More

    ಇನ್ನೊಬ್ಬರ ಆಸ್ತಿ ಮೇಲೆ ಸಾಲ ಪಡೆದು ವಂಚನೆ

    ಬೆಂಗಳೂರು: ನಕಲಿ ಅಧಿಕಾರ ಪತ್ರ ಸೃಷ್ಟಿಸಿ ತನ್ನ ಅವಿಭಜಿತ ಕುಟುಂಬದ ಆಸ್ತಿ ಆಧಾರವಾಗಿಟ್ಟು ಸಹಕಾರಿ ಸಂಸ್ಥೆಗಳಿಂದ ಕೋಟ್ಯಂತರ ರೂ. ಸಾಲ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ನಾಲ್ವರ ವಿರುದ್ಧ ಹೆಬ್ಬಾಳ ಠಾಣೆಗೆ ದೂರು ನೀಡಿದ್ದಾರೆ.

    ಡಾಲರ್ಸ್ ಕಾಲನಿ ನಿವಾಸಿ ಕಿಶೋರ್ ಹೆಗ್ಡೆ (46) ನೀಡಿದ ದೂರಿನ ಆಧಾರದ ಮೇಲೆ ಹೆಬ್ಬಾಳ ಠಾಣೆ ಪೊಲೀಸರು ಉಡುಪಿ ಮೂಲದ ಕಿಶನ್ ಹೆಗ್ಡೆ, ಪ್ರಸಾದಿನಿ ಶೆಡ್ತಿ, ಕೆ.ಜಿ.ರಸ್ತೆಯ ಕುಮಾರ್, ಹೆಬ್ಬಾಳದ ಚಿದಂಬರ ರೆಡ್ಡಿ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಷಡ್ಯಂತ್ರ ರೂಪಿಸಿ 2005ರಲ್ಲಿ ನಕಲಿ ಅಧಿಕಾರ ಪತ್ರ ಸೃಷ್ಟಿಸಿದ್ದರು.

    ನಕಲಿ ಜನರಲ್ ಪವರ್ ಆಫ್ ಅಟಾರ್ನಿಯಲ್ಲಿ ನನ್ನ ಹಾಗೂ ಸಹೋದರ ಅಮೆರಿಕ ವಾಸಿ ಕಿರಣ್ ಹೆಗ್ಡೆ, ತಾಯಿ ವಿಶಾಲಾ ಹೆಗ್ಡೆ ಅವರ ನಕಲಿ ಸಹಿಯನ್ನೂ ಸೃಷ್ಟಿಸಿದ್ದರು. ನನ್ನನ್ನು, ತನ್ನ ಸಹೋದರ, ತಾಯಿಯನ್ನು ಆರೋಪಿಗಳು ಭೇಟಿಯಾಗಲಿಲ್ಲ. ಅಲ್ಲದೆ, ಅವರ ಪರಿಚಯವೂ ಇಲ್ಲ ಎಂದು ದೂರಿನಲ್ಲಿ ಕಿಶೋರ್ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts