More

    ರಾಜ್ಯದಲ್ಲಿ ರಾಹುಗ್ರಸ್ತ ಸೂರ್ಯಗ್ರಹಣಕ್ಕೆ ಮೋಕ್ಷ: ದೇವಾಲಯಗಳು ಓಪನ್​

    ಬೆಂಗಳೂರು: ಇಂದು (ಭಾನುವಾರ) ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಗೋಚರಿಸಿತು. ಬೆಳಗ್ಗೆ 10:12 ರಿಂದ ಮಧ್ಯಾಹ್ನ 1:30ರವರೆಗೆ ಸುಮಾರು ಮೂರುವರೆ ಗಂಟೆಗಳವರೆಗೆ ಸೂರ್ಯಗ್ರಹಣ ಗೋಚರಿಸಿತು.

    ಇದೀಗ ಸೂರ್ಯಗ್ರಹಣ ಮುಕ್ತಾಯವಾಗಿದ್ದು, ಗ್ರಹಣದಿಂದ ಮುಚ್ಚಿದ್ದ ದೇವಸ್ಥಾನಗಳು ಮತ್ತೆ ಓಪನ್​ ಆಗಿವೆ. ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಬಳಿಕ ವಿಶೇಷ ಪೂಜೆಗಳು ನೆರವೇರಲಿದೆ.

    ಉಡುಪಿಯ ಭೌತ ವಿಜ್ಞಾನಿ ಡಾ. ಎ.ಪಿ ಭಟ್ ಮಾಹಿತಿ ಪ್ರಕಾರ ಕಳೆದ ಡಿಸೆಂಬರ್ 26ರ ಕಂಕಣ ಸೂರ್ಯಗ್ರಹಣ ಹಾಗೂ ಇಂದಿನ ಗ್ರಹಣ ಶತಮಾನಕ್ಕೊಮ್ಮೆ ಬರುವಂತಹುದು. ಹತ್ತು ವರ್ಷಗಳಲ್ಲೊಮ್ಮೆ ಪಾರ್ಶ್ವ ಸೂರ್ಯಗ್ರಹಣ ಸಂಭವಿಸಿದರೆ ನಮಗಿನ್ನು ಪುನಃ ಕಂಕಣ ಸೂರ್ಯಗ್ರಹಣ 2064ಕ್ಕೆ ಎಂದು ತಿಳಿಸಿದ್ದಾರೆ.

    ಸೂರ್ಯ ಭೂಮಿಯ ನಡುವೆ ಚಂದ್ರ ನೇರ ಬಂದಾಗ ಸೂರ್ಯ ಗ್ರಹಣವಾಗುತ್ತದೆ. ಅದು ಕೆಲವೇ ಪ್ರದೇಶಗಳಲ್ಲಿ ಖಗ್ರಾಸ ಅಥವಾ ಕಂಕಣ ವಾಗಬಹುದು. ಚಂದ್ರ ಭೂಮಿಗಿಂತ ಸುಮಾರು 20 ಪಟ್ಟು ಚಿಕ್ಕವನಾದುದರಿಂದ ಸೂರ್ಯಗ್ರಹಣ ಹೆಚ್ಚೆಂದರೆ 7.5 ನಿಮಿಷ ಮಾತ್ರ ಇರುತ್ತದೆ ಎಂದು ಅವರು ಹೇಳಿದ್ದಾರೆ.

    VIDEO| ಸೂರ್ಯಗ್ರಹಣ: ಶುಭವೋ ಅಶುಭವೋ?-ಕೌತುಕಕ್ಕೆ ಸಾಕ್ಷಿಯಾಗಲಿದೆ ನಭೋಮಂಡಲ

    VIDEO: ಖಂಡಗ್ರಾಸ ಸೂರ್ಯಗ್ರಹಣ: ಪೊಲೀಸರಿಗೆ ಉದ್ದಿನ ವಡಾ, ಬಡವರಿಗೆ ನೀರು ಕೊಡಿ ಒಳ್ಳೆಯದಾಗತ್ತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts