More

    ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ; ವಿದ್ಯುತ್ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ

    ಧಾರವಾಡ: ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಪ್ರತಿದಿನ ೬ ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. ಕಬ್ಬು ಹಾಗೂ ಭತ್ತ ಬೆಳೆಯುವ ರೈತರಿಗೆ ಬೇಡಿಕೆ ಅನುಸಾರ ೬ ಗಂಟೆ ನಿರಂತರ ವಿದ್ಯುತ್ ನೀಡಲಾಗುತ್ತಿದೆ. ಬೇಸಿಗೆಕಾಲವನ್ನು ಗಮನದಲ್ಲಿಟ್ಟು ವಿದ್ಯುತ್ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚಿಸಿದರು.
    ನಗರದ ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ವಿದ್ಯುತ್ ಪೂರೈಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗದಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ರೈತರು ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಬಳಸಲು ಜಾಗೃತಿ ಮೂಡಿಸಬೇಕು. ಗೃಹಜೋತಿ ಯೋಜನೆಯಡಿ ಜಿಲ್ಲೆಯಲ್ಲಿ ಅಕ್ಟೋಬರ್‌ನಲ್ಲಿ ೪,೬೩,೯೮೩ ಫಲಾನುಭವಿಗಳು ಉಚಿತ ವಿದ್ಯುತ್ ಪಡೆದಿದ್ದು, ೯.೬೭ ಮಿಲಿಯನ್ ಯುನಿಟ್ ವಿದ್ಯುತ್ ಬಳಕೆಯಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಅನಽಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುವುದರಿಂದ ವಿದ್ಯುತ್ ಪರಿವರ್ತಕಕ್ಕೆ (ಟಿ.ಸಿ.) ಓವರ್ ಲೋಡ್ ಆಗಿ ಟಿಸಿ ಸುಡುತ್ತಿವೆ. ಹೆಸ್ಕಾಂ ಜಾಗೃತದಳ ಕ್ರಿಯಾಶೀಲವಾಗಿ ರೈತರಿಗೆ ತಿಳಿವಳಿಕೆ ನೀಡಬೇಕು ಎಂದರು.
    ವಿದ್ಯುತ್ ಸಮಸ್ಯೆಗಳ ನಿವಾರಣೆಗಾಗಿ ಉಚಿತ ಸಹಾಯವಾಣಿ ೧೯೧೨ ಅಥವಾ ೧೮೦೦೪೨೫೧೦೩೩ಗೆ ಕರೆ ಮಾಡಬಹುದು. ಟಿ.ಸಿ ಸಮಸ್ಯೆಗಳಿದ್ದರೆ ಉಚಿತ ಸಹಾಯವಾಣಿ ೧೮೦೦೪೨೫೪೭೫೪ಗೆ ಕರೆ ಮಾಡಿ ದೂರು ದಾಖಲಿಸಬಹುದು. ಸಹಾಯವಾಣಿಗೆ ಬರುವ ಕರೆಗಳನ್ನು ಸಂಬ0ಧಿಸಿದ ಅಧಿಕಾರಿಗಳು ಸ್ಪಂದಿಸಬೇಕು ಎಂದರು.
    ಹೆಸ್ಕಾ0 ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲಟ್ಟಿ, ಜಿಲ್ಲಾಽಕಾರಿ ಗುರುದತ್ತ ಹೆಗಡೆ, ಜಿ.ಪಂ. ಸಿಇಒ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಡಾ. ಗೋಪಾಲ ಬ್ಯಾಕೋಡ , ಹೆಸ್ಕಾಂ ಇಂಜಿನಿಯರ್‌ಗಳಾದ ಎಸ್.ಎಸ್. ಜಂಗಿನ್, ಜಗದೀಶ ಎಸ್., ನಿರ್ಮಲಾ ಸಿ.ಸಿ., ಎಂ.ಟಿ. ದೊಡ್ಡಮನಿ, ಎಂ.ಎ. ನದಾಫ್, ಸುಜಾತಾ ಎಂ., ಜಯಪ್ರದಾ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts