More

    ಔಷಧೀಯ ವಿಜ್ಞಾನ ವೈದ್ಯಕೀಯ ವಿಜ್ಞಾನ ಪರಸ್ಪರ ಪೂರಕ

    ಧಾರವಾಡ: ಭಾರತ ಔಷಧೀಯ ವಿಜ್ಞಾನದಲ್ಲಿ ಉತ್ತಮ ಪ್ರಗತಿ ಹೊಂದುತ್ತಿದೆ. ಔಷಧೀಯ ವಿಜ್ಞಾನಿಗಳು ಹಾಗೂ ವೈದ್ಯರು ಸಮ್ಮಿಳಿತಗೊಂಡಾಗ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ನೀಡಬಹುದು. ಹೀಗಾಗಿ ಔಷಧೀಯ ವಿಜ್ಞಾನ ಹಾಗೂ ವೈದ್ಯಕೀಯ ವಿಜ್ಞಾನ ಪೂರಕವಾಗಿವೆ ಎಂದು ಹುಬ್ಬಳ್ಳಿ ಕಿಮ್ಸ್ ನಿರ್ದೇಶಕ ಡಾ. ಎಸ್.ಎ್. ಕಮ್ಮಾರ ಹೇಳಿದರು.
    ನಗರದ ಸೃಜನಾ ರಂಗಮಂದಿರದಲ್ಲಿ ಇತ್ತೀಚೆಗೆ ಜರುಗಿದ ಸೋನಿಯಾ ಶಿಕ್ಷಣ ಸಂಸ್ಥೆಯ ಔಷಧೀಯ ಮಹಾವಿದ್ಯಾಲಯ ಡಾಕ್ಟರ್ ಆ್ ಾರ್ಮಸಿ (ಾರ್ಮಾಡಿ) ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
    ಬೆಂಗಳೂರಿನ ಅಲ್ ಅಮೀನ್ ಔಷಧೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಹಮ್ಮದ್ ಸಲಾಹುದ್ದೀನ್ ಮಾತನಾಡಿ, ಕೋವಿಡ್ ನಂತರ ಔಷಧೀಯ ವಿಜ್ಞಾನದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಭಾರತವೂ ಈ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದೆ. ಈ ಚಿಕಿತ್ಸೆಯಲ್ಲಿ ಏಕಗವಾಕ್ಷಿ ಚಿಕಿತ್ಸೆ, ಕೃತಕ ಬುದ್ಧಿಮತ್ತೆ, ಇತರ ವಿಧಾನಗಳು ಜಾರಿಗೆ ಬರುತ್ತಿವೆ. ಇದಕ್ಕೆ ಪೂರಕವಾಗಿ ಔಷಧೀಯ ವಿಜ್ಞಾನ ಪದವೀಧರರು ಈ ನಿಟ್ಟಿನಲ್ಲಿ ಜ್ಞಾನಾಭಿವೃದ್ಧಿ ಮಾಡಿಕೊಳ್ಳಬೇಕು ಎಂದರು.
    ಸಂಸ್ಥೆಯ ಕಾರ್ಯದರ್ಶಿ ಡಾ. ಎಚ್.ವಿ. ಡಂಬಳ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಸಂಸ್ಥೆಯ ಉಪಾಧ್ಯಕ್ಷೆ ರೂಪಾ ಡಂಬಳ, ಸೋನಿಯಾ ಡಂಬಳ, ನಿರ್ದೇಶಕರಾದ ನವೀನ ಡಂಬಳ, ಆಕಾಶ ಡಂಬಳ, ಡೀನ್ ಡಾ. ವಿ.ಜಿ. ಜಮಖಂಡಿ, ಪ್ರಾಚಾರ್ಯ ಡಾ. ವಿ.ಎಚ್. ಕುಲಕರ್ಣಿ, ಾರ್ಮಾಡಿ ಮುಖ್ಯಸ್ಥ ಡಾ. ಪ್ರೀತಿ ಕುಲಕರ್ಣಿ, ಇತರರಿದ್ದರು.
    ಡಾ. ಸ್ಮಿತಾ ಮದಗುಂಡಿ ಮತ್ತು ಡಾ. ಅಶ್ವಿನಿ ಜೋಶಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts