More

    ಗುಂಡಿಗೆ ಗಟ್ಟಿಯಾಗಿದ್ದರೆ ಮಾತ್ರ ಬನ್ನಿ … ಹಾಗಂತ ಸೋನು ಹೇಳಿದ್ಯಾಕೆ?

    ಬಾಲಿವುಡ್​ನಲ್ಲಿ ಹೊರಗಿನವರು-ಒಳಗಿನವರು ಎಂಬ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ ಈ ಚರ್ಚೆಗೆ ಇನ್ನಷ್ಟು ವೇಗ ಸಿಕ್ಕಿದೆ.

    ಈ ಇನ್​ಸೈಡರ್​-ಔಟ್​ಸೈಡರ್​ ಬಗ್ಗೆ ಚಿತ್ರರಂಗದ ಹಲವು ಗಣ್ಯರು ಈಗಾಗಲೇ ಸಾಕಷ್ಟು ಮಾತಾಡಿದ್ದಾರೆ. ಇದು ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ, ಎಲ್ಲಾ ರಂಗಗಳಲ್ಲೂ ಈ ಹೊರಗಿನವರು ಮತ್ತು ಒಳಗಿನವರ ನಡುವೆ ತಿಕ್ಕಾಟ ನಡೆಯುತ್ತಲೇ ಇರುತ್ತದೆ ಎಂದು ಹಲವರು ಹೇಳಿಕೊಂಡಿದ್ದಾರೆ. ಈಗ ಈ ವಿಷಯವಾಗಿ ನಟ ಸೋನು ಸೂದ್​ ಸಹ ಮಾತನಾಡಿದ್ದಾರೆ.

    ಇದನ್ನೂ ಓದಿ: ಕಂಗನಾ ಕಂಡರೆ ಎಲ್ಲರಿಗೂ ಹೊಟ್ಟೆಉರಿ …’ಕ್ವೀನ್​’ ಪರವಾಗಿ ನಿಂತ ಶತ್ರುಘ್ನ ಸಿನ್ಹಾ

    ಚಿತ್ರರಂಗಕ್ಕೆ ಯಾವುದೇ ಗಾಡ್​ಫಾದರ್​ ಅಥವಾ ಪರಿಚಯವಿಲ್ಲದೆ ಬಂದ ಸೋನು ಸೂದ್​, ಈಗ ತಮ್ಮ ಪರಿಶ್ರಮದಿಂದ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಒಬ್ಬ ಹೊರಗಿನವನು, ಇಲ್ಲಿ ಬಂದು ಕಷ್ಟಪಟ್ಟು ದೊಡ್ಡ ಹೆಸರು ಮಾಡಿದಾಗ, ಆಗ ಅದು ಎಲ್ಲರಿಗೂ ಖುಷಿಕೊಡುತ್ತದೆ. ಆದರೆ, ಈ ತರಹದ ಪ್ರಕರಣಗಳಾದಾಗ, ಎಲ್ಲರ ಮನಸ್ಸು ಛಿದ್ರವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

    ‘ಇಲ್ಲಿ ನಿಜಕ್ಕೂ ಸಾಕಷ್ಟು ಒತ್ತಡಗಳಿರುತ್ತವೆ. ಪ್ರತಿ ದಿನ ಸಾವಿರಾರು ಜನ ಚಿತ್ರರಂಗಕ್ಕೆ ಬರುತ್ತಾರೆ. ಆದರೆ, ಕೆಲವರಿಗೆ ಮಾತ್ರ ದೊಡ್ಡ ಬ್ರೇಕ್​ ಸಿಗುತ್ತದೆ. ನಾನು ಇಲ್ಲಿಗೆ ಬಂದಾಗ, ನನ್ನ ಬಳಿ ಮೆಕ್ಯಾನಿಕಲ್​ ಇಂಜಿನಿಯರಿಂಗ್​ ಡಿಗ್ರಿ ಇತ್ತು. ಜನ ನನ್ನನ್ನು ಬೇರೆ ತರಹ ನೋಡಬಹುದು ಎಂದು ನನಗೆ ಅನಿಸಿತ್ತು. ಆದರೆ, ನಾನಂದುಕೊಂಡಿದ್ದು ಸುಳ್ಳು ಎಂದು ಗೊತ್ತಾಗುವುದಕ್ಕೆ ಬಹಳ ಸಮಯ ಆಗಲಿಲ್ಲ’ ಎಂದಿದ್ದಾರೆ ಸೋನು.

    ಇದನ್ನೂ ಓದಿ: ಸುಶಾಂತ್​ ಜತೆಗೆ ನಟಿಸದೇ ಇರೋಕೆ ಹೃತಿಕ್​ ಕಾರಣ …ಹೊಸ ಬಾಂಬ್​ ಸಿಡಿಸಿದ ಕಂಗನಾ

    ‘ಹೊರಗಿನಿಂದ ಬರುವವರಿಗೆ, ನಾನು ಹೇಳುವುದು ಒಂದೇ ಒಂದು ವಿಷಯ. ನಿಮಗೆ ಗಟ್ಟಿ ಗುಂಡಿಗೆ ಇದ್ದರೆ ಮಾತ್ರ ಬನ್ನಿ. ಇಲ್ಲವಾದರೆ ಬರಲೇ ಬೇಡಿ. ಇಲ್ಲಿ ಬಂದು, ರಾತ್ರೋರಾತ್ರಿ ಏನೋ ಮ್ಯಾಜಿಕ್​ ಆಗಿ ನೀವು ದೊಡ್ಡವರಾಗುತ್ತೀರಿ ಎಂಬ ಭ್ರಮೆ ಬೇಡ. ಹಾಗೆಯೇ ಒಳ್ಳೆಯ ಫಿಸಿಕ್​ ಇದೆ, ದೊಡ್ಡ ಪ್ರೊಡಕ್ಷನ್​ ಹೌಸ್​ವೊಂದು ತಮ್ಮ ಚಿತ್ರಕ್ಕೆ ಅವಕಾಶ ಕೊಡುತ್ತದೆ ಎಂದು ಭಾವಿಸಬೇಡಿ’ ಎಂದು ಹೇಳಿದ್ದಾರೆ ಸೋನು.

    ‘ಒಬ್ಬ ಸ್ಟಾರ್​ನ ಮಗ ಅಥವಾ ಮಗಳಿಗೆ ಚಿತ್ರರಂಗಕ್ಕೆ ಬರುವುದು ಸುಲಭ. ಅವರಪ್ಪ ಸುಮ್ಮನೆ ಫೋನ್​ ಮಾಡಿ, ತನಗೆ ಪರಿಚಯವಿರುವ ದೊಡ್ಡ ನಿರ್ದೇಶಕ ಅಥವಾ ನಿರ್ಮಾಪಕರಿಗೆ ಅವಕಾಶ ಕೊಡಿ ಎಂದು ಕೇಳಬಹುದು. ಹಾಗಂತ ಅಲ್ಲಿಗೆ ಎಲ್ಲವೂ ಮುಗಿಯುವುದಿಲ್ಲ. ನಾಳೆ ಆ ಸ್ಟಾರ್​ ಮಕ್ಕಳು ಇಲ್ಲಿ ನೆಲೆಯೂರಬೇಕು ಎಂದರೆ ಯಶಸ್ಸು, ಪ್ರತಿಭೆ ಎಲ್ಲವೂ ಮುಖ್ಯ’ ಎಂದು ಸೋನು ಹೇಳಿದ್ದಾರೆ.

    ತಮಿಳಿನ ಖ್ಯಾತ ನಟ ಮತ್ತವರ ತಂದೆಗೂ ಕರೊನಾ ಪಾಸಿಟಿವ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts