More

    ಸಮಾಜಮುಖಿ ಸಾಹಿತ್ಯ ರಚನೆ

    ಸಿಂಧನೂರು: ಯಾರೊಂದಿಗೂ ರಾಜಿಯಾಗದೇ ತಮ್ಮದೇ ಚಾಪು ಮೂಡಿಸಿದ ಡಿ.ಎಸ್. ವೀರಯ್ಯನವರು ಗಟ್ಟಿತನ ಸಾಹಿತ್ಯ ಕೊಟ್ಟಿದ್ದಾರೆ ಎಂದು ಕಲಬುರ್ಗಿ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಪ್ರೊ.ಎಚ್.ಟಿ. ಪೋತೆ ಹೇಳಿದರು.

    ಇದನ್ನೂ ಓದಿ:ಭಕ್ತಿ, ಬಂಡಾಯಕ್ಕೆ ಒಂದೇ ನೆಲಗಟ್ಟು: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಗೀತಾಮಣಿ ಅಭಿಮತ

    ನಗರದ ಪಾಟೀಲ್ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಿಂಧನೂರು, ಡಿ.ಎಸ್.ವಿ ಫೌಂಡೇಷನ್ ಬೆಂಗಳೂರು ಹಾಗೂ ಪಾಟೀಲ್ ಪದವಿ ಮಹಿಳಾ ಮಹಾವಿದ್ಯಾಲಯ ಸಂಯುಕ್ತಾಶಯದಲ್ಲಿ ಡಿ.ಎಸ್.ವೀರಯ್ಯ ಸೃಜನ ಸಾಹಿತ್ಯ ಅವಲೋಕನ ಎಂಬ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಬುದ್ಧನ ಮಾನವೀಯತೆ, ಬಸವೇಶ್ವರರ ಸಾಮಾಜಿಕ ಚಿಂತನೆ, ಅಂಬೇಡ್ಕರ್ ಅವರ ಸಮಾನತೆಯ ಚಿಂತನೆಗಳು ಡಿಎಸ್‌ವಿ ಸಾಹಿತ್ಯದಲ್ಲಿ ಕಂಡುಬರುತ್ತದೆ. ಸಮಾಜಮುಖಿ ಸಾಹಿತ್ಯಕ್ಕೆ ಹಿಡಿದ ಕನ್ನಡಿಯ ಕೃತಿಗಳಾಗಿವೆ ಎಂದರು.

    ವಿಶಿಷ್ಟ ವ್ಯಕ್ತಿತ್ವ

    ಬೆಂಗಳೂರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಡಿ.ಎಸ್. ವೀರಯ್ಯನವರ ಚರ್ತುಮುಖ ಪ್ರತಿಭೆಯುಳ್ಳವರಾಗಿದ್ದು ರಾಜಕೀಯ ಹೋರಾಟ, ಸಾಮಾಜಿಕ ಹಾಗೂ ಸಾಹಿತ್ಯಕ ಆಯಾಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿಶಿಷ್ಟ ವ್ಯಕ್ತಿತ್ವ ಬೆಳಸಿಕೊಂಡಿದ್ದಾರೆ. ರಾಜಕೀಯ ಮತ್ತು ಸಾಹಿತ್ಯ ಭಿನ್ನಕ್ಷೇತ್ರಗಳೂ ಈ ಎರಡು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಬೆರಳಣಿಕೆಯಷ್ಟು, ಅದರಲ್ಲಿ ಡಿಎಸ್‌ವಿ ಒಬ್ಬರು. ಇವರ ಸಾಹಿತ್ಯ ಕುರಿತು ಹೊಸತೆಲೆಮಾರಿನ ಚಿಂತನೆಗಳು ಹೊರದುಮ್ಮಲಿ ಎಂದರು. ಪಾಟೀಲ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಸಿ. ಪಾಟೀಲ್ ಮಾತನಾಡಿ, ಸಿಂಧನೂರಿನಲ್ಲಿ ಸಾಂಸ್ಕೃತಿಕ, ಸಾಹಿತ್ಯದ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts