More

    ಸಮಾಜ ಅಭಿವೃದ್ಧಿಗೆ ಪತ್ರಿಕೆಗಳು ಅವಶ್ಯ: ಶ್ರೀ ಮರುಳಾರಾಧ್ಯ ಶಿವಾಚಾರ್ಯರ ಆಶೀರ್ವಚನ

    ಅಳವಂಡಿ: ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಭ್ರಷ್ಟಾಚಾರವನ್ನು ಬಯಲಿಗೆಳೆದು ಜನರಿಗೆ ನ್ಯಾಯ ದೊರಕಿಸಿ ಕೊಡುವುದು ಪತ್ರಿಕೆಯ ಪ್ರಮುಖ ಉದ್ದೇಶ ಎಂದು ಶ್ರೀ ಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.


    ಗ್ರಾಮದ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಅಳವಂಡಿ ಹೋಬಳಿ ಪತ್ರಕರ್ತರು ಹಾಗೂ ಸಿದ್ದೇಶ್ವರ ಕಾಲೇಜು ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
    ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಜನರಿಗೆ ಉಪಯುಕ್ತವಾಗುವ ಮಾಹಿತಿ ನೀಡಬೇಕು. ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಬಡವರಿಗೆ ಸರ್ಕಾರದಿಂದ ಸೌಲಭ್ಯ ದೊರಕಿಸಿ ಕೊಡಬೇಕು. ಜನಪದ ಹಾಡುಗಳು ಸಮಾಜದಲ್ಲಿ ಮಾಧ್ಯಮವಾಗಿ ಕೆಲಸ ಮಾಡಿವೆ. ಪತ್ರಿಕೆಗಳು ನಿಪ್ಷಕ್ಷವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯ ಎಂದರು.

    ಇದನ್ನೂ ಓದಿ: ವಿಷಯ ವಿಶ್ಲೇಷಣೆಯಲ್ಲಿ ರಂಜನೆ ಅನಗತ್ಯ; ಪತ್ರಿಕಾ ದಿನಾಚರಣೆಯಲ್ಲಿ ಡಿವೈಎಸ್ಪಿ ನಂಜುಂಡೇಗೌಡ ಅಭಿಮತ


    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಾಲೇಜು ಅಧ್ಯಕ್ಷ ಭುಜಂಗಸ್ವಾಮಿ ಇನಾಮದಾರ, ಪತ್ರಕರ್ತರಾದ ವಿ.ಕೆ.ರವೀಂದ್ರ, ಪ್ರಮೋದ ಕುಲಕರ್ಣಿ, ಪ್ರಮುಖರಾದ ಮಹಾಂತೇಶ, ಹನುಮಂತಪ್ಪ, ತೋಟಯ್ಯ, ಮಲ್ಲಪ್ಪ, ಬೀರಪ್ಪ, ವಿ.ಎಚ್.ಪುಲೇಶಿ, ಚಂದ್ರಶೇಖರ, ಮಹಾನಂದಿ, ನವೀನ, ನೀಲಪ್ಪ, ಮಹೇಶ, ಅಂಬರೀಶ, ಹನುಮಂತ, ಸಿದ್ದು, ಸುರೇಶ, ಮಂಜುನಾಥ, ಹನುಮಂತಗೌಡ, ಪಂಚಪ್ಪ, ಗವಿಸಿದ್ದಪ್ಪ, ವಿಜಯಕುಮಾರ, ಷಣ್ಮುಖಯ್ಯ, ಜಾನಪದ ಕಲಾವಿದ ಜೀವನಸಾಬ್ ಬಿನ್ನಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts