More

    ನೀರಿನ ಬವಣೆ ನೀಗಿಸಿ ಪುಣ್ಯಕಟ್ಟಿಕೊಳ್ಳಿ

    ಮುಂಡರಗಿ: ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಆಗ್ರಹಿಸಿ ಪುರಸಭೆ ವ್ಯಾಪ್ತಿಯ ಬ್ಯಾಲವಾಡಗಿ ಗ್ರಾಮದ ಜನರು ಮಂಗಳವಾರ ಖಾಲಿ ಕೊಡಗಳೊಂದಿಗೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್‌ಗೆ ಮನವಿ ಸಲ್ಲಿಸಿದರು.

    ಬ್ಯಾಲವಾಡಗಿ ನಿವಾಸಿ ನಬೀಸಾಬ ಕೆಲೂರ ಮಾತನಾಡಿ, ಬ್ಯಾಲವಾಡಗಿಯಲ್ಲಿ ಕುಡಿಯುವ ನೀರು (ನದಿ ನೀರು) 12ದಿನಕ್ಕೊಮ್ಮೆ, ಬಳಕೆ ನೀರು (ಬೋರ್‌ವೆಲ್ ನೀರು) ಎರಡು ಮೂರು ದಿನಗಳಿಗೊಮ್ಮೆ ಪೂರೈಸಲಾಗುತ್ತಿದೆ.

    ಈಗ ಬಿಡುವ ನೀರು ಸಾಕಾಗುತ್ತಿಲ್ಲ. ಹೀಗಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪ್ರತಿದಿನ ಒಂದು ತಾಸು ಬಳಕೆ ನೀರು ಪೂರೈಸಬೇಕು.

    ಮೂರು ದಿನಕ್ಕೊಮ್ಮೆಯಾದರೂ ನದಿ ನೀರು ಪೂರೈಸಬೇಕು. 6 ಬೋರ್‌ವೆಲ್ ಇದ್ದು, 3 ಬೋರ್‌ವೆಲ್‌ಗೆ ಪಂಪ್ ಅಳವಡಿಸಿದ್ದು, ಇನ್ನೂ 3 ಬೋರ್‌ವೆಲ್‌ಗೆ ಪಂಪ್ ಅಳವಡಿಸಿದರೆ ನೀರಿನ ಬವಣೆ ನೀಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಪುರಸಭೆ ಸದಸ್ಯ ರಾಜೇಭಕ್ಷಿ ಬೆಟಗೇರಿ, ಡಿ.ಎಂ. ಕಾತರಕಿ, ಅಡಿವೆಪ್ಪ ಛಲವಾದಿ ಮಾತನಾಡಿದರು. ಮುದುಕಪ್ಪ ಕುಂಬಾರ, ಜಾಫರ್ ಹುಬ್ಬಳ್ಳಿ, ಅಬ್ದುಲ್‌ಸಾಬ ಕೊಕ್ಕರಗುಂದಿ, ನಿಸಾರ್ ಕರ್ನಾಚಿ, ನಬೀ ಮುಲ್ಲಾ, ಸರೀಪ್ ಕಂಪ್ಲಿಮನಿ, ಮೈಬುಬ್ ಕಾಗದಕಾರ, ಸತ್ಯವ್ವ ಮುನ್ನೂರು, ರಾಧಾ ಬಾರಕೇರ, ನೂರಜಾನ್ ರಾಟಿ, ತಾರಾಬಿ ಕೊಕ್ಕರಗುಂದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts