟಿದ್ದರು. ಬಳಿಕ ಬಲವಂತವಾಗಿ ಮದುವೆಯಾಗಿದ್ದಾರೆಂದು ಕೋರ್ಟ್​ ಮೆಟ್ಟಿಲೇರಿದ್ದರು. (ಏಜೆನ್ಸೀಸ್​)

    ದಲಿತ ಶಾಸಕನ ಅಂತರ್ಜಾತಿ ವಿವಾಹ: ತನಗಿಂತ 16 ವರ್ಷ ದೊಡ್ಡವನ ಪ್ರೀತಿಯ ಬಲೆಯಲ್ಲಿ ಯುವತಿ ಬಿದ್ದಿದ್ದೆ ರೋಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts