More

    ಸುಶಾಂತ್​ ಜತೆಗೆ ನಟಿಸದೇ ಇರೋಕೆ ಹೃತಿಕ್​ ಕಾರಣ …ಹೊಸ ಬಾಂಬ್​ ಸಿಡಿಸಿದ ಕಂಗನಾ

    ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ, ಅವರ ಪರವಾಗಿ ದೊಡ್ಡ ಮಟ್ಟದಲ್ಲಿ ನಿಂತವರು ಕಂಗನಾ ರಣಾವತ್​. ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಮುಖವಾಗಿ ಸ್ವಜನಪಕ್ಷಪಾತವೇ ಕಾರಣ ಎಂದು ಹೇಳಿರುವ ಅವರು, ಈ ಒಂದೂವರೆ ತಿಂಗಳಲ್ಲಿ ಅದರ ಬಗ್ಗೆ ಸಾಕಷ್ಟು ಮಾತಾಡಿದ್ದಾರೆ. ಜತೆಗೆ ಹಲವರ ಜತೆಗೆ ಇದೇ ವಿಷಯವಾಗಿ ಜಗಳ ಆಡಿದ್ದಾರೆ.

    ಎಲ್ಲಾ ಸರಿ, ಸುಶಾಂತ್​ ಮತ್ತು ಕಂಗನಾ ಒಂದು ಚಿತ್ರದಲ್ಲಿ ನಟಿಸಬೇಕಿದ್ದ ವಿಷಯ ನಿಮಗೆ ಗೊತ್ತಾ? ಗೊತ್ತಿಲ್ಲದಿದ್ದರೆ ಕೇಳಿ. ಸುಶಾಂತ್​ ಮತ್ತು ಕಂಗನಾ ಒಂದು ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಬೇಕಿತ್ತಂತೆ. ಕೆಲವು ವರ್ಷಗಳ ಹಿಂದೆ ಅವರ ಬಳಿ ಇಂಥದ್ದೊಂದು ಪ್ರಪೋಸ್​ ತೆಗೆದುಕೊಂಡು ಹೋದವರು ನಿರ್ದೇಶಕ ಹೋಮಿ ಅಡ್ಹಾನಿಯಾ.

    ಇದನ್ನೂ ಓದಿ: ಸುಶಾಂತ್​ ಸಿಂಗ್​ ಅನಾರೋಗ್ಯದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ನಿರ್ದೇಶಕ ರೂಮಿ ಜೆಫ್ರಿ

    ತಾವು ಬರೆದ ಕಥೆಗೆ ಕಂಗನಾ ಮತ್ತು ಸುಶಾಂತ್​ ಸರಿಯಾಗಿ ಒಪ್ಪುತ್ತಾರ ಎಂಬ ಕಾರಣಕ್ಕೆ ಅವರಿಬ್ಬರಿಗೂ ಕಥೆ ಹೇಳಿದ್ದರಂತೆ ಹೋಮಿ. ಕಂಗನಾಗೆ ಕಥೆ ಕೇಳಿ ಇಷ್ಟ ಆಗಿದೆ. ಆದರೆ, ಕೊನೆಗೂ ಆ ಚಿತ್ರದಲ್ಲಿ ಅವರು ನಟಿಸುವುದಕ್ಕೆ ಸಾಧ್ಯವಾಗಲೇ ಇಲ್ಲ. ಇಷ್ಟಕ್ಕೂ ಅವರಿಗೆ ನಟಿಸದೇ ಇರುವುದಕ್ಕೆ ಕಾರಣವೇನು ಎಂದರೆ ಆಶ್ಚರ್ಯವಾಗಬಹುದು. ಹೃತಿಕ್​ ರೋಶನ್​ರಿಂದಾಗಿ ಆ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಕಂಗನಾ ಹೇಳಿಕೊಂಡಿದ್ದಾರೆ.

    ಈ ಪ್ರಕರಣದಲ್ಲಿ ಹೃತಿಕ್​ ಏನು ಮಾಡಿದರೂ ಎಂಬ ಪ್ರಶ್ನೆ ಸಹಜ. ಕಂಗನಾಗೆ ಹೋಮಿ ಕಥೆ ಕೇಳಿದಾಗ, ಅವರು ಇಂಪ್ರೆಸ್​ ಆಗಿ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರಂತೆ. ಆದರೆ, ಅಷ್ಟರಲ್ಲಿ ಹೃತಿಕ್​, ಕಂಗನಾ ಮೇಲೆ ಕ್ರಿಮಿನಲ್​ ಕೇಸ್​ ದಾಖಲಿಸಿದ್ದಾರೆ. ಆ ನಂತರ ಅದರಲ್ಲೇ ಮುಳುಗಿ ಹೋದರಂತೆ ಕಂಗನಾ. ಹಾಗಾಗಿ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗಿಲ್ಲ.

    ಇದನ್ನೂ ಓದಿ: PHOTOS: ಜನ್ಮದಿನದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಚಿರತರುಣಿ ಸುಮನ್​ ರಂಗನಾಥನ್​…

    ಈ ಕುರಿತು ಮಾತನಾಡಿರುವ ಕಂಗನಾ, ‘ನನಗಿನ್ನೂ ಆ ದಿನ ಬಹಳ ಚೆನ್ನಾಗಿ ನೆನಪಿದೆ. ಹೋಮಿ ನನಗೆ ಫೋನ್​ ಮಾಡಿ, ಆಫೀಸ್​ಗೆ ಬರುವುದಕ್ಕೆ ಹೇಳಿದರು. ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಹೃತಿಕ್​ ನನ್ನ ಮೇಲೆ ಕೇಸ್​ ಹಾಕುರುವ ವಿಷಯ ಗೊತ್ತಾಯಿತು. ಗಾಬರಿಯಿಂದ, ಹೋಮಿ ಆಫೀಸಿಗೆ ಹೋಗಿ ಕಥೆ ಕೇಳಿದೆ. ಆದರೆ, ನನಗೆ ಕಥೆಯ ಬಗ್ಗೆ ಫೋಕಸ್​ ಮಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಕಾರಣ, ಅಷ್ಟೊಂದು ಶಾಕ್​ ಆಗಿತ್ತು’ ಎಂದು ಹೇಳಿಕೊಂಡಿದ್ದಾರೆ ಕಂಗನಾ.

    ಆ ನಂತರ, ಅದೆಲ್ಲದರಿಂದ ಆಚೆ ಬರುವುದಕ್ಕೆ ಕಂಗನಾಗೆ ಸುಮಾರು ಒಂದು ವರ್ಷ ಬೇಕಾಯಿತಂತೆ. ‘ನನ್ನ ಮಾನಸಿಕ ಸ್ಥಿತಿ ಹಾಳಾಗಿತ್ತು. ಒಂದು ವರ್ಷ ಕಾಲ ಜನ ನನ್ನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದರು. ಆ ವರ್ಷ ನಾನು ಯಾವುದೇ ಹೊಸ ಚಿತ್ರವನ್ನೂ ಒಪ್ಪಿಕೊಳ್ಳಲಿಲ್ಲ. ಹೋಮಿ ಹೇಳಿದ ಕಥೆ ಸುಮಾರಾಗಿ ನೆನಪಿದೆ. ಒಂದು ಪಕ್ಷ ಆ ಚಿತ್ರ ಮಾಡಿದ್ದರೆ, ನನ್ನ ಹಾಗೂ ಸುಶಾಂತ್​ ಜೀವನ ಬೇರೆ ತರಹವೇ ಇರೂತಿತ್ತು ಎಂದು ಆಗಾಗ ಅನಿಸುವುದಿದೆ. ಆದರೆ, ಕೊನೆಗೂ ಸುಶಾಂತ್​ ಜತೆಗೆ ನಟಿಸುವುದಕ್ಕೆ ಸಾಧ್ಯವಾಗಲೇ ಇಲ್ಲ’ ಎಂದು ಕಂಗನಾ ಹೇಳಿಕೊಂಡಿದ್ದಾರೆ.

    ಕಮಲ್​ ಹಾಸನ್​ ಹಿಂದಿಕ್ಕಿದ ಸುಶಾಂತ್​ ಸಿಂಗ್​; IMDb ರೇಟಿಂಗ್​ನಲ್ಲಿ ‘ದಿಲ್​ ಬೇಚಾರಾ’ ದಾಖಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts