More

    VIDEO: ಖಂಡಗ್ರಾಸ ಸೂರ್ಯಗ್ರಹಣ: ಪೊಲೀಸರಿಗೆ ಉದ್ದಿನ ವಡಾ, ಬಡವರಿಗೆ ನೀರು ಕೊಡಿ ಒಳ್ಳೆಯದಾಗತ್ತೆ..

    ಬೆಂಗಳೂರು: ಜಗತ್ತು ಬಹಳ ಕುತೂಹಲದಿಂದ ಗಮನಿಸುತ್ತಿರುವ ಖಂಡಗ್ರಾಸ ಸೂರ್ಯಗ್ರಹಣ ಈ ಭಾನುವಾರ ಸಂಭವಿಸಲಿದೆ. ಈ ಗ್ರಹಣದ ಸಂದರ್ಭದಲ್ಲಿ ಏನೇನು ಮಾಡಬೇಕು? ಯಾರನ್ನೆಲ್ಲ ಸ್ಮರಿಸಬೇಕು ಎಂಬಿತ್ಯಾದಿ ವಿವರಗಳನ್ನು ಬ್ರಹ್ಮಾಂಡ ಗುರೂಜಿ ಶ್ರೀ ನರೇಂದ್ರ ಬಾಬು ಶರ್ಮಾ ದಿಗ್ವಿಜಯ 24X7 ನ್ಯೂಸ್ ನಲ್ಲಿ ಹೇಳಿದ್ದಾರೆ.

    “ಗ್ರಹಣ ಕಾಲದಲ್ಲಿ ಗಂಗೆ, ಆಂಜನೇಯ, ಸೂರ್ಯನಾರಾಯಣ ಸ್ಮರಣೆ, ಬುಧ, ಮಹಾಲಕ್ಷ್ಮಿ ಮುಂತಾದ ಎಲ್ಲ ದೇವರ ಸ್ಮರಣೆ ಮಾಡಲೇಬೇಕು. ಕರೊನಾ ಕಾಲವಾದ್ದರಿಂದ ದೇವಸ್ಥಾನಗಳಿಗೆ ತೆರಳಿ ದಾನ ನೀಡುವುದಕ್ಕೆ ಆಗಲ್ಲ. ರವಿಗೆ ಗೋಧಿ ದಾನ ಇಷ್ಟ. ಎಲ್ಲರೂ ಚಪಾತಿಗಳನ್ನು ಮಾಡಿ. ಪಿತೃಗಳನ್ನು ನೆನಪಿಸಿಕೊಂಡು ಕಾಗೆಗಳಿಗೆ ಹಾಕಿ. ನಾಯಿಗಳಿಗೆ ಹಾಕಿ. ದಾನ ಮಾಡಿದ ಹಾಗೇ ಆಯಿತು. ಕಣ್ ಮುಂದೆಯೇ ಕಾಣುತ್ತೆ.

    ಇದನ್ನೂ ಓದಿ: VIDEO| 21ಕ್ಕೆ ಖಂಡಗ್ರಾಸ ಸೂರ್ಯಗ್ರಹಣ; ಯಾರಿಗೇನು ಫಲ

    ಎರಡನೇಯವನು ಚಂದ್ರ -ಲೆಕ್ಕದಲ್ಲಿ ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ಕೊಡಿ. ಮೊದಲೇ ಜೋಡಿಸಿ ಇಡಿ. ಗ್ರಹಣ ಬಿಟ್ಟ ಮೇಲೆಯೇ ಕೊಡಿ. ನಾಲ್ಕನೆಯವನು ರಾಹು. ಉದ್ದು ದಾನ ಮಾಡಿ. ಇಲ್ಲಿ ಉದ್ದಿನ ವಡೆ ಮಾಡಿ ಸಿದ್ಧಪಡಿಸಿಕೊಳ್ಳಿ. ಉದ್ದಿನ ವಡೆಯನ್ನು ಮನೆಯವರು ತಿನ್ನಬೇಡಿ. ನಾಯಿಗಳಿಗೆ, ಕಾಗೆ, ಗುಬ್ಬಚ್ಚಿಗಳಿಗೆ ಹಾಕಿ. ಇಲ್ಲಾಂದ್ರೆ ಚಿಕ್ಕ ಮಕ್ಕಳು ಬಂದ್ರೆ ಅವರಿಗೆ ಹಂಚಿ. ಪೊಲೀಸ್ ಇಲಾಖೆಯವರು ಬಂದರೆ ಅವರಿಗೆ ಕೊಡಿ. ಚಟ್ನಿ ಕೊಡಬೇಡಿ ಮತ್ತೆ. ಕುಜ ಅಂದರೆ ಪೊಲೀಸ್ ಡಿಪಾರ್ಟ್​ಮೆಂಟ್ ಇದ್ದ ಹಾಗೆ. ಪೊಲೀಸರಿಗೆ ವಡೆಯನ್ನು ಕೊಟ್ಟಾಗ ಕುಜ ರಾಹುವಿನ ಜತೆಗೆ ಪರಿವರ್ತನೆಯಾಗುತ್ತಾನೆ. ಬುಧನಿಗೆ ಸಂಬಂಧಿಸಿ ನೀರು ದಾನ ಮಾಡಿ. ಕುಂಭಾ, ತುಲಾ ರಾಶಿ ಬಿಟ್ಟು ಉಳಿದವರಿಗೆಲ್ಲ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ಪರಿಹಾರ ಕಾರ್ಯ ಮಾಡಬೇಕು” ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಪೂರ್ಣವಾಗಿ ಪರಿಹಾರೋಪಾಯ ಕೇಳಲು ಮೇಲಿರುವ ವಿಡಿಯೋ ಕ್ಲಿಕ್ ಮಾಡಿ..

    VIDEO : ಜೂನ್ 21ಕ್ಕೆ ಸೂರ್ಯಗ್ರಹಣ- ಒಂದಿಷ್ಟು ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts