More

    ಸೈನಿಕ, ರೈತ ಭಗವಂತನಿಗೆ ಸಮಾನ

    ಶಿಕಾರಿಪುರ: ದೇಶ ಕಾಯುವ ಸೈನಿಕ ಅನ್ನ ನೀಡುವ ರೈತ ಭಗವಂತನಿಗೆ ಸಮಾನ. ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಅವರಿಬ್ಬರೂ ಭಾರತೀಯರ ಎರಡು ಕಣ್ಣುಗಳಿದ್ದಂತೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗುರುರಾಜ್ ಜಕ್ಕಿನಕೊಪ್ಪ ಹೇಳಿದರು.
    ಸಮೀಪದ ಜಕ್ಕಿನಕೊಪ್ಪದಲ್ಲಿ ಶುಕ್ರವಾರ 33 ವರ್ಷದ ಬಳಿಕ ನಡೆದ ಮಾರಿಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಿಲಿಟರಿಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಟಿ.ಜಿ.ಬಸವರಾಜ ಅವರ ಸೇವೆ ಅನನ್ಯ. ಅವರು ದೇಶ ಕಾಯುವ ನಮ್ಮೂರ ಸೈನಿಕರಾಗಿದ್ದರು ಎನ್ನುವುದು ಹಿರಿಮೆ. ಇದು ನಮ್ಮೂರಿಗೆ ಸಂದ ಗೌರವ ಎಂದರು.
    ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನಿಕ ಟಿ.ಜಿ.ಬಸವರಾಜ್, ಎಲ್ಲ ವೃತ್ತಿಗಳಿಗಿಂತ ಅತ್ಯಂತ ಶ್ರೇಷ್ಠವಾದುದು ಶಿಕ್ಷಕ ಮತ್ತು ಸೈನಿಕ ವೃತ್ತಿ. ದೇಶ ಕಾಯುವ ಸೇವೆ ಮಾಡುವ ಅವಕಾಶ ದೊರೆತಿರುವುದೇ ನನ್ನ ಪುಣ್ಯ. ಇದು ನನ್ನ ಜೀವನದ ಮಹತ್ವದ ಕಾಲಘಟ್ಟ. ಪ್ರತಿಕ್ಷಣವೂ ತಾಯಿ ಭಾರತಮಾತೆಯನ್ನು ರಕ್ಷಣೆ ಮಾಡುವುದೇ ನಮ್ಮ ಗುರಿಯಾಗಿರುತ್ತದೆ ಎಂದು ಹೇಳಿದರು.
    ಸಭೆಯಲ್ಲಿ ಊರಿನ ಹಿರಿಯರಾದ ಬಿ.ಕರಿಬಸಪ್ಪ. ರೇವಣಪ್ಪ, ಪಂಚಾಯತ್ ಅಧ್ಯಕ್ಷ ಸಂತೋಷ್ ನಾಯ್ಕ, ಉಪಾಧ್ಯಕ್ಷ ತಿಮ್ಲಾನಾಯ್ಕ, ರುದ್ರೇಶ್, ಪಿಡಿಒ ಗಣೇಶ, ಕನ್ನಡ ಸಂಘದ ಅಧ್ಯಕ್ಷ ಪ್ರಲ್ಲಾದ್, ಶಿಕ್ಷಕರಾದ ನಾಗರಾಜ್, ಚನ್ನೇಶಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts