More

    ಲಕ್ಕುಂಡಿ: ನಿವೃತ್ತ ಸೈನಿಕನಿಗೆ ಸಂಭ್ರಮದ ಸ್ವಾಗತ

    ಗದಗ: ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ಗ್ರಾಮಕ್ಕೆ ಆಗಮಿಸಿದ ತಾಲೂಕಿನ ಲಕ್ಕುಂಡಿ ಗ್ರಾಮದ ರುದ್ರಪ್ಪ ಮಾರನಬಸರಿ ಅವರನ್ನು ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡರು.
    ಇಲ್ಲಿಯ ಅತ್ತಿಮಬ್ಬೆ ಮಹಾದ್ವಾರದಲ್ಲಿ ಹೂ ಮಾಲೆ ಹಾಕಿ ಬರ ಮಾಡಿಕೊಂಡ ಗ್ರಾಮದ ಯೋಧರ ಅಭಿಮಾನಿ ಬಳ ಭಾರತ ಮಾತಾ ಕೀ ಜೈ, ಜೈಜವಾನ, ಜೈಕಿಸಾನ ಘೋಷಣೆಗಳನ್ನು ಕೂಗಿದರು. ಮಾರುತಿ ದೇವಸ್ಥಾನದಲ್ಲಿ ಮಹಿಳೆಯರು ಯೋಧನಿಗೆ ಆರತಿ ಬೆಳಗಿ ಬರಮಾಡಿಕೊಂಡರು.
    ನಂತರ ನಡೆದ ಕಾರ್ಯಕ್ರಮದಲ್ಲಿ ಯುವ ಮುಖಂಡ ಬಸನಗೌಡ ಬಿರಾದಾರ ಮಾತನಾಡಿ ನಮ್ಮ ದೇಶ ರಣೆಯಲ್ಲಿ ಯೋಧರ ಪಾತ್ರ ಪ್ರಮುಖವಾಗಿದೆ. ದೇಶದ ಗಡಿ ರಣೆಯಿಂದ ನಾವೆಲ್ಲರೂ ಸುರತವಾಗಿದ್ದೇವೆ. ಇಂದು ರುದ್ರಪ್ಪ ಮಾರನಬಸರಿ ಅವರು 22 ವರ್ಷ ಚಳಿ, ಬಿಸಿಲೆನ್ನದೇ ಗಡಿ ಕಾಯುತ್ತ ದೇಶ ಸೇವೆಯನ್ನು ಸಲ್ಲಿಸಿ ಇಂದು ನಮ್ಮ ಗ್ರಾಮಕ್ಕೆ ಆಗಮಿಸಿದ್ದು ಹೆಮ್ಮೆ ತಂದಿದೆ ಎಂದರು.
    ನಿವೃತ್ತ ಯೋಧ ರುದ್ರಪ್ಪ ಮಾರನಬಸರಿ ಮಾತನಾಡಿ 22 ವರ್ಷಗಳ ಕಾಲ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯವಾಗಿದೆ. ದೇಶ ಸೇವೆ ಸಲ್ಲಿಸಲು ಗ್ರಾಮಸ್ಥರ ಸಹಕಾರ ದೊಡ್ಡದಾಗಿದೆ. ನನ್ನ ನಿವೃತ್ತಿ ಜೀವನವನ್ನು ಯುವಕರಿಗೆ ಭಾರತೀಯ ಸೇನೆ ಸೇರಲು ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು.
    ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಮಹಾಂತೇಶ ಕಮತರ, ವಿಜಯ ಬಡಿಗೇರ, ಪರಸಪ್ಪ ಗುಂಡಳ್ಳಿ, ಬಸವರಾಜ ಕುಕನೂರು, ಮಹೇಶ ಹಿರೇಹಾಳ, ಶರಣಯ್ಯ ಗಂದದ, ಅಂದಾನಯ್ಯ ನರಗುಂದಮಠ, ಮಂಜುನಾಥ ಸಜ್ಜನರ, ಈರಣ್ಣ ತಡಹಾಳ, ಮಹಾಂತೇಶ ಗುರಿಕಾರ, ಮರಿಯಪ್ಪ ವಡ್ಡರ, ಭರಮಪ್ಪ ಮಂಗಳೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts