More

    ಜನಸೇವಕ ಚಂದ್ರಶೇಖರ್​ಗೆ ವಿಜಯರತ್ನ ಗರಿ: ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಬೆಂಗಳೂರು: ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಮೂಲಕ ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಜನಪ್ರಿಯರಾಗಿರುವ ಸಮಾಜ ಸೇವಕ ಎಂ.ಚಂದ್ರಶೇಖರ್ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ವಿಜಯ ರತ್ನ-2022’ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಜನಸೇವಕ ಚಂದ್ರಶೇಖರ್​ಗೆ ವಿಜಯರತ್ನ ಗರಿ: ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ
    ಸಮಾಜಸೇವಕ ಎಂ.ಚಂದ್ರಶೇಖರ್ ಅವರಿಗೆ ಸಚಿವ ಡಾ. ಕೆ. ಸುಧಾಕರ್ ಮತ್ತು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಿದರು.

    ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್, ಚಿತ್ರನಟ ರಮೇಶ್ ಅರವಿಂದ್, ನಟಿ ಶರ್ವಿುಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

    ಬಡವರ ಪ್ರೀತಿಯ ಚಂದ್ರಣ್ಣ: ಬಸವನಗುಡಿ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಚಂದ್ರಶೇಖರ್, ಯಾವುದೇ ಪ್ರತಿಫಲ ಅಪೇಕ್ಷೆ ಪಡದೆ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಭಾಗದ ಜನರು ಇವರನ್ನು ಪ್ರೀತಿಯಿಂದ ಚಂದ್ರಣ್ಣ ಎಂದು ಕರೆಯುತ್ತಾರೆ. ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ಬರುವ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆಗಿನ ಮುಖ್ಯಮಂತ್ರಿ ಬಂಗಾರಪ್ಪ ಅವರಿಂದ ಈಗಿನ ಶಾಸಕ ರವಿಸುಬ್ರಮಣ್ಯ ವರೆಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗಿರುವ ಚಂದ್ರಣ್ಣ ಪಾದರಸದಂತೆ ಅತ್ಯಂತ ಕ್ರಿಯಾಶೀಲರಾಗಿ ಓಡಾಡಿ ಜನರ ಸೇವೆ ಮಾಡುತ್ತಿದ್ದಾರೆ. ಸದಾ ಹಸನ್ಮುಖಿಯಾಗಿರುವ ಇವರು ಪರಿಸರ ಮತ್ತು ಪ್ರಾಣಿ-ಪಕ್ಷಿಗಳನ್ನು ಪ್ರೀತಿಸುವ ಗುಣವುಳ್ಳವರಾಗಿದ್ದು, ಇತರರ ಕಷ್ಟಗಳಿಗೆ ಮರುಗುವ ಕರುಣಾಳು.

    ಸಮಾಜ ಮುಖಿ ಕೆಲಸಗಳು: ಬಿಬಿಎಂಪಿಯ ಬಡವರ ಕಲ್ಯಾಣ ಕಾರ್ಯಕ್ರಮಗಳಾದ ವೃತ್ತಿ ನಿರತರಿಗೆ ಎಲೆಕ್ಟ್ರಿಕಲ್ ಕಿಟ್, ಪ್ಲಂಬಿಂಗ್ ಕಿಟ್, ಕಾರ್ಪೆಂಟರ್ ಕಿಟ್, ಮಡಿವಾಳ ಬಂಧುಗಳಿಗೆ ಇಸ್ತ್ರಿ ಪೆಟ್ಟಿಗೆ, ಸವಿತಾ ಸಮಾಜದ ಬಂಧುಗಳಿಗೆ ಆಯಾ ವೃತ್ತಿ ನಿರತ ಕಿಟ್​ಗಳು, ಹೂ-ಹಣ್ಣು ಮಾರುವವರಿಗೆ ಸೈಕಲ್​ಗಳು, ನಿರುದ್ಯೋಗಿಗಳಿಗೆ ಕಾರು, ಆಟೋ, ಲಗೇಜ್ ವಾಹನ ಕೊಳ್ಳಲು ಸಬ್ಸಿಡಿ, ಹನುಮಂತನಗರ ವಾರ್ಡಿನಲ್ಲಿ ಸುಮಾರು 15 ಜನ ಅಂಗವಿಕಲರಿಗೆ ದ್ವಿಚಕ್ರ ವಾಹನವನ್ನು ಕೊಡಿಸಿದ್ದಾರೆ.

    ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಪಿ.ಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ, ಗುರುತಿನ ಚೀಟಿ ಹಾಗೂ ನಿರುದ್ಯೋಗಿ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಹಾಗೂ ಹೊಲಿಗೆ ಯಂತ್ರ ವಿತರಣೆ, ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಿಬಿಎಂಪಿ ವತಿಯಿಂದ ಸಹಾಯ ಹಸ್ತ, ಸುಮಾರು 50 ಲ್ಯಾಪ್​ಟಾಪ್​ಗಳು, ಕಾಲೇಜು ಶುಲ್ಕ ಮರುಪಾವತಿ, ಕ್ಷೇತ್ರದಲ್ಲಿ ಅನಾರೋಗ್ಯ ಪೀಡಿತರಿಗೆ ಮೆಡಿಕಲ್ ಬಿಲ್ ಮರುಪಾವತಿ, ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಮಾರ್ಗದರ್ಶನದಲ್ಲಿ ಹನುಮಂತನಗರ ವಾರ್ಡಿನ ಈಶಾನ್ಯಮುಕ್ತಿ ಗಣಪತಿ ದೇವಸ್ಥಾನದ ಆವರಣದಲ್ಲಿ 3,700 ಜನರಿಗೆ ಉಚಿತವಾಗಿ ಆಯುಷ್​ವಾನ್ ಭಾರತ್ ಹೆಲ್ತ್ ಕಾರ್ಡ್ ಮಾಡಿಸಿಕೊಟ್ಟಿದ್ದಾರೆ. ಹನುಮಂತನಗರದ ವಾರ್ಡಿನಲ್ಲಿ ಸ್ವಂತ ಮನೆಯನ್ನೇ ಕಚೇರಿಯನ್ನಾಗಿ ಪರಿವರ್ತಿಸಿ ಸಾರ್ವಜನಿಕರ ಸೇವೆಗೆ ಮೀಸಲಿಟ್ಟಿದ್ದಾರೆ.

    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಈ-ಶ್ರಮ್ ಕಾರ್ಡ್, ಹೊಸ ಮತದಾರರ ಚೀಟಿ, ತಿದ್ದುಪಡಿ ಮಾಡಿಸಿಕೊಟ್ಟಿದ್ದಾರೆ ಅದಲ್ಲದೆ ಅರ್ಹ ಪಲಾನುಭವಿಗಳನ್ನು ಗುರುತಿಸಿ ಬಿಪಿಎಲ್, ರೇಷನ್ ಕಾರ್ಡ್, ವಯೋವೃದ್ಧರಿಗೆ ಪಿಂಚಣಿ, ವಿಧವಾ ವೇತನ, 40 ವರ್ಷ ತುಂಬಿದ್ದರೂ ಮದುವೆಯಾಗದ ಮಹಿಳೆಯರಿಗೆ ಮನಸ್ವಿನಿ ಪಿಂಚಣಿ ಮಾಡಿಕೊಟ್ಟಿರುತ್ತಾರೆ, ಕ್ಷೇತ್ರದ ನಿರುದ್ಯೋಗಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳಲು ಹಲವು ನಿಗಮ ಮಂಡಳಿಯಿಂದ ಸಾಲ ಸೌಲಭ್ಯವನ್ನು ಕೊಡಿಸಿದ್ದಾರೆ. ಈ ಎಲ್ಲ ಸಮಾಜಮುಖಿ ಕೆಲಸ ಕಾರ್ಯಗಳನ್ನು ಶಾಸಕ ರವಿ ಸುಬ್ರಮಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಮಾರ್ಗದರ್ಶನದಲ್ಲಿ ಮಾಡಿಕೊಂಡು ಬಂದಿದ್ದಾರೆ.

    ನನ್ನಂತಹ ಎಲೆಮರೆಯ ಕಾಯಿಗಳನ್ನು ಗುರುತಿಸಿ ಪ್ರತಿಷ್ಠಿತ ವಿಜಯರತ್ನ ಅವಾರ್ಡ್ ಅನ್ನು ನೀಡಲಾಗಿದೆ. ತುಂಬಾ ಸಂತೋಷವಾಗಿದೆ. ಈ ಪ್ರಶಸ್ತಿಯಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಮುಂದೆ ಇನ್ನು ಹೆಚ್ಚಿನ ಸಮಾಜಮುಖಿ ಕೆಲಸ ಮಾಡಲು ಸ್ಪೂರ್ತಿ ಸಿಕ್ಕಿದೆ.

    | ಎಂ. ಚಂದ್ರಶೇಖರ್ ಬಸವನಗುಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ, ಒಬಿಸಿ ಮೋರ್ಚಾದ ಅಧ್ಯಕ್ಷ

    ಕರೋನಾ ವೇಳೆ ಕರುಣೆ ತೋರಿದ ಚಂದ್ರಣ್ಣ
    ಎಲ್ಲಕ್ಕಿಂತ ಮಿಗಲಾಗಿ ಕರೊನಾ ಲಾಕ್​ಡೌನ್ ಸಂದರ್ಭದ ಮೊದಲನೇ ಅಲೆ ಹಾಗೂ ಎರಡನೇ ಅಲೆಯಲ್ಲಿ ಯುವಕರ ತಂಡ ಕಟ್ಟಿಕೊಂಡು ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ನೀಡಿದಂತಹ ದಿನಸಿ ಕಿಟ್​ಗಳನ್ನು ಜನರಿಗೆ ತಲುಪಿಸಿದ್ದಾರೆ. ಒಂದನೇ ಅಲೆಯ ಸಂದರ್ಭದಲ್ಲಿ 38 ಸಾವಿರಕ್ಕೂ ಅಧಿಕ ದಿನಸಿ ಕಿಟ್, 2ನೇ ಅಲೆಯಲ್ಲಿ 28 ಸಾವಿರಕ್ಕೂ ಅಧಿಕ ದಿನಸಿ ಕಿಟ್​ಗಳನ್ನು ಕ್ಷೇತ್ರದ ಬಡವರಿಗೆ ಕಾರ್ಯಕರ್ತರ ಜತೆಗೂಡಿ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ನಾನು ಮಾಡುತ್ತಿರುವ ಪ್ರತಿಯೊಂದು ಸಮಾಜಮುಖಿ ಕೆಲಸಕ್ಕೆ ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ, ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕರ ಸಹೋದರರಾದ ಎಲ್.ಎ.ಚಂದ್ರಶೇಖರ್ ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ಮಾರ್ಗದರ್ಶನ, ಸಹಾಯ, ಸಹಕಾರದಿಂದ ಜನರಿಗೆ ನನ್ನ ಕೈಲಾದ ಅಳಿಲು ಸೇವೆ ಮಾಡುತ್ತಿದ್ದೇನೆ ಎನ್ನುತ್ತಾರೆ ಚಂದ್ರಶೇಖರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts