More

    ಕೇಂದ್ರದ ಚಾಟಿ ಬಳಿಕ ಮೆತ್ತಗಾದ ಕೇರಳ, ನಿಯಮ ಉಲ್ಲಂಘನೆಗೆ ಸಂವಹನ ಕೊರತೆ ಸಬೂಬು

    ತಿರುವವಂತಪುರ: ಲಾಕ್​ಡೌನ್​ ನಿಯಮಗಳನ್ನು ಗಾಳಿಗೆ ತೂರಿ ಜನ ಹಾಗೂ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದ ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಚಾಟಿ ಬೀಸಿದೆ. ಇದರಿಂದ ಮೆತ್ತಗಾದ ರಾಜ್ಯ ಸರ್ಕಾರವೀಗ ಲಾಕ್​ಡೌನ್​ ನಿರ್ಬಂಧಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಮುಂದಾಗಿದೆ. ನಿರ್ಬಂಧಗಳನ್ನು ಸಡಿಲಿಸಲು ಸಂವಹನ ಕೊರತೆಯೇ ಕಾರಣ ಎಂದು ಸಬೂಬು ನೀಡಿದೆ.

    ಏಪ್ರಿಲ್​ 20ರ ನಂತರ ಲಾಕ್​ಡೌನ್​ ನಿಯಮಗಳಲ್ಲಿ ಕೆಲವೊಂದು ವಿನಾಯ್ತಿಗಳನ್ನು ನೀಡಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತ್ತು. ಆದರೆ, ಕೇರಳ ಸರ್ಕಾರ ಈ ನಿಯಮಗಳನ್ನು ಉಲ್ಲಂಘಿಸಿ ಜನರ ಹಾಗೂ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಸೂಕ್ತ ವಿವರಣೆಗಳನ್ನು ನೀಡುವಂತೆ ಸೂಚಿಸಿತ್ತು. ಆದರೆ, ಮಾರ್ಗದರ್ಶಿ ಸೂತ್ರಗಳ ಬಗ್ಗೆ ಉಂಟಾಗಿದ್ದ ಸಂವಹನ ಕೊರತೆಯಿಂದ ನಿರ್ಬಂಧಗಳಿಗೆ ವಿನಾಯ್ತಿ ನೀಡಲಾಗಿತ್ತು ಎಂದು ಹೇಳಿದೆ.

    ಯಾವೆಲ್ಲ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿತ್ತು?: ರೆಸ್ಟೋರಂಟ್​, ಪುಸ್ತಕ ಮಳಿಗೆ, ಕ್ಯಾಬ್​, ಬೈಕ್​ನಲ್ಲಿ ಇಬ್ಬರು ಸಂಚರಿಸಲು ಅನುಮತಿ, ಹಾಟ್​ಸ್ಪಾಟ್​ಗಳಲ್ಲದ ಪ್ರದೇಶಗಳಲ್ಲಿ ಎಸಿ ಹೊಂದಿಲ್ಲದ ಸಲೂನ್ ಆರಂಭ, ಎಲೆಕ್ಟ್ರಾನಿಕ್​ ಹಾಗೂ ಎಲೆಕ್ಟ್ರಿಕಲ್​ ದುರಸ್ತಿ ಮಳಿಗೆಗಳು ಕಾರ್ಯ ನಿವರ್ಹಿಸಬಹುದು ಹಾಗೂ ಮನೆಗೆಲಸದವರು ಕೆಲಸಕ್ಕೆ ಹೋಗಲು ನಿರ್ಬಂಧ ಸಡಿಲಿಸಲಾಗಿತ್ತು. ಜತೆಗೆ, ಜನರ ಓಡಾಟಕ್ಕೆ ಖಾಸಗಿ ವಾಹನಗಳನ್ನು ಬಳಸಬಹುದು ಎಂದು ಹೇಳಲಾಗಿತ್ತು. ಇದು ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿತ್ತು.

    ಕೇರಳದಲ್ಲಿ ಹೋಟೆಲ್​ಗಳು ಓಪನ್​, ಬಸ್​ ಸಂಚಾರವೂ ಶುರು; ಸರ್ಕಾರದ ಕ್ರಮಕ್ಕೆ ಕೆಂಡಾಮಂಡಲವಾಯ್ತೇ ಕೇಂದ್ರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts