More

    ಬರ ಪರಿಹಾರ ಪಾವತಿ ಸಮಸ್ಯೆ ನಿವಾರಿಸಿ

    ರಾಯಚೂರು: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣ ಬಹಳಷ್ಟು ರೈತರ ಖಾತೆಗೆ ಜಮಾವಣೆಗೊಂಡಿಲ್ಲ. ಹಣ ಜಮಾವಣೆಗೆ ಎದುರಾಗಿರುವ ತಾಂತ್ರಿಕ ಸಮಸ್ಯೆ ನಿವಾರಿಸಿ ಹಣ ಜಮಾವಣೆ ಮಾಡಬೇಕು ಎಂದು ಕರ್ನಾಟಕ ರೈತ ಸಂಘ ಒತ್ತಾಯಿಸಿದೆ.
    ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಬುಧವಾರ ಮನವಿ ಸಲ್ಲಿಸಿ, ಬರದಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮುಂಗಾರು ಸಿದ್ಧತೆಗೆ ಸಮಸ್ಯೆಯುಂಟಾಗಿದೆ. ಕೂಡಲೇ ಹಣ ಬಿಡುಗಡೆ ಮಾಡಿ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
    ಮೊದಲ ಹಂತದಲ್ಲಿ ಹಲವು ರೈತರ ಖಾತೆಗೆ ಹಣ ಜಮಾ ಆಗಿದೆ. ಎ್ಐಡಿ ಹೊಂದಿರುವ ರೈತರ ಖಾತೆಗಳಿಗೂ ಹಣ ಜಮಾ ಆಗಿಲ್ಲ. ಜತೆಗೆ ಕೆಲವು ಎ್ಐಡಿ ಹೊಂದಿರುವ ರೈತರ ಖಾತೆಗೆ ಹಣ ಜಮಾ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.
    ಕೂಡಲೇ ಪರಿಹಾರದ ಹಣ ಜಮಾ ಮಾಡಲು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಿ ಎಲ್ಲ ರೈತರ ಖಾತೆಗೆ ಹಣ ಜಮಾ ಮಾಡಲು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
    ನಿಯೋಗದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಅಮರೇಶ ಚಾಗಬಾವಿ, ಪದಾಕಾರಿಗಳಾದ ಹನುಮಂತಪ್ಪ ನಾಯಕ, ಶಿವಕುಮಾರ, ಗಂಗಪ್ಪ, ನಿಂಗಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts