More

    ಸಾಲಿಡ್‌ವೇಸ್ಟ್ ನಿರ್ವಹಣೆ ಘಟಕ ಕಾರ್ಯಾರಂಭ  

    ದಾಂಡೇಲಿ: ನಗರಕ್ಕೆ ಸಮೀಪದ ಸಕಲಗಾ ಗ್ರಾಮದಲ್ಲಿ 2 ಎಕರೆ 16 ಗುಂಟೆ ಜಾಗದಲ್ಲಿ 2.07 ಕೋಟಿ ರೂಪಾಯಿ ವೆಚ್ಚದಲ್ಲಿ ಘನತ್ಯಾಜ್ಯ ಸಾಲಿಡ್‌ವೇಸ್ಟ್ ವಸ್ತು ನಿರ್ವಹಣೆ ಘಟಕ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಿಸಿದೆ.
    ನಗರಸಭೆಯ ಉಸ್ತುವಾರಿಯಲ್ಲಿ ನಿರ್ಮಾಣಗೊಂಡಿರುವ ಈ ಘಟಕವು ನಗರದ ಪ್ರತಿ ವಾರ್ಡ್‌ನಿಂದ ನಗರಸಭೆ ವಾಹನಗಳಲ್ಲಿ ಕಸ ಸಂಗ್ರಹಿಸಿ ತರುವಾಗಲೇ ಹಸಿ ಕಸ ಹಾಗೂ ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುತ್ತದೆ.

    ಸಾಲಿಡ್‌ವೇಸ್ಟ್ ನಿರ್ವಹಣೆ ಘಟಕ ಕಾರ್ಯಾರಂಭ  

    ಒಣ ಕಸದಲ್ಲಿ ಪ್ಲಾಸ್ಟಿಕ್ ಬಾಟಲಿ, ಚೀಲ, ಹಾಳಾದ ವಿದ್ಯುತ್ ಉಪಕರಣಗಳು, ರಟ್ಟು, ಕಬ್ಬಿಣದ ತುಣುಕು, ಡೈಪರ್ ಪ್ಯಾಡ್ಸ್  ಮುಂತಾದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕಕ್ಕೆ ಸಾಗಿಸಲಾಗುತ್ತದೆ.

    ಸಾಲಿಡ್‌ವೇಸ್ಟ್ ಘಟಕದಲ್ಲಿ ಗೊಬ್ಬರ ತಯಾರಿಕೆ

    ಕಸವನ್ನು ವಿಲೇವಾರಿ ಘಟಕಕ್ಕೆ ಸಾಗಿಸಿದ ನಂತರ ಹಸಿ ಕಸವನ್ನು ಕಾಂಪೋಸ್ಟ್ ಗುಂಡಿಯಲ್ಲಿ ತುಂಬಿಸಿ ಕನಿಷ್ಠ 30 ದಿನಗಳಿಂದ ಒಂದೂವರೆ ತಿಂಗಳವರೆಗೆ ಕೊಳೆಯಲು ಬಿಡಲಾಗುತ್ತದೆ. ಇದರಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತದೆ.

    ಮರುಬಳಕೆಯಾಗುವ ಪ್ಲಾಸ್ಟಿಕ್ ಬಾಟಲಿ, ಹಾರ್ಡ್ ಪ್ಲಾಸ್ಟಿಕ್, ಕಬ್ಬಿಣದ ಚೂರು, ರಟ್ಟು, ಇಂತಹ ವಸ್ತುಗಳನ್ನು ಒಣತ್ಯಾಜ್ಯ ಸಂಗ್ರಹಣೆ ಘಟಕದಲ್ಲಿ ಶೇಖರಿಸಿ ಸಂಗ್ರಹಿಸಲಾಗುತ್ತದೆ.

    ಪ್ರತಿ ತಿಂಗಳ ಅಂತ್ಯದಲ್ಲಿ ಹರಾಜು ಮಾಡಲಾಗುತ್ತದೆ. ಕ್ಯಾಲೋರಿಫಿಕ್ ವ್ಯಾಲ್ಯೂ ಇರುವ ಒಣ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗೆ ಕಳುಹಿಸಿ ಸಂಸ್ಕರಣೆ ಮಾಡಲಾಗುತ್ತದೆ.


    ಘಟಕದಲ್ಲಿ ಗೊಬ್ಬರ ಗುಂಡಿ, ವಿಂಡೋ ಪ್ಲಾಟ್ ಫಾರ್ಮ್, ಒಣ ತ್ಯಾಜ್ಯ ಸಂಗ್ರಹಣ ಘಟಕಗಳಿದ್ದು ಹಾಗೂ ಅವಶ್ಯಕ ಯಂತ್ರೋಪಕರಣಗಳಾದ ಟ್ರಾಮೆಲ್ ಸ್ಕ್ರೀನ್, ಬೇಲಿಂಗ್, ಛೇದಕ ಹಾಗೂ ತೂಕದ ಯಂತ್ರ ಅಳವಡಿಸಲಾಗಿದೆ.


    ಆವರಣದಲ್ಲಿ ಗಿಡ-ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೂ ಗಮನ ಹರಿಸಲಾಗಿದೆ. ಘಟಕದಲ್ಲಿ ವಿದ್ಯುತ್ ಕಡಿತದ ಸಮಯದಲ್ಲಿ ಜನರೇಟರ್ ವ್ಯವಸ್ಥೆ ಅವಶ್ಯವಾಗಿ ಬೇಕಾಗಿದೆ. ನಗರದ ಸ್ವಚ್ಛತೆ ಕಾಪಾಡುವುದರೊಂದಿಗೆ ಕಸ ಸಂಗ್ರಹಿಸಲು ಉತ್ತಮ ಜನೋಪಯೋಗಿ  ಘಟಕವಾಗಿ ಸೇವೆ ಸಲ್ಲಿಸುತ್ತಿದೆ.

    ಸಾಲಿಡ್‌ವೇಸ್ಟ್ ಘಟಕ ನಿರ್ವಹಣೆ ನಗರಸಭೆಯಿಂದ

    ನಗರಸಭೆಯ ಮೂವರು ಸಿಬ್ಬಂದಿ ಘಟಕದ ನಿರ್ವಹಣೆ ಮಾಡುತ್ತಿದ್ದಾರೆ. ನಗರಸಭೆ ಪರಿಸರ ಇಂಜಿನಿಯರ್ ಶುಭಂ ರಾಯ್ಕರ ಹಾಗೂ ಆರೋಗ್ಯ ನಿರೀಕ್ಷಕ ವಿಲಾಸಕುಮಾರ ದೇವಕರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

    ಇಲ್ಲಿ ಉತ್ಪತ್ತಿಯಾದ ಗೊಬ್ಬರವನ್ನು 5 ರೂಪಾಯಿಗೆ ಒಂದು ಕೆ.ಜಿ.ಯಂತೆ ಮಾರಾಟ ಮಾಡಲಾಗುತ್ತಿದೆ. ಮರುಬಳಕೆಯಾಗುವ ಒಣ ತ್ಯಾಜ್ಯವನ್ನು ಪ್ರತಿ ತಿಂಗಳು ಹರಾಜು ಮಾಡಿ 10 ಸಾವಿರದಿಂದ 15 ಸಾವಿರ ರೂ.ಗಳವರೆಗೂ ಆದಾಯ ಗಳಿಸಲಾಗುತ್ತಿದೆ.

    ಸದ್ಯ ದಿನಕ್ಕೆ ಸುಮಾರು 17 ಟನ್ ಕಸ ಸಂಗ್ರಹಣೆಯಾಗುತ್ತಿದ್ದು, ಅದರಲ್ಲಿ 6 ರಿಂದ 7 ಟನ್ ಒಣ ಕಸ ಮತ್ತು 11 ರಿಂದ 12 ಟನ್ ಹಸಿ ಕಸ ಸಂಗ್ರಹವಾಗುತ್ತಿದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts