More

    ಕೊರೊನಾ ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರೂ ಬದುಕಿಸಿಕೊಂಡ 55ರ ಮಗ

    ನವದೆಹಲಿ: ಪಾಶ್ಚಾತ್ಯ ದೇಶಗಳಲ್ಲಿ ಕರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ಅತ್ಯಾಧುನಿಕ ಆಸ್ಪತ್ರೆಗಳೇನೋ ಇವೆ. ಆದರೆ, ರೋಗಿ ಬದುಕುವ ಲಕ್ಷಣಗಳು ಅತ್ಯಲ್ಪ ಎನಿಸಿದರೆ ಅಲ್ಲಿನ ವೈದ್ಯರು ಅವರ ಪಾಲಿಗೆ ನಿರ್ದಯಿಗಳಾಗಿ ಬಿಡುತ್ತಾರೆ.

    ಬದುಕುವ ಭರವಸೆಯಿಲ್ಲದ ಹಿರಿಯ ಜೀವಗಳಿಗೆ ಇಟಲಿಯಲ್ಲಿ ವೆಂಟಿಲೇಟರ್​ ನೀಡಲಾಗುವುದಿಲ್ಲ ಎಂಬುದು ಕಾನೂನಿನಂತೆಯೇ ಪಾಲನೆಯಾಗುತ್ತಿದೆ. ಬ್ರಿಟನ್​ನಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ.

    ಲಂಡನ್​ನ ವಾಟ್​ಫೋರ್ಡ್​ ಜನರಲ್​ ಆಸ್ಪತ್ರೆಯಲ್ಲಿ ಕಳೆದ ಮಾರ್ಚ್​ 26ರಿಂದ ಭಾರತೀಯ ಮೂಲದ ಸೂರಿ ನತ್ವಾನಿ ಎಂಬುವರಿಗೆ ಕೋವಿಡ್​-19ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ವಯಸ್ಸು 81. ಅವರ ಶ್ವಾಸಕೋಶಗಳು ಗಂಭೀರವಾಗಿ ಹಾನಿಗೊಳಗಾಗಿದ್ದು, ವೆಂಟಿಲೇಟರ್​ನಲ್ಲಿಟ್ಟರೂ ಬದುಕುವ ಸಾಧ್ಯತೆಗಳು ತೀರಾ ಕಮ್ಮಿ. ಹೀಗಾಗಿ ಅವರನ್ನು ಮನೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದರು. ಇದು ಸಹಜವಾಗಿಯೇ ಕುಟುಂಬದ ಆತಂಕಕ್ಕೆ ಕಾರಣವಾಗಿತ್ತು.

    ಇದನ್ನೂ ಓದಿ; ಆಗಸ್ಟ್​ 15ರ ವೇಳೆಗೆ 2.5 ಕೋಟಿ ಜನರಿಗೆ ಹಬ್ಬಲಿದೆಯೇ ಕರೊನಾ?

    ತಂದೆಯನ್ನು ಮನೆಗೆ ಕರೆತಂದ ಮಗ ರಾಜ್​ ನತ್ವಾನಿ ವೈದ್ಯಕೀಯ ಕ್ಷೇತ್ರದಲ್ಲಿ ಅದೊಂದು ಪವಾಡವನ್ನೇ ಮಾಡಿದರು. ತಾನೇ ಖುದ್ದಾಗಿ ತಂದೆಯ ಆರೈಕೆಗೆ ನಿಂತರು. ಮನೆಯಲ್ಲಿನ ಒಂದು ಕೋಣೆಯನ್ನು ಸ್ವಚ್ಛಗೊಳಿಸಿ ಅವರಿಗಾಗಿ ಮೀಸಲಿಟ್ಟರು. ಮನೆಯ ಯಾವುದೇ ಸದಸ್ಯರು ಅವರ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸಿದರು.

    ವೆಂಟಿಲೇಟರ್​ಗೆ ಸೂರಿ ನತ್ವಾನಿ ಸ್ಪಂದಿಸದ ಕಾರಣ ಉಸಿರಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಲೇಬೇಕಿತ್ತು. ಮುಖಗವಸಿನಂಥ ಸಾಧನದ ಮೂಲಕ ಅವರಿಗೆ ಶುದ್ಧ ಗಾಳಿ ಪೂರೈಸುವ ವ್ಯವಸ್ಥೆ ಮಾಡಿದರು. ಉಸಿರಾಟ ಸರಾಗವಾಗುವಂತೆ ಮಾಡಲೂ ತಂದೆಯನ್ನು ತಾಸುಗಟ್ಟಲೇ ಮುಖ ಕೆಳಗೆ ಮಾಡಿ ಮಲಗಿಸುತ್ತಿದ್ದರು. ಕೊನೆಗೂ ತಂದೆಯನ್ನು ಕರೊನಾ ಸಾವಿನ ಕುಣಿಕೆಯಿಂದ ಪಾರು ಮಾಡಿದರು.
    ತಂದೆಗೂ ಕೂಡ ತಾವು ಬದುಕುಳಿಯುವ ಬಗ್ಗೆ ವಿಶ್ವಾಸವಿರಲಿಲ್ಲ. ಒಂದೊಮ್ಮೆ ನಾನು ಸಾಯುವುದಾದರೆ, ಮನೆಯಲ್ಲಿಯೇ ಸಾಯುತ್ತೇನೆ. ನನ್ನನ್ನು ಮತ್ತೆ ಅಲ್ಲಿಗೆ ಕರೆದೊಯ್ಯಬೇಡ ಎಂದು ಹೇಳಿದ್ದರು ಎಂದು ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡುವ ರಾಜ್​ ನೆನಪಿಸಿಕೊಳ್ಳುತ್ತಾರೆ.

    ಇದನ್ನೂ ಓದಿ; ಲಾಕ್​ಡೌನ್​ ಸಮಯದಲ್ಲಿ ಶ್ರೀರಾಮನ ವನವಾಸ ಪಥ ಅರಸುತ್ತ…

    ತಂದೆಯ ರಕ್ತದೊತ್ತಡ, ಆಮ್ಲಜನಕ ಪ್ರಮಾಣ ಹಾಗೂ ದೇಹದ ಉಷ್ಣತೆಯನ್ನು ಗೂಗಲ್​ ಸ್ಪ್ರೆಡ್​ಶಿಟ್​ನಲ್ಲಿ ದಾಖಲಿಸುತ್ತಿದ್ದರು. ಇದನ್ನು ನೋಡಿ ಕುಟುಂಬದ ವೈದ್ಯ ಡಾ. ಭರತ್​ ಎಂಬುವರು ಅವರಿಗೆ ನೀಡಬೇಕಾದ ಔಷಧಗಳ ಮಾಹಿತಿ ನೀಡುತ್ತಿದ್ದರು. ಮನೆಯವರನ್ನು ತಂದೆಯಿಂದ ದೂರವಿಟ್ಟಿದ್ದರೂ, ಸಂವಾದ ನಡೆಸಲು ಅನುಕೂಲವಾಗುವಂತೆ ಐಪ್ಯಾಡ್​ನಲ್ಲಿ ಆ್ಯಪ್​ ಡೌನ್​ಲೋಡ್​ ಮಾಡಿಕೊಟ್ಟಿದ್ದರು. ಇದರ ಮೂಲಕ ಮಕ್ಕಳು ಅವರ ಅಗತ್ಯಗಳನ್ನು ಪೂರೈಸುತ್ತಿದ್ದರು.

    ಕ್ರಮೇಣ ಆರೈಕೆಗೆ ಸ್ಪಂದಿಸಿದ ಸೂರಿ, ನೀವು ಮಾಡಿದ ಟೀ ಚೆನ್ನಾಗಿಲ್ಲ ಹೇಳುವ ಮಟ್ಟಿಗೆ ಅವರ ಆರೋಗ್ಯ ಚೇತರಿಸಿಕೊಂಡಿತು. ಚಿಪ್ಸ್​ ಹಾಗೂ ಪಿಜ್ಜಾ ಬೇಕು ಎಂದು ಕೇಳುವ ಮಟ್ಟಿಗೆ ಗುಣಮುಖರಾದ ಬಳಿಕ ಮನಗೆ ಅವರ ಬಗ್ಗೆ ವಿಶ್ವಾಸ ಬಂತು ಎಂದು ರಾಜ್​ ಹೇಳುತ್ತಾರೆ.

    ಅರಬ್ಬರು ತಿರುಗಿ ನೋಡುವಂತೆ ತೈಲ ಸಾಮ್ರಾಜ್ಯ ಕಟ್ಟಿದ ಭಾರತೀಯ ಆತ್ಮಹತ್ಯೆಗೆ ಶರಣಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts